ಮಡಿಕೇರಿ, ನ. ೪: ಮಳೆ ಕೊರತೆಯಿಂದ ಸಂಭವಿಸಿದ ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಸಂಬAಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವ ರಾಯಸ್ವಾಮಿ ಭರವಸೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಕೃಷಿ ಇಲಾಖೆ ಪ್ರಗತಿಪರಿಶೀಲನೆ ನಡೆಸಿದ ಬಳಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ೫ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದು, ಕೊಡಗಿನಲ್ಲಿ ರೂ. ೮೩೮ ಲಕ್ಷ ಪರಿಹಾರ ಸೇರಿದಂತೆ ರಾಜ್ಯದ ರೂ. ೧೭ ಸಾವಿರ ಕೋಟಿ ಪರಿಹಾರಕ್ಕೆ ಕೇಂದ್ರದ ಗಮನವನ್ನು ಸೆಳೆಯಲಾಗಿದೆ. ತಾನು ಹಾಗೂ ಕಂದಾಯ ಸಚಿವರು ಕೇಂದ್ರದ ಸಚಿವರನ್ನು ಭೇಟಿಯಾಗಲು ತೆರಳಿದ ಸಂದರ್ಭ ಅವರ ಭೇಟಿ ಸಾಧ್ಯವಾಗಿಲ್ಲ. ನಂತರ ಕೇಂದ್ರದ ಸಚಿವಾಲಯಗಳನ್ನು ಭೇಟಿಯಾಗಿ ರಾಜ್ಯದ ವಿಸ್ತಾರ ಚಿತ್ರಣ ನೀಡಿದ ಬಳಿಕ ಕೇಂದ್ರದ ಸಮಿತಿ ಆಗಮಿಸಿ ರಾಜ್ಯದ ೧೧ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದೆ. ವಿಳಂಬ ನೀತಿ ಮೂಲಕ ರಾಜ್ಯವನ್ನು ನಿರ್ಲ್ಯಕ್ಷಿಸಿದೆ ಎಂದು ಆರೋಪಿಸಿದರು.

ಬರ ಘೋಷಣೆಯಾಗುತ್ತಿದಂತೆ ಕೇಂದ್ರ ನರೇಗಾ ಯೋಜನೆಯ ಕೆಲಸದ ದಿನವನ್ನು ೧೦೦ ರಿಂದ ೧೫೦ಕ್ಕೆ ಹೆಚ್ಚಿಸಬೇಕಾಗಿತ್ತು. ಆ ಕೆಲಸವನ್ನು ಮಾಡಿಲ್ಲ. ನರೇಗಾ ಯೋಜನೆಯಡಿ ರಾಜ್ಯಕ್ಕೆ ರೂ. ೬೦೦ ಕೋಟಿ ಹಣ ಕೇಂದ್ರ ಸರಕಾರ ನೀಡಲು ಬಾಕಿ ಉಳಿಸಿಕೊಂಡಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿಯೂ ರಾಜ್ಯದ ಪರ ಕೇಂದ್ರ ನಿಂತಿಲ್ಲ. ಕರ್ನಾಟಕದ ಬಗ್ಗೆ ಕೇಂದ್ರಕ್ಕೆ ಕಾಳಜಿ ಇಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಅನಾವೃಷ್ಟಿಯಿಂದ

ರೂ. ೮೩೮ ಲಕ್ಷ ನಷ್ಟ

ಪತ್ರಿಕಾಗೋಷ್ಠಿಗೂ ಮುನ್ನ ನಡೆದ ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವರು ಪಾಲ್ಗೊಂಡು ಚರ್ಚೆ ನಡೆಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ ಮಾತನಾಡಿ, ಮಳೆ ಕೊರತೆಯಿಂದ ಒಟ್ಟು ೯೩೧ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ ಮುಸುಕಿನ ಜೋಳ ಬೆಳೆ ನಷ್ಟದ ಸಂಬAಧ ರೂ. ೮೩೮ ಲಕ್ಷ ಹಣಕ್ಕೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಗತ್ಯ ರಸಗೊಬ್ಬರ ದಸ್ತಾನಿಡ ಲಾಗಿದ್ದು, ಬಿತ್ತನೆ ಬೀಜವನ್ನು ಸಮರ್ಪಕವಾಗಿ ವಿತರಿಸಲಾಗಿದೆ. ಮುಂಗಾರು ಹಂಗಾಮಿನ ಬೆಳೆ ಸಮೀಪದ ಶೇ. ೯೦ ರಷ್ಟು ಮುಗಿದಿದೆ. ಪ್ರಧಾನ ಮಂತ್ರಿ ಫಸಲು ಭಿಮಾ ಯೋಜನೆ ಸಂಬAಧಿಸಿದAತೆ ನೋಂದಾಣಿಗೊAಡಿದ್ದ ೧೫೧ ರೈತರ ಪೈಕಿ ೫೧ ಮಂದಿಗೆ ಬೆಳೆ ವಿಮೆ ಪರಿಹಾರ ವಿತರಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ ೪೧,೪೯೪ ಮಂದಿಗೆ ಇ-ಕೆವೈಸಿ ಮಾಡಲಾಗಿದೆ. ೪೨೦೪ ರೈತರು ಪ್ರಕ್ರಿಯೆಯಿಂದ ಬಾಕಿ ಉಳಿದಿದ್ದಾರೆ. ರಾಜ್ಯ ವಲಯದ ಪ್ರಗತಿಯಲ್ಲಿ ಕೃಷಿ ಇಲಾಖೆ ಜಿಲ್ಲೆಯಲ್ಲಿ ಶೇ. ೮೮ ಪ್ರಗತಿ, ಕೇಂದ್ರ ಪುರಸ್ಕೃತ ಯೋಜನೆಯಡಿ ಶೇ. ೯೦, ಜಲಾನಯನ ಕಾರ್ಯಕ್ರಮಗಳಲ್ಲಿ ಶೇ ೪೬ ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿದರು.

ರೈತರ ಆತ್ಮಹತ್ಯೆ ೨೯ ಪ್ರಕರಣಗಳು ವರದಿಯಾಗಿದ್ದು, ೨೮ ಪ್ರಕರಣಕ್ಕೆ ಪರಿಹಾರ ವಿತರಿಸಲಾಗಿದೆ. ಒಂದು ಪ್ರಕರಣಕ್ಕೆ ಪರಿಹಾರ ಸಂಬAಧ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಕೃಷಿ ಇಲಾಖೆಯಲ್ಲಿ ಶೇ ೮೦ ರಷ್ಟು ಹುದ್ದೆಗಳು ಖಾಲಿ ಇವೆ. ತಾಂತ್ರಿಕ ವಿಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂದು ಗಮನ ಸೆಳೆದರು. ಮಂಡ್ಯ ಶಾಸಕ ರವಿಕುಮಾರ್, ರಾಜ್ಯ ಕೃಷಿ ಇಲಾಖೆ ನಿರ್ದೇಶಕ ಮಿತ್ರ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಬಿ.ಎನ್. ವೀಣಾ ಹಾಜರಿದ್ದರು.