ಮಡಿಕೇರಿ, ನ.೫ : ಮಕ್ಕಳಿಗೆ ಕನ್ನಡ ಭಾಷೆಯ ಮಹತ್ವ ತಿಳಿಸುವಲ್ಲಿ ಮಹಿಳೆಯರು ಪ್ರದಾನ ಪಾತ್ರ ವಹಿಸಿದ್ದು, ಮನೆಯಲ್ಲಿ ಕನ್ನಡ ಭಾಷೆಯ ಶಿಕ್ಷಕಿಯರಂತೆ ಮಕ್ಕಳಿಗೆ ಕನ್ನಡದ ಹಿರಿಮೆ ತಿಳಿಸುವ ಕೆಲಸವನ್ನು ಮಹಿಳೆಯರು ಮಾಡಬೇಕಾಗಿದೆ ಎಂದು ಹಿರಿಯ ಸಾಹಿತಿ, ವಕೀಲ ಬಾಲಸುಬ್ರಮಣ್ಯ ಕಂಜರ್ಪಣೆ ಕರೆ ನೀಡಿದರು.
ನಗರದ ಓಂಕಾರ ಸದನದಲ್ಲಿ ಸಮರ್ಥ ಕನ್ನಡಿಗ ಸಂಸ್ಥೆ ವತಿಯಿಂದ ಆಯೋಜಿತ ನಮ್ಮ ವೇದಿಕೆ ನಿಮ್ಮ ಪ್ರತಿಭೆ ಕನ್ನಡ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಇಂಗ್ಲೀಷ್ ಮಾಧ್ಯಮ ದಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಮನೆಯಲ್ಲಿಯಾದರೂ ತಾಯಂದಿರು ಕನ್ನಡದಲ್ಲಿ ಮಾತ ನಾಡುತ್ತಿರಬೇಕು. ಈ ಮೂಲಕ ಭಾಷೆಯನ್ನು ಮಕ್ಕಳಿಗೆ ಕಲಿಸುವಂತಾಗಬೇಕು. ಮಹಿಳೆಯರು ಮನೆಯಲ್ಲಿ ಪ್ರದಾನ ಪಾತ್ರ ವಹಿಸುವುದರಿಂದಾಗಿ ಸುಲಭವಾಗಿ ಮಕ್ಕಳಲ್ಲಿ ಕನ್ನಡದ ಮಹತ್ವ ಹಾಸುಹೊಕ್ಕಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಗಳಲ್ಲಿ ಪಾಶ್ಚಾತ್ಯ ಗೀತೆಗಳನ್ನು ಹಾಡಿಸುವ ಬದಲಿಗೆ ಕನ್ನಡ ಗೀತಗಾಯನಕ್ಕೆ ಪ್ರಾಶಸ್ತö್ಯ ನೀಡಿ ಎಂದು ಸಲಹೆ ನೀಡಿದ ಅವರು, ಕನ್ನಡ ಭಾಷೆ, ಸಂಸ್ಕೃತ ಸಂಬAಧಿತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳಲ್ಲಿನ ಭಾಷಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಶಾದಾಯಕ ನುಡಿಗಳನ್ನು ಆಡಿ ಮಕ್ಕಳ ಪ್ರತಿಭೆಯನ್ನು ಪ್ರಶಂಸಿಸುವುದು ಮುಖ್ಯ ಎಂದರು.
ಕನ್ನಡ ಪರ ಕಾರ್ಯಕ್ರಮಗಳು ಎಲ್ಲಾ ವರ್ಗದವರು ಪಾಲ್ಗೊಳ್ಳು ವಂತಹ ಮೌಲ್ಯಯುತ ಕಾರ್ಯಕ್ರಮ ಗಳಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದ ಈ ಒಂದು ವರ್ಷ ಕೊಡಗಿನಲ್ಲಿಯೂ ಉತ್ತಮ ಕಾರ್ಯಕ್ರಮಗಳು ಮೂಡಿಬರು ವಂತಾಗಲಿ ಎಂದು ಬಾಲಸುಬಮಣ್ಯ ಕಂಜರ್ಪಣೆ ಅಭಿಲಾಷೆ ವ್ಯಕ್ತಪಡಿಸಿದರು.
ಹಿಂದಿನ ಕಾಲದ ಪಠ್ಯದಲ್ಲಿ ಪ್ರ - ಪ್ರ ಎಂಬ ವಿಭಾಗ ಇರುತ್ತಿತ್ತು. ಅಂದರೆ ಪ್ರಶ್ನೆ - ಪ್ರಕಾರ ಎಂದರ್ಥ ಇತ್ತು. ಈಗಿನ ಕಾಲದಲ್ಲಿ ಪ್ರ- ಪ್ರ- ಪ್ರ- ಪ್ರ ಎಂದರೆ ಪ್ರಚಾರ, ಪ್ರತಿಷ್ಟೆ, ಪ್ರಸಿದ್ದಿ, ಪ್ರಶಸ್ತಿ ೩ಐದನೇ ಪುಟಕ್ಕೆ (ಮೊದಲ ಪುಟದಿಂದ) ಎಂದರ್ಥ ಬರುವಂತಾಗಿದೆ. ಎಲ್ಲರೂ ಈ ನಾಲ್ಕು ಪ್ರ ಗಳ ಹಿಂದೆ ಬಿದ್ದಂತಿದೆ ಎಂದೂ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅಭಿಪ್ರಾಯಪಟ್ಟರು.
ಹಾಸನದ ಉಪನ್ಯಾಸಕಿ ಉಮಾನಾಗರಾಜ್ ಮಾತನಾಡಿ, ಯುವಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ಸಮರ್ಥ ಕನ್ನಡಿಗರು ಸಂಸ್ಥೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಸಾಹಿತ್ಯ ಪರಂಪರೆಗೆ (ಮೊದಲ ಪುಟದಿಂದ) ಎಂದರ್ಥ ಬರುವಂತಾಗಿದೆ. ಎಲ್ಲರೂ ಈ ನಾಲ್ಕು ಪ್ರ ಗಳ ಹಿಂದೆ ಬಿದ್ದಂತಿದೆ ಎಂದೂ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅಭಿಪ್ರಾಯಪಟ್ಟರು.
ಹಾಸನದ ಉಪನ್ಯಾಸಕಿ ಉಮಾನಾಗರಾಜ್ ಮಾತನಾಡಿ, ಯುವಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ಸಮರ್ಥ ಕನ್ನಡಿಗರು ಸಂಸ್ಥೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಸಾಹಿತ್ಯ ಪರಂಪರೆಗೆ ವರ್ಷಗಳಿಂದ ರಾಜ್ಯಮಟ್ಟದ ಸಮರ್ಥ ಕನ್ನಡಿಗ ಸಂಸ್ಥೆಯು ಕೊಡಗಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಸಂಬAಧಿತ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರುತ್ತಿದೆ. ಸರ್ಕಾರದಿಂದ ಯಾವುದೇ ಅನುದಾನ ಇಲ್ಲದೇ ಸ್ಪರ್ಧಿಗಳಿಂದಲೂ ಪ್ರವೇಶ ಶುಲ್ಕ ಪಡೆಯದೇ ಸಮರ್ಥ ಕನ್ನಡಿಗ ಸಂಸ್ಥೆ ಯಲ್ಲಿರುವ ಸದಸ್ಯೆಯರು ಸ್ವಂತ ಹಣ ದಿಂದ ಮತ್ತು ದಾನಿಗಳ ನೆರವಿನಿಂದ ವೈವಿಧ್ಯಮಯ ಕಾರ್ಯಕ್ರಮ ರೂಪಿಸುತ್ತಾ ಬಂದಿದ್ದಾರೆ. ಸಮರ್ಥ ಕನ್ನಡಿಗರು ಸಂಸ್ಥೆಯ ಸಮಾಜಮುಖಿ ಕಾರ್ಯಗಳು ಜನರ ಮೆಚ್ಚುಗೆಗೆ ಪಾತ್ರವಾಗಿರುವುದು ಸಂಸ್ಥೆಯ ಹೆಗ್ಗುರುತಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಸಾಹಿತಿ ಅಂಬೆಕಲ್ ಸುಶೀಲ ಕುಶಾಲಪ್ಪ, ವೀರಾಜಪೇಟೆಯ ಲೇಖಕಿ ಪುಪ್ಪಲತ ಶಿವಪ್ಪ ಸಮರ್ಥ ಕನ್ನಡಿಗರು ಸಂಸ್ಥೆಯ ರಾಜ್ಯ ಸಂಚಾಲಕರಾದ ಆನಂದ್ ದೆಗ್ಗನಹಳ್ಳಿ ಹಾಗೂ ಹೇಮಂತ್ ಹಾಜರಿದ್ದರು. ಸಮರ್ಥ ಕನ್ನಡಿಗರು ಸಂಸ್ಥೆಯ ಚಿತ್ರಾ ಆರ್ಯನ್ ಪ್ರಾರ್ಥಿಸಿ, ಪ್ರೀತಾ ಕೃಷ್ಣ ಸ್ವಾಗತಿಸಿ, ಗಿರಿಜಾಮಣಿ ವಂದಿಸಿ, ಪ್ರತಿಮಾ ಹರೀಶ್ ರೈ ನಿರೂಪಿಸಿದರು.
ಕೊಡಗಿನ ವಿವಿಧ ಶಾಲಾ ವಿದ್ಯಾರ್ಥಿಗಳು, ವಿದ್ಯಾರ್ಥಿ ತಂಡಗಳಿAದ ಛದ್ಮವೇಷ, ನೃತ್ಯ, ಮಹಿಳಾ ತಂಡಗಳಿAದ ಸಮೂಹ ಗಾಯನ, ಸಮೂಹ ನೃತ್ಯ ಸ್ಪರ್ಧೆಗಳು ಆಯೋಜಿಸಲಟ್ಟವು.