ಮಡಿಕೇರಿ, ನ. ೫: ಡಿ.೩೧ರಂದು ಸ್ಟುವರ್ಟ್ ಹಿಲ್ನಲ್ಲಿ ಕಟ್ಟಡ ಕೆಲಸ ಸಂದರ್ಭ ಬರೆಕುಸಿದು ಸಾವನ್ನಪ್ಪಿದ್ದ ಮೂವರು ಕಾರ್ಮಿಕರ ಮೃತದೇಹಗಳನ್ನು ಅವರ ಸಂಬAಧಿಕರು ಜಿಲ್ಲಾಸ್ಪತ್ರೆಯ ಶವಾಗಾರದಿಂದ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಘಟನೆ ನಡೆದ ಮರುದಿನ ಮೃತರ ಪೈಕಿ ಬಸವರಾಜ್ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಬಸರಕೋಡು ಗ್ರಾಮದವರಾಗಿದ್ದು, ಲಿಂಗಪ್ಪ ಗದಗ ಜಿಲ್ಲೆಯ ಮುಳಗುಂದ ತಾಲೂಕಿನ ಬಸವನಪುರದವರು ಎಂಬುದನ್ನು ಪೊಲೀಸರು ಪತ್ತೆಹಚ್ಚಿ ಸಂಬAಧಿಕರಿಗೆ ಮಾಹಿತಿ ನೀಡಿದ್ದರು. ಆದರೆ, ಆನಂದ ಎಂಬವರ ಯಾವುದೇ ಸಮರ್ಪಕ ಮಾಹಿತಿ ಸಿಕ್ಕಿರಲಿಲ್ಲ. ಕೊನೆಗೂ ತನಿಖೆಯ ಮೂಲಕ ಆನಂದ ಹಾವೇರಿ ಜಿಲ್ಲೆಯ ಹಾನಗಲ್ಲು ತಾಲೂಕಿನ ಶೃಂಗೇರಿ ಗ್ರಾಮದವರು ಎಂಬುದನ್ನು ಪತ್ತೆಹಚ್ಚಿದ ಪೊಲೀಸರು ಅವರ ಸಂಬAಧಿಕರಿಗೂ ಮಾಹಿತಿ ನೀಡಿದ್ದರು. ಮೂವರು ಮೃತ ಕಾರ್ಮಿಕರ ಸಂಬAಧಿಕರು ಆಗಮಿಸಿ, ಶವಗಳನ್ನು ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.