ಕೂಡಿಗೆ, ನ. ೫: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಅಧ್ಯಕ್ಷೆ ಅರುಣ ಕುಮಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ೨೦೨೨-೨೩ನೇ ಸಾಲಿನ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಬಗ್ಗೆ ಮತ್ತು ೧೫ನೇ ಹಣಕಾಸು ಯೋಜನೆಯ ಕಾಮಗಾರಿಗಳ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು.

ಸಭೆಯಲ್ಲಿ ಹಾಜರಿದ್ದ ಅನೇಕ ಗ್ರಾಮಸ್ಥರು ಕಾಮಗಾರಿಗಳು ನಡೆದ ಬಗ್ಗೆ ಹಾಗೂ ಖರ್ಚು ವೆಚ್ಚದ ಬಗ್ಗೆ ಹಳೆಗೋಟೆ ಗ್ರಾಮದ ಮಹದೇವ, ಬಿಕ್ಷೇಶ್, ಬಸಪ್ಪ ಜಯಣ್ಣ ದೇವರಾಜ್ ಸಭೆಯಲ್ಲಿ ಸಮರ್ಪಕವಾದ ಮಾಹಿತಿಯನ್ನು ಬಯಸಿದರು. ನಂತರ ಕಾಮಗಾರಿಗಳು ನಡೆದ ವರದಿ ಆಧಾರದಲ್ಲಿ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ ಎಂಬ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ಅದಕ್ಕೆ ಸಂಬAಧಿಸಿದAತೆ ಸಾಮಾಜಿಕ ಲೆಕ್ಕ ಪರಿಶೋಧನಾ ಕಾರ್ಯಕ್ರಮದ ಅಧಿಕಾರಿ ದಿನೇಶ್ ಸಭೆಯ ನಂತರ ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳು ಮತ್ತು ೧೫ನೇ ಹಣಕಾಸು ಯೋಜನೆಗೆ ಸಂಬAಧಿಸಿದAತೆ ವಿವಿಧ ಉಪ ಗ್ರಾಮಗಳಾದ ಮರೂರು, ಹಳೆಗೋಟೆ, ಹುಲುಸೆ, ೬ನೇ ಹೊಸಕೋಟೆ ವ್ಯಾಪ್ತಿಯ ಕುಡಿಯುವ ನೀರಿನ ವ್ಯವಸ್ಥೆ ದುರಸ್ತಿಗೆ ಸಂಬAಧಿಸಿದAತೆ ಕಾಮಗಾರಿಗಳು ನಡೆದ ವಿಷಯಗಳ ಬಗ್ಗೆ ಚರ್ಚೆಗಳು ನಡೆದ ಬಗ್ಗೆ ಗ್ರಾಮಸ್ಥರಿಂದ ಅನುಮೋದನೆ ಪಡೆಯಲಾಯಿತು.

ಕಾರ್ಯಕ್ರಮದ ನೋಡೆಲ್ ಅಧಿಕಾರಿಯಾಗಿ ಹೆಬ್ಬಾಲೆ ಪಶು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆರ್. ಸಿಂಧೆ. ತಾಲೂಕು ಮಟ್ಟದ ಸಾಮಾಜಿಕ ಲೆಕ್ಕ ಪರಿಶೋಧನಾ ಕಾರ್ಯಕ್ರಮದ ಅಧಿಕಾರಿ ದಿನೇಶ್, ಗ್ರಾ.ಪಂ. ಉಪಾಧ್ಯಕ್ಷೆ ಲತಾಕುಮಾರಿ, ಸದಸ್ಯರಾದ ಶಿವನಂಜಪ್ಪ, ಚಂದ್ರಶೇಖರ್ ಜೋಗಿ, ಪರಮೇಶ್, ಅಭಿವೃದ್ಧಿ ಅಧಿಕಾರಿ ಅರುಣ್ ಭಾಸ್ಕರ್, ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಸಹಾಯಕ ಇಂಜಿನಿಯರ್ ಕಿಶೋರ್ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.