ಮಡಿಕೇರಿ, ನ. ೫: ನಮ್ಮ ಸಂಸ್ಕೃತಿಯೊಳಗಿನ ಮೂಲಾಂಶಗಳು ದಾಖಲಾತಿ ಗೊಳಿಸುವ ಅಗತ್ಯ ಇದೆ ಎಂದು ಖ್ಯಾತ ಚಲನಚಿತ್ರೋದ್ಯಮಿ ಪ್ರಕಾಶ್ ಕೆ. ಪ್ರತಿಪಾದಿಸಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಇಂಗ್ಲಿಷ್ (ಯುಜಿ), ಸಮಾಜಶಾಸ್ತç ಸಮಾಜ ಕಾರ್ಯ, ಕನ್ನಡ ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ ‘‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್’’ ಸಾಕ್ಷö್ಯಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಾಕ್ಷö್ಯಚಿತ್ರವನ್ನು ಅಂತರರಾಷ್ಟಿçÃಯ ಮಟ್ಟದಲ್ಲಿ ಚಿತ್ರೋತ್ಸವಕ್ಕೆ ಕಳುಹಿಸುವಂತೆ ಸಲಹೆ ನೀಡಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ದೇವದಾಸಿ ಪದ್ಧತಿ ಕುರಿತು ಬೆಳಕು ಚೆಲ್ಲುವ ಕೆಲಸ ಸಾಕ್ಷö್ಯಚಿತ್ರದ ಮೂಲಕ ಆಗಿದೆ ಎಂದರು.

ಅಂತರ್ ಶಿಸ್ತೀಯ ಕೇಂದ್ರಿತ ಅಧ್ಯಯನಗಳು ಇತ್ತೀಚಿನ ದಿನಗಳಲ್ಲಿ ಸಂಶೋಧನಾ ವಲಯದಲ್ಲಿ ವ್ಯಾಪಕವಾಗಿ ನಡೆಯುತ್ತಿವೆ. ಪೂರ್ಣಿಮಾ ರವಿ ಅವರು ಇಂಗ್ಲಿಷ್ ಸಾಹಿತ್ಯ ಕೃತಿಗಳಲ್ಲಿ ದೇವದಾಸಿಗಳ ಬದುಕಿನ ಕುರಿತು ಸಾಹಿತ್ಯಕ ಅಧ್ಯಯನ ಕೈಗೊಳ್ಳುವ ಸಂದರ್ಭದಲ್ಲಿ ದಾಖಲಾತಿ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಈ ಸಾಕ್ಷö್ಯಚಿತ್ರವನ್ನು ತಯಾರಿಸಿದ್ದಾರೆ. ಅವರು ಸಾಕಷ್ಟು ಸಮಯ ಮತ್ತು ಹಣವನ್ನು ಈ ಹಿನ್ನೆಲೆಯಲ್ಲಿ ವ್ಯಯಿಸಿದ್ದಾರೆ ಎಂದು ಸಂಶೋಧನಾ ಮಾರ್ಗದರ್ಶಕ ಡಾ. ನಯನ ಕಶ್ಯಪ ಅಭಿಪ್ರಾಯಪಟ್ಟರು.

ಸಾಕ್ಷö್ಯಚಿತ್ರ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಪಿಎಚ್.ಡಿ ಸಂಶೋಧನೆಯಿAದ ಆಗ ಬಹುದಾದ ಪ್ರಯೋಜನ ಏನು? ಎಂಬ ಪ್ರಶ್ನೆಯೇ ನನ್ನಲ್ಲಿ ಈ ಸಾಕ್ಷö್ಯಚಿತ್ರ‍್ರ ತಯಾರಿಕೆಗೆ ಅನುಮಾಡಿಕೊಟ್ಟಿತು. ಸಾಕ್ಷö್ಯಚಿತ್ರದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ನಾನು ಸಾಕ್ಷö್ಯಚಿತ್ರಕ್ಕೆ ಆಯ್ಕೆ ಮಾಡಿಕೊಂಡ ವಿಷಯವು ಸೂಕ್ಷö್ಮ ವಿಚಾರವಾದ ಕಾರಣದಿಂದ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಳ್ಳಲಾಯಿತು. ಸರಕಾರ ಮತ್ತು ಸಮಾಜ ದೇವದಾಸಿಯರ ಬದುಕಿಗೆ ಆಶಾಕಿರಣವಾಗಬೇಕಾದ ಅಗತ್ಯ ಇದೆ. ಈ ಸಾಕ್ಷö್ಯಚಿತ್ರದ ಮೂಲಕ ಸಾಮಾಜಿಕ ವ್ಯವಸ್ಥೆ ಬದಲಾಗಬೇಕು ಎಂಬ ಅಭಿಲಾಷೆ ನನ್ನದು ಎಂದು ಅಭಿಪ್ರಾಯಪಟ್ಟರು.

ದೇವದಾಸಿ ಪದ್ಧತಿಯ ಚಾರಿತ್ರಿಕ ಹಿನ್ನೆಲೆಯನ್ನು ಕಾಲೇಜಿನ ಇಂಗ್ಲಿಷ್ ವಿಭಾಗದ ಸಂಯೋಜಕ ಪೂಣಚ್ಚ ತಿಳಿಸಿಕೊಟ್ಟರು. ಜಮದಗ್ನಿ ಮುನಿ ಹಾಗೂ ರೇಣುಕೆಯ ಚರಿತ್ರೆಯ ಮೂಲಕ ಪೌರಾಣಿಕ ವಿನ್ಯಾಸದೊಳಗೆ ಪದ್ಧತಿಯೊಂದರ ವಿಭಿನ್ನ ನೋಟವನ್ನು ವಿವರಿಸಿಕೊಟ್ಟರು.

ಸಾಮಾಜಿಕ ಅರಿವಿನ ಅಗತ್ಯ ಇದೆ. ಇಲ್ಲದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಶಿಕ್ಷಣದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಆದ್ದರಿಂದ ನಮ್ಮ ಸಾಮಾಜಿಕ ವ್ಯವಸ್ಥೆ ಬದಲಾಗಬೇಕಾಗಿದೆ. ಸಾಮಾಜಿಕ, ಧಾರ್ಮಿಕ ಸುಧಾರಣೆಗಳು ನಡೆಯ ಬೇಕಾಗಿದೆ. ಆರ್ಥಿಕವಾಗಿ ಸುಧಾರಣಾವಾದಿ ನೆಲೆಗಳು ರೂಪುಗೊಳ್ಳಬೇಕಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಅಭಿಮತ ವ್ಯಕ್ತಪಡಿಸಿದರು.