ಪೊನ್ನಂಪೇಟೆ, ನ. ೬: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ನ ೨೦೨೩-೨೦೨೬ರ ಸಾಲಿನ ಆಡಳಿತ ಮಂಡಳಿಯ ನೂತನ ಕೋಶಾಧಿಕಾರಿಯಾಗಿ ಕೊಟ್ಟಮುಡಿ ಪಾಲೂರು ಗ್ರಾಮದ ಹರಿಶ್ಚಂದ್ರ ಎ. ಹಂಸ, ಜಂಟಿ ಕಾರ್ಯದರ್ಶಿಯಾಗಿ ಅಂಬಟ್ಟಿಯ ನಿವೃತ್ತ ಯೋಧ ಕರತೊರೆರ ಕೆ. ಮುಸ್ತಫ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಕೆದಮುಳ್ಳೂರು ಗ್ರಾ.ಪಂ. ಸದಸ್ಯರಾದ ಗುಂಡಿಗೆರೆ ಕೊಟ್ಟೋಳಿ ಗ್ರಾಮದ ಮೀತಲತಂಡ ಎಂ. ಇಸ್ಮಾಯಿಲ್ ಅವರನ್ನು ಅವಿರೋಧವಾಗಿ ನೇಮಕಗೊಳಿಸಲಾಗಿದೆ.

ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರ ಅಧ್ಯಕ್ಷತೆಯಲ್ಲಿ ವೀರಾಜಪೇಟೆಯ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಲ್ಲದೆ, ಕಳೆದ ಮಹಾಸಭೆಯ ತೀರ್ಮಾನದಂತೆ, ಒಟ್ಟು ೮ ಮಂದಿ ಕೆ.ಎಂ.ಎ. ಸದಸ್ಯರನ್ನು ನೂತನ ಆಡಳಿತ ಮಂಡಳಿಗೆ ಅವಿರೋಧವಾಗಿ ನಾಮನಿರ್ದೇಶನಗೊಳಿಸಲಾಯಿತು. ನಿವೃತ್ತ ಸೈನಿಕರಾದ ಆಲೀರ ಬಿ. ಅಬ್ದುಲ್ಲಾ, (ಬೇಗೂರು ಮಾಪಿಳೆತೋಡು), ಪ್ರಗತಿಪರ ಕೃಷಿಕರಾದ ಕೂವಲೆರ ಹೆಚ್. ಹನೀಫ್ (ಚಾಮಿಯಾಲ), ಕಕ್ಕಬ್ಬೆ ಗ್ರಾ. ಪಂ. ಸದಸ್ಯರಾದ ಕುಂಡAಡ ಎ. ರಜಾಕ್ (ಕುಂಜಿಲ), ಕಾಫಿ ಬೆಳಗಾರರಾದ ಚೆರುಮಾನಿರ ಎ. ಅಹಮದ್ (ಕೊಳಕೇರಿ), ಸಿವಿಲ್ ಗುತ್ತಿಗೆದಾರರಾದ ಮಂದಮಾಡ ಎ.ಮುನೀರ್ (ಕಂಡAಗಾಲ), ಕಾಫಿ ಬೆಳೆಗಾರರಾದ ಕೂತಂಬಟ್ಟಿರ ಎಂ. ಮಜೀದ್ (ಎಡಪಾಲ), ಕಿಕ್ಕರೆ ಯು.ಮೊಹಮ್ಮದ್ (ಕೋಕೇರಿ), ಎರಟೆಂಡ ಹೆಚ್. ಸಂಶುದ್ದೀನ್ (ಚಿಟ್ಟಡೆ ಬೇಟೋಳಿ) ಇವರು ನೂತನ ನಿರ್ದೇಶಕರಾಗಿ ೨೦೨೩-೨೦೨೬ನೇ ಸಾಲಿನ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಸಂಸ್ಥೆಯ ವತಿಯಿಂದ ಪ್ರತಿವರ್ಷ ಆಚರಿಸಲಾಗುತ್ತಿದ್ದ ಪುತ್ತರಿಯನ್ನು ಈ ಬಾರಿ ನಿರ್ದೇಶಕರಾದ ಕೋಳುಮಂಡ ರಫೀಕ್ ಅವರ ಸಂಯೋಜಕತ್ವದಲ್ಲಿ ವೀರಾಜಪೇಟೆ ಸಮೀಪದ ಐಮಂಗಲದಲ್ಲಿ ಆಚರಿಸುವಂತೆ ನಿರ್ಧರಿಸಲಾಯಿತು.

ಸಭೆಯಲ್ಲಿ ಹಿರಿಯ ನಿರ್ದೇಶಕರಾದ ತಾ. ಪಂ. ಮಾಜಿ ಸದಸ್ಯ ಕುವೆಂಡ ವೈ. ಆಲಿ, ಹಿರಿಯರಾದ ಕೊಂಡAಗೇರಿ ಕುಪ್ಪಂದಿರ ಕೆ. ಯೂಸುಫ್ ಹಾಜಿ, ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.