ಹೆಚ್.ಕೆ.ಜಗದೀಶ್
ಗೋಣಿಕೊಪ್ಪಲು, ನ. ೬ : ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಆಗಿಂದ್ದಾಗಿಯೇ ವಿವಿಧ ರೀತಿಯ ಕಾರ್ಯಕ್ರಮಗಳು ಜಿಲ್ಲೆಯ ವಿವಿಧ ಭಾಗದಲ್ಲಿ ನಡೆಯುವಂತಾಗಬೇಕು. ಇದರಿಂದ ಆಯಾ ಭಾಗದ ಕೃಷಿಕರ, ರೈತರ ಅಭಿವೃದ್ಧಿಗೆ ಪೂರಕವಾಗುತ್ತದೆ. ಆ ನಿಟ್ಟಿನಲ್ಲಿ ಪೊನ್ನಂಪೇಟೆ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕೊಡವ ಎಜುಕೇಷನ್ ಸೊಸೈಟಿ ವತಿಯಿಂದ ರಾಜ್ಯಮಟ್ಟದ ಕೃಷಿಯಂತ್ರ ಮೇಳ ಆಯೋಜಿಸಿರುವುದು ಸಮಯೋಜಿತ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್‌ಗೌಡ ತಿಳಿಸಿದರು.
ದಕ್ಷಿಣ ಕೊಡಗಿನ ಪೊನ್ನಂಪೇಟೆ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕೊಡವ ಎಜುಕೇಷನ್ ಸೊಸೈಟಿಗೆ ೨೫ ವರ್ಷ ತುಂಬಿದ ಸವಿನೆನಪಿನಲ್ಲಿ ಡಾ.ಎಂ.ಎA. ಚಂಗಪ್ಪ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ಮೂರು ದಿನಗಳ ರಾಜ್ಯಮಟ್ಟದ ಕೃಷಿ ಯಂತ್ರ ಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾಸಕರು; ಭತ್ತದ ಕೃಷಿಯಲ್ಲಿ ನಷ್ಟ ಅನುಭವಿಸಿದರೂ ಸಾಕಷ್ಟು ರೈತರು ತಮ್ಮ ಭೂಮಿಯನ್ನು ಹದಗೊಳಿಸಿ ಭತ್ತ ಬೆಳೆಯುತ್ತಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಯಂತ್ರಗಳ ಬಳಕೆ ಅವಶ್ಯವಿದೆ. ಆ ನಿಟ್ಟಿನಲ್ಲಿ ರೈತರ ಅನುಕೂಲಕ್ಕಾಗಿ ಸಿಐಟಿ ಸಂಸ್ಥೆಯು ಯಂತ್ರಗಳ ಮೇಳ ಆಯೋಜಿಸಿ ಆ ಮೂಲಕ ರೈತರಿಗೆ ಸಹಕಾರಿಯಾಗಿರುವುದು ಶ್ಲಾಘನೀಯ ಎಂದರು.
ಸಿಐಟಿ ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಲು ಹಿರಿಯರು ಅಪಾರ ಶ್ರಮ ಪಟ್ಟಿದ್ದಾರೆ. ಇಂದು ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ಉತ್ತಮ ವಿದ್ಯಾಸಂಸ್ಥೆಗಳು ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪೊನ್ನಂಪೇಟೆಯಲ್ಲಿ ಸಿಐಟಿ ಕಾಲೇಜು ಉತ್ತಮ ರೀತಿಯಲ್ಲಿ ಬೆಳೆದು ನಿಂತಿದೆ. ಇದರಿಂದಾಗಿ ಬೆಳ್ಳಿ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದರು.
ಬೆಳ್ಳಿ ಮಹೋತ್ಸವ ಸವಿನೆನಪಿನಲ್ಲಿ ಚರ್ಚಾಗೋಷ್ಠಿ ನಡೆಯಿತು. ಪರಿಸರ ಪ್ರಿಯ ಕೃಷಿ ಪದ್ಧತಿಯಲ್ಲಿ ಸಂಪನ್ಮೂಲ ವ್ಯಕ್ತಿ ವಿಜಯ್ ಅಂಗಡಿ, ಕೊಡಗಿನಲ್ಲಿ ಅಡಿಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ ಸಂಪನ್ಮೂಲ ವ್ಯಕ್ತಿಯಾಗಿ ಎಂ.ಎA.ತೇಜಸ್ ಜೇನುಕೃಷಿಯಲ್ಲಿ ಆವಿಷ್ಕಾರಗಳು ವಿಷಯವಾಗಿ ಡಾ.ಎಂ.ಆರ್. ಕೆಂಚಾರೆಡ್ಡಿ, ಭತ್ತದ ಬೇಸಾಯದಲ್ಲಿ ತಂತ್ರಜ್ಞಾನಗಳ ಬಳಕೆ ವಿಷಯದಲ್ಲಿ ಡಾ.ಜಡೇಗೌಡ, ಕಾಫಿ ಕೃಷಿಯಲ್ಲಿ ಮತ್ತು ಇತರ ಬೆಳೆಯಲ್ಲಿ ಡ್ರೋನ್ ತಂತ್ರಜ್ಞಾನ ವಿಷಯವಾಗಿ ಗೋವಿಂದ ಬಾಲಕೃಷ್ಣರಾಜ್, ವೈಜ್ಞಾನಿಕವಾಗಿ ಕಾಂಪೋಸ್ಟ್ ತಯಾರಿಕೆ ವಿಷಯವಾಗಿ ಬಿ.ಸಿ. ಅರವಿಂದ್, ಕೃಷಿಯಲ್ಲಿ ಆಗುತ್ತಿರುವ ಸಣ್ಣಪುಟ್ಟ ತಪ್ಪುಗಳು ಹಾಗೂ ಪರಿಣಾಮಗಳು ವಿಷಯವಾಗಿ ದಿನೇಶ್ ದೇವವೃಂದ ವಿಷಯ ಮಂಡನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಟಾಟಾ ಕಾಫಿ ಕಾರ್ಯಕಾರಿ ಉಪಾಧ್ಯಕ್ಷ ಎಂ.ಬಿ.ಗಣಪತಿ ಕಾಫಿ ಬೋರ್ಡ್ ಮಾಜಿ ಅಧ್ಯಕ್ಷ ಎನ್.ಬೋಸ್ ಮಂದಣ್ಣ, ಕೊಡವ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷ ಕೆ.ಎ.ಚಿನ್ನಪ್ಪ, ಕೋಶಾಧಿಕಾರಿ ಕೆ.ಎನ್.ಉತ್ತಪ್ಪ, ಕಾರ್ಯದರ್ಶಿ ಸಿ.ಪಿ.ರಾಕೇಶ್ ಪೂವಯ್ಯ ಪ್ರಾಂಶುಪಾಲ ಡಾ.ಎಂ. ಬಸವರಾಜ್, ಬೆಳ್ಳಿ ಹಬ್ಬದ ಸಂಚಾಲಕಿ ಡಾ.ರೋಹಿಣಿ ತಿಮ್ಮಯ್ಯ, ಕೃಷಿ ಯಂತ್ರ ಮೇಳದ ಸಂಚಾಲಕ ಡಾ.ಬಿ.ಬಿ. ರಾಮಕೃಷ್ಣ, ಸೇರಿದಂತೆ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಸುಸ್ಮಿತ ಪಿ.ವಿ.ನಿರೂಪಿಸಿ, ಮೇಳದ ಸಂಚಾಲಕ ಡಾ. ಬಿ.ಬಿ.ರಾಮಕೃಷ್ಣ ಸ್ವಾಗತಿಸಿ, ಡಾ.ಸಿ.ಪ್ರಮುಖ್ ಗಣಪತಿ ವಂದಿಸಿದರು.
ಪಂಡಿತ್ ಪ್ರವೀಣ್ ಗೋಡ್ಖಿಂಡಿ ನಡೆಸಿಕೊಟ್ಟ ಫ್ಯೂಶನ್ ಮ್ಯೂಸಿಕ್ ಕಾರ್ಯಕ್ರಮ ಗಮನ ಸೆಳೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಸಂಸ್ಥೆಯ ನಿರ್ದೇಶಕರು, ರೈತರು ಸಂಘ ಸಂಸ್ಥೆಯ ಪ್ರಮುಖರು ಸೇರಿದಂತೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.