ಮುಳ್ಳೂರು, ನ. ೬: ಶನಿವಾರಸಂತೆ ಹೋಬಳಿಯ ಚಿಕ್ಕಕೊಳತ್ತೂರು ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗದವರಿಗೆ ಸೇರಿದ ಸ್ಮಶಾನ ಜಾಗವನ್ನು ತೆರವು ಗೊಳಿಸಿ ಜನಾಂಗದವರ ಸ್ವಾಧೀನ ಕ್ಕಾಗಿ ಒಳಪಡಿಸುವ ಸಲುವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ [ಪರಿವರ್ತನವಾದ] ಶನಿವಾರಸಂತೆ ಸಂಘಟನೆಯ ಪ್ರಮುಖರು ಕಳೆದ ೫ ವರ್ಷಗಳಿಂದ ಹೋರಾಟ ಮಾಡುತ್ತಿದ್ದು ಹೋರಾಟದ ಫಲವಾಗಿ ಇದೀಗ ಕಂದಾಯ ಇಲಾಖೆಯ ಅಧಿಕಾರಿಗಳು ಅತಿಕ್ರಮಿಸಿದ ಸ್ಮಶಾನದ ಜಾಗವನ್ನು ತೆರವುಗೊಳಿಸಿ ಸದರಿ ಜನಾಂಗದವರ ಸ್ವಾಧೀನಕ್ಕೆ ಬಿಡಿಸಿಕೊಟ್ಟಿದ್ದಾರೆ ಎಂದು ದಸಂಸ [ಪರಿವರ್ತನವಾದಿ] ಕೊಡಗು ಜಿಲ್ಲಾ ಸಂಚಾಲಕ ಸಿ.ಸಿ.ಲೋಕೇಶ್ ಶನಿವಾರಸಂತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ಚಿಕ್ಕ ಕೊಳತ್ತೂರು ಗ್ರಾಮದಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದವರಿಗೆ ಸ್ಮಶಾನ ಜಾಗವನ್ನು ಮೀಸಲಿಡಲಾಗಿತ್ತು. ಆದರೆ ಗ್ರಾಮದ ಉಳ್ಳವರು ಈ ಜಾಗವನ್ನು ಅತಿಕ್ರಮಿಸಿದ್ದರು. ಇದರ ವಿರುದ್ದ ಸ್ಥಳೀಯ ದಸಂಸ ಪ್ರಮುಖರು ಕಳೆದ ಮೂರು ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಆದರೂ ಅತಿಕ್ರಮಿಸಿದ ಸ್ಮಶಾನ ಜಾಗವನ್ನು ತೆರವುಗೊಳಿಸುತ್ತಿರಲಿಲ್ಲ. ಈ ಬಗ್ಗೆ ಮತ್ತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ, ಶಾಸಕರಿಗೆ ದೂರು ನೀಡಲಾಗಿತ್ತು. ಅದರಂತೆ ತಾ.೩ ರಂದು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಅತಿಕ್ರಮಿಸಿಕೊಂಡಿದ್ದ ಎಸ್‌ಸಿ, ಎಸ್‌ಟಿ ಜನಾಂಗದವರ ಮೀಸಲಿಟ್ಟಿದ ಸ್ಮಶಾನ ಜಾಗವನ್ನು ತೆರವುಗೊಳಿಸಿ ಸದರಿ ಜನಾಂಗದವರ ಸ್ವಾಧೀನಕ್ಕೆ ಕೊಟ್ಟಿರುವುದು ಸಂಘಟನೆಯ ಹೋರಾಟಕ್ಕೆ ಸಿಕ್ಕಿದ ಜಯವಾಗಿದೆ ಎಂದರು.
ದಸAಸ ಜಿಲ್ಲಾ ಸಂಘಟನಾ ಸಂಚಾಲಕ ವಿಜಯಕುಮಾರ್ ಮಾತನಾಡಿ-ಚಿಕ್ಕಕೊಳತ್ತೂರು ಗ್ರಾಮದ ಎಸ್‌ಸಿ. ಎಸ್‌ಟಿ ಜನಾಂಗದವರಿಗಾಗಿ ಮೀಸಲು ಮಾಡಿಟ್ಟಿದ ಸ್ಮಶಾನಕ್ಕೆ ಸೇರಿದ ಜಾಗವನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದರು; ಶನಿವಾರಸಂತೆ ಹೋಬಳಿ ದಸಂಸ ಪ್ರಮುಖರು ಇದರ ವಿರುದ್ದ ಹೋರಾಟ ಮಾಡುತ್ತಿದ್ದರು ಇದೀಗ ಸಂಬAಧ ಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡು ಅತಿಕ್ರಮಿಸಿದ ಜಾಗವನ್ನು ತೆರವುಗೊಳಿಸಿ ಸದರಿ ಜನಾಂಗದವರ ಸ್ವಾಧೀನಕ್ಕೆ ಕೊಟ್ಟಿರುವುದು ಸಂತಸ ಎಂದರು.
ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಅವಿನಾಶ್, ರೋಹಿತ್ ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಸಂಘಟನಾ ಸಂಚಾಲಕ ಶಾಹಿದ್ ಮುಂತಾದವರು ಹಾಜರಿದ್ದರು.