ಮಡಿಕೇರಿ, ನ. ೬: ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜ ಪ್ರಸಾದ ನಿಲಯದ ಸಭಾಂಗಣದಲ್ಲಿ ತಾ. ೧೨ರಂದು ೨೧೪ನೆಯ ಹೊಂಬೆಳಕು ಹಾಗೂ ಮಾಸಿಕ ತತ್ವ ಚಿಂತನಾಗೋಷ್ಠಿ ನಡೆಯಲಿದೆ.
ದಿವ್ಯ ಸಾನಿಧ್ಯವನ್ನು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿದ್ದು, ದಂತ ವೈದ್ಯಕೀಯ ಕಾಲೇಜು ಸಂಶೋಧನಾ ವಿಭಾಗ ಉಪಮುಖ್ಯಸ್ಥ ಡಾ. ಆರ್. ಶಶಿಧರ ಉದ್ಘಾಟಿಸಲಿದ್ದು, ಕೃತಕ ದಂತ ಶಸ್ತçವೈದ್ಯ ಲವಿನ್ ಚಂಗಪ್ಪ ದಂತ ರಕ್ಷಣೆಯಲ್ಲಿ ನಿಮ್ಮ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.