ಮಡಿಕೇರಿ, ನ. ೯: ಜಿಲ್ಲೆಯ ಕಂದಾಯ ಇಲಾಖೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕುಶಾಲನಗರ ವಕೀಲರ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಕಳುಹಿಸಿದ್ದು, ಅದರಲ್ಲಿರುವ ಅಂಶಗಳ ಬಗ್ಗೆ ಜಿಲ್ಲಾಧಿಕಾರಿಗಳು ತಾ. ೧೦ ರಂದು (ಇಂದು) ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ಕರೆಯಲಾಗಿರುವ ಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಬೇಕೆಂದು ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯು ೧೯೫೬ರ ಪೂರ್ವದಲ್ಲಿ ಸಿ ರಾಜ್ಯವಾಗಿದ್ದಾಗ ಕೂರ್ಗ್ಲ್ಯಾಂಡ್ ರೆವಿನ್ಯೂ ರೆಗ್ಯುಲೇಷನ್ ಅಸ್ತಿತ್ವದಲ್ಲಿತ್ತು. ಅದನ್ನು ನಂತರದಲ್ಲಿ ಕರ್ನಾಟಕ ಕಂದಾಯ ಕಾಯ್ದೆಗೆ ವಿಲೀನ ಮಾಡಿ ಕೆಲವೊಂದು ಪರಿಚ್ಛೇದಗಳ ಹಿತಾಸಕ್ತಿ ಹಾಗೆಯೇ ಇರಿಸಲ್ಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ಕೂರ್ಗ್ ಆರ್.ಆರ್. ಪ್ರಕಾರ ಕೆಲವೊಂದು ನಿಬಂಧನೆಗಳು ಹಾಗೆಯೇ ಉಳಿದಿವೆ. ಉದಾಹರಣೆಗೆ ಹುಲ್ಲುಗಾವಲು ಎಂಬ ನಿಬಂಧನೆಯು ಪರಿಪೂರ್ಣ ಮಾಲೀಕತ್ವವನ್ನು ಕೊಡದೇ ಇದ್ದರೂ ಸಹ ಅದು ನೋಂದಾವಣೆ ಆಗಿ ಪರಭಾರೆಯಾಗುತ್ತಿರುತ್ತದೆ. ಆರ್‌ಟಿಸಿ ಕೂಡ ಬದಲಾವಣೆಯಾಗುತ್ತಿರುತ್ತದೆ.
ಈ ಹಿನ್ನೆಲೆಯಲ್ಲಿ ಹುಲ್ಲುಗಾವಲು ಪರಿವರ್ತನೆಯಾಗುವ ಪ್ರದೇಶವಾಗಿರುವುದಿಲ್ಲ. ಆದ್ದರಿಂದ ನಗರಗಳಿಂದ ೫ ಕಿ.ಲೋ. ಮೀಟರ್ ವ್ಯಾಪ್ತಿಯಲ್ಲಿ ಇರುವ ಹುಲ್ಲುಗಾವಲು ನಿಬಂಧನೆಯ ಜಮೀನುಗಳನ್ನು ಇಂದಿನ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಮಂಜೂರಾತಿದಾರರಿಗೆ ಅಥವಾ ಖರೀದಿಸಿದವರಿಗೆ ಮರು ಮಂಜೂರಾತಿ ಮಾಡಿಕೊಟ್ಟು ಸ್ವತ್ತಿನ ನಿಬಂಧನೆಯನ್ನು ಬದಲಾವಣೆ ಮಾಡಿ ಅಭಿವೃದ್ಧಿ ಮಾಡಿಕೊಟ್ಟಲ್ಲಿ ಕೊಡಗು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.
ಈ ಹಿಂದೆ ಕೆಲವು ಜಮೀನಿನ ಮಾಲೀಕರು ತುಂಡು ಜಮೀನಾಗಿ ಅಥವಾ ನಿವೇಶನಗಳಾಗಿ ಮಾರಾಟ ಮಾಡಿದ್ದು, ಅದಕ್ಕೆ ಪಂಚಾಯಿತಿ ವ್ಯಾಪ್ತಿಯಲ್ಲಿ ೧೧ಬಿ ಮಾಡುತ್ತಿರುತ್ತಾರೆ. ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯವು ತೀರ್ಪನ್ನು ನೀಡಿದ್ದು, ನಮೂನೆ ೯ ಮತ್ತು ೧೧ ಎ ನ್ನು ನೀಡಬೇಕು.
ಒಂದು ವೇಳೆ ಯೋಜನಾ ಪ್ರಾಧಿಕಾರದ ನಿಯಮಗಳಂತೆ ವಸತಿ ಬಡಾವಣೆ ನಿರ್ಮಾಣವಾಗಿಲ್ಲದಿದ್ದರೆ ಬಡಾವಣೆಯ ಮಾಲೀಕನ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ನಿರ್ದೇಶನ ನೀಡಿದೆ. ಆದರೆ ಇದುವರೆಗೆ ನಮೂನೆ ೯ ಮತ್ತು ೧೧ಎ ನ್ನು ಮಾಡದೇ ಅಧಿಕಾರಿಗಳು ೧೧ಬಿಯ ನಮೂನೆಯನ್ನು ನೀಡುತ್ತಿದ್ದು, ಇದರಿಂದ ನಿವೇಶನಗಳು ನೋಂದಾವಣೆಯಾಗದೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ಕುಂಠಿತವಾಗಿ ನಿವೇಶನ ಕೊಂಡುಕೊAಡವರು ಬ್ಯಾಂಕಿಗೆ ಅಡಮಾನ ಮಾಡಲು ಸಾಧ್ಯವಾಗದೇ ನಿವೇಶನವನ್ನು ಮಾರಾಟ ಮಾಡಲೂ ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿದ ತೀರ್ಪಿನಂತೆ ನಮೂನೆ ೯ ಮತ್ತು ೧೧ಎ ನ್ನು ಮಾಡಿಕೊಡುವಂತೆ ಸರ್ಕಾರವನ್ನು ಜಿಲ್ಲಾಧಿಕಾರಿಗಳು ಒತ್ತಾಯಿಸಬೇಕು ಎಂದು ನಾಗೇಂದ್ರ ಹೇಳಿದರು.
೧೯೭೨ಕ್ಕಿಂತಲೂ ಹಿಂದೆ ನಗರ ಪ್ರದೇಶದಲ್ಲಿ ಅಥವಾ ಪಟ್ಟಣ ಪ್ರದೇಶದಲ್ಲಿ ಇದ್ದಂತಹ ಕೃಷಿ ಜಮೀನುಗಳಿಗೆ ಅಥವಾ ಪರಿವರ್ತನೆಯಾಗದ ಜಮೀನುಗಳಿಗೆ ಖಾತೆಯನ್ನು ಸ್ಥಳೀಯ ಪ್ರಾಧಿಕಾರದಲ್ಲಿ ತೆರೆದಿದ್ದರೆ ಅಂತಹುಗಳಿಗೆ ಪರಿವರ್ತನಾ ಆದೇಶ ಕಾಯಿದೆ ಅಥವಾ ಯೋಜನಾ ಪ್ರಾಧಿಕಾರದ ಅನುಮೋದನೆಯನ್ನು ನಿರೀಕ್ಷಿಸದೇ ಸ್ಥಳೀಯ ಪ್ರಾಧಿಕಾರದ ಇ ಸ್ವತ್ತನ್ನು ಮಾಡಿಕೊಡುವಂತೆ ಸ್ಥಳೀಯ ಆಡಳಿತ ವರ್ಗಕ್ಕೆ ವಿವೇಚಾನಾಧಿಕಾರವನ್ನು ನೀಡಿದರೆ ಸರ್ಕಾರದ ಬೊಕ್ಕಸಕ್ಕೆ ನಿವೇಶನದ ತೆರಿಗೆಗಳು ಲಭ್ಯವಾಗಿ ನೋಂದಣಿ ಪ್ರಕ್ರಿಯೆಗಳು ಸುಗಮವಾಗುತ್ತದೆ.
ಕೃಷಿ ಜಮೀನುಗಳ ಮಂಜೂರಾತಿಯ ಕಡತವು ಲಭ್ಯವಿಲ್ಲದಿದ್ದರೆ ತಹಶೀಲ್ದಾರರಿಗೆ ಗೈರು ಕಡತದ ವಿಲೇವಾರಿ ಅಧಿಕಾರವನ್ನು ನೀಡಿ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಿ ರೈತರಿಗೆ ಆರ್‌ಟಿಸಿಯು ಸ್ಥಳದಲ್ಲಿಯೇ ನೀಡುವಂತೆ ಮಾಡಬೇಕು. ಕಂದಾಯ ಇಲಾಖೆಯ ಪ್ರಾಧಿಕಾರದಲ್ಲಿ ಇರುವ ಎಂ.ಸಿ. ಪ್ರಕರಣಗಳನ್ನು ಸಿವಿಲ್ ಹಕ್ಕುಗಳಿಗೆ ಸಂಬAಧಿಸಿದAತೆ ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣ ಪೀಠದ ಆದೇಶದಂತೆ ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಬೇಕು.
ಕೊಡಗಿನ ಕೆಲವೊಂದು ಜಮೀನುಗಳ ನಿಬಂಧನೆಗಳನ್ನು ಸೂಕ್ತವಾದ ಕ್ರಮಗಳನ್ನು ಅಳವಡಿಸುವದರೊಂದಿಗೆ ಸರ್ಕಾರವು ಶುಲ್ಕಗಳನ್ನು ತೆಗೆದುಕೊಂಡು ನಿಬಂಧನೆಗಳಿAದ ಮುಕ್ತಿ ಮಾಡಬೇಕು. ಕಂದಾಯ ಪ್ರಾಧಿಕಾರಗಳ ವ್ಯಾಜ್ಯ ಪ್ರಕರಣಗಳನ್ನು ಮತ್ತು ನಡೆಸುವ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣವಾದ ಕಡತಗಳ ಮಾಹಿತಿ ಇ- ತಂತ್ರಾAಶದಲ್ಲಿ ದೊರಕುವಂತೆ ಮಾಡಬೇಕು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಇತ್ಯಾದಿ ಪೌರಾಡಳಿತದಲ್ಲಿ ಒಳಪಡುವ ಪ್ರದೇಶಗಳ ನಿವೇಶನಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಪರಿವರ್ತನೆಯ ಅವಶ್ಯಕತೆ ಇಲ್ಲವೆಂದು ಪರಿಗಣಿಸಿ ನಿವೇಶನದ ಮಾಲೀಕರಿಗೆ ಕಟ್ಟಡವನ್ನು ಕಟ್ಟುವುದಕ್ಕೆ ಅವಕಾಶ ನೀಡಬೇಕು. ಕುಶಾಲನಗರ ತಾಲೂಕಿಗೆ ಮಿನಿ ವಿಧಾನಸೌಧವನ್ನು ಮಂಜೂರಾತಿ ನೀಡುವಂತೆ ಶಿಫಾರಸ್ಸು ಮಾಡಬೇಕು ಎಂದು ಅವರು ಮನವಿ ಮಾಡಿದರು. ನೋಂದಣಿ ಪ್ರಕ್ರಿಯೆಗೆ ಸಂಬAಧಿಸಿದAತೆ ಅವಿಭಜಿತ ಹಕ್ಕುಗಳನ್ನು ಚೆಕ್ಕುಬಂದಿಗಳನ್ನು ಹಾಕಿ ಸ್ವತಂತ್ರವಾಗಿ ಮಾರಾಟ ಮಾಡಲು ಇ - ತಂತ್ರಾAಶದಲ್ಲಿ ಅವಕಾಶವನ್ನು ನೀಡಬೇಕು. ಅದೇ ರೀತಿಯಲ್ಲಿ ಸರ್ವರ್‌ಗಳು ಡೌನ್ ಆದಲ್ಲಿ ಕೈ ಬರಹದಲ್ಲಿ ನೋಂದಾವಣೆ ಪ್ರಕ್ರಿಯೆಗಳು ಆಗುವಂತೆ ಶಿಫಾರಸ್ಸು ಮಾಡಬೇಕು.
ಆರ್‌ಟಿಸಿಯ ಪ್ರಕ್ರಿಯೆಯಲ್ಲಿ ಮೂಲ ಸರ್ವೆ ನಂ.ಗಳು ಎಷ್ಟು ಇರುತ್ತದೋ ಅಷ್ಟು ಹಿಸ್ಸಾ ಸರ್ವೆ ನಂ. ಗಳ ಮಾಹಿತಿಯ ಆಕಾರ್ ಬಂಧುವಿನಲ್ಲಿ ಮತ್ತು ಹಿಸ್ಸಾ ಟಿಪ್ಪಣಿಯಲ್ಲಿ ಮತ್ತು ಗ್ರಾಮ ನಕಾಶೆಯಲ್ಲಿ ಇರುವಂತೆ ಆಯಾ ಆರ್ಥಿಕ ವರ್ಷದಲ್ಲಿ ಕ್ರಮವಹಿಸಬೇಕು. ಹಿಸ್ಸಾ ಸರ್ವೆ ನಂ. ಗಳು ಗ್ರಾಮ ನಕಾಶೆಯಲ್ಲಿ ಇಲ್ಲದಿದ್ದಲ್ಲಿ ನ್ಯಾಯಾಲಯದಲ್ಲಿ ಅದರ ಅಸ್ತಿತ್ವದ ಬಗ್ಗೆ ಪ್ರಶ್ನೆಯಾಗುತ್ತದೆ. ಆ ಹಿನ್ನೆಲೆಯಲ್ಲಿ ಸಿವಿಲ್ ವ್ಯಾಜ್ಯಗಳನ್ನು ತಪ್ಪಿಸುವ ಸಲುವಾಗಿ ವರ್ಷದ ಅಂತ್ಯದಲ್ಲಿ ಒಂದು ಮೂಲ ಸರ್ವೆ ನಂ. ನಲ್ಲಿ ಎಷ್ಟೆಲ್ಲಾ ಹಿಸ್ಸೆಗಳು ಬರುತ್ತವೆಯೋ ಆ ಎಲ್ಲಾ ಹಿಸ್ಸೆಗಳನ್ನು ಗ್ರಾಮ ನಕಾಶೆಯಲ್ಲಿ ನಮೂದಿಸಬೇಕು. ಅದೇ ರೀತಿಯಲ್ಲಿ ೧೧ ಇ ನಕಾಶೆ ಮಾಡಿದಂತಹ ಸಂದರ್ಭಕ್ಕೆ ಮತ್ತೊಮ್ಮೆ ರೈತರನ್ನು ಭೂಮಾಪನ ಇಲಾಖೆಗೆ ಕರೆಸಿಕೊಳ್ಳದೇ ಯಥಾವತ್ತಾಗಿ ೧೧ಇ ನಕಾಶೆಯ ಪ್ರಕಾರ ಗ್ರಾಮ ನಕಾಶೆಯಲ್ಲಿ ಕೂರಿಸುವ ಪ್ರಕ್ರಿಯೆಯು ಯಾಂತ್ರಿಕವಾಗಿ ಆಗಬೇಕು. ಇದರಿಂದ ಭ್ರಷ್ಟಾಚಾರದ ಹಾವಳಿ ಮತ್ತು ಬ್ರೋಕರ್ ಹಾವಳಿಯನ್ನು ತಪ್ಪಿಸಬಹುದು ಎಂಬಿತ್ಯಾದಿ ವಿಚಾರಗಳನ್ನು ಒಳಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಕಳುಹಿಸಲಾಗಿದ್ದು, ಜಿಲ್ಲಾಧಿಕಾರಿಗಳು ಕೊಡಗಿನ ಜನತೆಯ ಹಿತದೃಷ್ಟಿಯಿಂದ ಕಂದಾಯ ಸಚಿವರ ಸಭೆಯಲ್ಲಿ ಚರ್ಚಿಸಿ ಶಾಸಕರಾದ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಎ.ಎಸ್. ಪೊನ್ನಣ್ಣ ಅವರ ನೆರವಿನೊಂದಿಗೆ ಪರಿಹಾರ ಕಂಡುಕೊಳ್ಳುವAತೆ ನಾಗೇಂದ್ರ ಕೋರಿದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕೆ.ಬಿ. ಮೋಹನ್, ನಿರ್ದೇಶಕ ಹೆಚ್.ಎನ್. ಸುಧಾಕರ್ ಉಪಸ್ಥಿತರಿದ್ದರು.