ಮಡಿಕೇರಿ, ನ. ೯ : ನಾಪೋಕ್ಲುವಿನ ನೂರಂಬಡನಾಡ್ ಬೇತ್ ಮಂದ್ ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಗಾಗಿ ಒತ್ತಾಯಿಸಿ ಪಾದಯಾತ್ರೆ ಮತ್ತು ಕೊಡವ ಜಾಗೃತಿ ಸಭೆ ನಡೆಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ನಾಪೋಕ್ಲು ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ಮಾನವ ಸರಪಳಿ ನಿರ್ಮಿಸಿದ ಪ್ರಮುಖರು ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ನೂರಂಬಡನಾಡ್ ಬೇತ್ ಮಂದ್‌ಗೆ ಪಾದಯಾತ್ರೆಯಲ್ಲಿ ಸಾಗಿದ ಕೊಡವ, ಕೊಡವತಿಯರು ಸಿಎನ್‌ಸಿ ಮಂಡಿಸಿರುವ ೯ ಬೇಡಿಕೆಗಳ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಪ್ರಮುಖ ಬೇಡಿಕೆಯನ್ನು ಮುಂದಿಟ್ಟುಕೊAಡು ಪಾದಯಾತ್ರೆ ನಡೆಸುತ್ತಿರುವ ಔಚಿತ್ಯದ ಕುರಿತು ಎನ್.ಯು. ನಾಚಪ್ಪ ವಿವರಿಸಿದರು.

ಕಲ್ಯಾಟಂಡ ಸುಮಿತ್ರಾ ದೇವಯ್ಯ, ಕೀಕಂಡ ಸುಶೀಲ, ನಂದಿನೆರವAಡ ಪಾರ್ವತಿ, ತೋಲಂಡ ಮನು, ಕಲ್ಯಾಟಂಡ ಮರಿ ಚೆಂಗಪ್ಪ, ಕೊಂಡಿರ ಶಾಂತಿ ಮಂದಪ್ಪ, ಬೊಳ್ಳೆಪಂಡ ಸುನಿತಾ ಸತೀಶ್, ಕೀಕಂಡ ಕವಿತಾ ಪೂಣಚ್ಚ, ಅಪ್ಪೇರಿಯಂಡ ಗಾಯತ್ರಿ ರಘು, ಕಲ್ಯಾಟಂಡ ರಮೇಶ್ ಚೆಂಗಪ್ಪ, ಬೊಳ್ಳೆಪಂಡ ರೋಷನ್ ಉತ್ತಪ್ಪ, ಚೋಕಿರ ರೋಶನ್, ಅಪ್ಪೇರಿಯಂಡ ವಿಪಿನ್ ಸೋಮಯ್ಯ, ಕೊಂಡಿರ ಪೆಮ್ಮಯ್ಯ ಜಾಲು, ಚೋಕಿರ ಅಶೋಕ್, ಕೀಕಂಡ ಸಚಿನ್, ಕೊಂಡಿರ ಮೋಹನ್ ಚೆಂಗಪ್ಪ, ಕಲ್ಯಾಟಂಡ ಮಯ್ಯು ದೇವಯ್ಯ, ಚೋಕಿರ ಸುಧಿ ಅಪ್ಪಯ್ಯ, ಚೋಕಿರ ಮಧು(ಮೋಹನ್), ಕುಟ್ಟಂಜೆಟ್ಟೀರ ಅಜಿತ್, ನಾಯಕಂಡ ಮುತ್ತಪ್ಪ, ಕುಟ್ಟಂಜೆಟ್ಟೀರ ಅಭಿ, ಕುಟ್ಟಂಜೆಟ್ಟಿರ ಸುರೇಶ್, ಬೊಳ್ಳಪಂಡ ಹರೀಶ್, ಕಲಿಯಂಡ ಸಾಬ ತಿಮ್ಮಯ್ಯ, ಅರೆಯಡ ಗಿರೀಶ್, ಅಪ್ಪಚ್ಚೀರ ರಮ್ಮಿ ನಾಣಯ್ಯ, ಕಲಿಯಂಡ ಪ್ರಕಾಶ್, ಮಣವಟ್ಟಿರ ಜಗ್ಗ, ಮಣವಟ್ಟಿರ ಸ್ವರೂಪ, ಬೊಟ್ಟೋಳಂಡ ರವಿ, ಕೊಂಡಿರ ಗಣೇಶ್ ನಾಣಯ್ಯ, ಕೀಕಂಡ ಪೂಣಚ್ಚ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬೊಟ್ಟೋಳಂಡ ಗಿರೀಶ್, ಕೇಟೋಳಿರ ಹರೀಶ್, ಅರೆಯಡ ರತ್ನ, ಕಂಗAಡ ಜಾಲಿ, ಕನ್ನಂಬೀರ ಸುಧಿ, ಅಜ್ಜೆಟಿರ ಬೋಪಣ್ಣ, ಕೇಟೋಳಿರ ರಮ್ಮಿ, ಕುಂಡಿಯೊಳAಡ ಶ್ಯಾಮ್, ಕೊಂಡಿರ ರಾಜಪ್ಪ, ಬೊಳ್ಳೆಪಂಡ ಜುಮ್ಮಾ, ಅಪ್ಪಚ್ಚಿರ ಕಟ್ಟಿ, ನಾಯಕಂಡ ಬೋಪಣ್ಣ, ಮಲೆಯಂಡ ಸುಬ್ಬಯ್ಯ, ಕುಲ್ಲೇಟಿರ ಬೇಬಾ, ಎಳ್ತಂಡ ಶಾಂತಿ ಮತ್ತಿತರರು ಪಾದಯಾತ್ರೆ ಮತ್ತು ಜಾಗೃತಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇAದು ಪಾದಯಾತ್ರೆ ಮುಕ್ತಾಯ : ತಾ. ೧೦ ರಂದು ಬೆಳಿಗ್ಗೆ ೯ ಗಂಟೆಗೆ ಪಾಡಿನಾಡ್- ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಧ್ಯಾಹ್ನ ೧೨ ಗಂಟೆಗೆ ಕುಂಜಿಲ ಕಕ್ಕಬ್ಬೆ “ಕೆಂಜರಾಣೆ ಪಾಡಿನಾಡ್ ಮಂದ್”ನಲ್ಲಿ ಜಾಗೃತಿ ಸಭೆಯ ಮೂಲಕ ಯಾತ್ರೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.