ವೀರಾಜಪೇಟೆ, ನ. ೮: ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪಡೆಯುವುದರ ಮೂಲಕ ಉದ್ಯೋಗ ಪಡೆಯುವಂತಾಗಬೇಕು ಎಂದು ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಕರ್ ಅಭಿಪ್ರಾಯಪಟ್ಟರು.
ಪದವಿ ಕಾಲೇಜಿನಲ್ಲಿ ನಡೆದ ಮುಂಬೈಯ ಬಜಾಜ್ ಫಿಂಸೆರ್ವ್ ಕಂಪನಿ ವತಿಯಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಸರ್ಟಿಫಿಕೇಟ್ ಕೋರ್ಸ್ನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯವು ಮಹತ್ವದ್ದಾಗಿದ್ದು ವಿದ್ಯಾರ್ಥಿಗಳು ಉದ್ಯೋಗ ಕೌಶಲ್ಯ ತರಬೇತಿ ಪಡೆಯಬೇಕು. ಆ ಮೂಲಕ ಸೂಕ್ತ ಉದ್ಯೋಗದ ಆಯ್ಕೆ ಮಾಡಬಹುದು ಎಂದು ಹೇಳಿದರು. ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡುತ್ತ ಕೌಶಲ್ಯ ಆಧಾರಿತ ಉದ್ಯೋಗ ಇಂದು ಅತೀ ಮುಖ್ಯವಾಗಿದ್ದು ವಿದ್ಯಾರ್ಥಿಗಳು ತರಬೇತಿ ಪಡೆಯುವಂತಾಗಲು ಈ ಕಾರ್ಯಕ್ರಮವನ್ನು ಎಂ.ಓ.ಯು ಅಡಿಯಲ್ಲಿ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತರಬೇತುದಾರೆ ಬಜಾಜ್ ಫಿಂಸೆರ್ವ್ ಕಂಪೆನಿಯ ಪ್ರಾಜೆಕ್ಟ್ ಮ್ಯಾನೇಜರ್ ರಶ್ಮಿ ಮನ್ಸುಖಾನಿ, ಐಕ್ಯೂಎಸಿ ಸಂಚಾಲಕಿ ಹೇಮ, ವಾಣಿಜ್ಯ ವಿಭಾಗ ಮುಖ್ಯಸ್ಥೆ ದೃಶ್ಯ ಉಪಸ್ಥಿತರಿದ್ದರು. ಈ ಸರ್ಟಿಫಿಕೇಟ್ ಕೋರ್ಸ್ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬ್ಯಾಂಕಿAಗ್, ಹಣಕಾಸು, ಇನ್ಶೂರೆನ್ಸ್ ವಿಷಯದ ಬಗ್ಗೆ ನಡೆಯಲಿದೆ.