*ಸಿದ್ದಾಪುರ, ನ. ೮: ಡಿಜಿಟಲ್ ಯುಗದಲ್ಲಿ ತೇಲುತ್ತಿರುವ ನಾಗರಿಕ ಸಮಾಜದÀಲ್ಲಿ, ಸೋರುವ ಸೂರಿನಡಿ ಭಗ್ನ ಕನಸುಗಳೊಂದಿಗೆ ಜೀವನ ಸಾಗಿಸುತ್ತಿರುವ ಕೊಡಗಿನ ಗಿರಿಜನ ಸಮುದಾಯದ ವ್ಯಥೆಗೆ ಮಾತ್ರ ಪರಿಹಾರ ಇಲ್ಲದಂತಾಗಿದೆ. ಮತದ ದಾಳವಾಗಿಯೇ ಉಳಿದು ಹೋಗಿರುವ ಗಿರಿಜನರು ತಮ್ಮ ತೀರದ ಬವಣೆಗಳಿಂದ ಏಳಲಾಗದೆ ಕುಸಿದು ಬೀಳುತ್ತಿದ್ದಾರೆ ಎಂಬುದಕ್ಕೆ ಮಾಲ್ದಾರೆ ಬಳಿಯ ದಿಡ್ಡಳ್ಳಿ ಹಾಡಿಯೇ ಸಾಕ್ಷಿ!.
ಸೂರಿಲ್ಲದ ಬದುಕು: ವರ್ಷಗಳ ಹಿಂದೆ ದಿಡ್ಡಳ್ಳಿಯಲ್ಲಿ ಸೂರಿಗಾಗಿ ನಡೆದ ಹೋರಾಟ ರಾಷ್ಟç ಮಟ್ಟದ ಸುದ್ದಿಯಾಯ್ತು. ಇಲ್ಲಿಂದ ಅನೇಕರು ಬೇರೆಡೆಗೆ ಸ್ಥಳಾಂತರ ವಾದರು. ಆದರೆ, ಉಳಿದವರ ದೈನ್ಯ ಪರಿಸ್ಥಿತಿ ಮಾತ್ರ ಹುಲ್ಲುಕಡ್ಡಿಯಷ್ಟೂ ಮಿಸುಕಲಿಲ್ಲ. ಪ್ಲಾಸ್ಟಿಕ್ ಹೊದಿಕೆ ಮತ್ತು ಐಟಿಡಿಪಿ ಇಲಾಖೆ ನಿರ್ಮಿಸಿ ಕೊಟ್ಟಿರುವ ಅಪೂರ್ಣ ಕಟ್ಟಡಗಳನ್ನೇ ಮನೆಗಳು ಎಂದು ನಂಬಿ ಕುಳಿತಿದ್ದಾರೆ ಅಮಾಯಕರು! ದೇಶವು ಸ್ವಾತಂತ್ರö್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ದಿನಗಳಲ್ಲಿ, ದಿಡ್ಡಳ್ಳಿಯೆಂಬ ನತದೃಷ್ಟ ಹಾಡಿಯ ಮನೆಗಳಲ್ಲಿ ಮಳೆ ನೀರಿನ ಭೋರ್ಗರೆತ ಮುಗಿಲು ಮುಟ್ಟಿದೆ. ಮನೆಗಳೆಂಬ ಬಹುತೇಕ ಗುಡಿಸಲುಗಳು ಸೋರುತ್ತಿವೆ.
‘ತಮಗೊಂದು ಸುಸಜ್ಜಿತ ಮನೆ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ’ ಎಂದು ಗಿರಿಜನರು ಆಡಳಿತಕ್ಕೆ ಮನವಿ ಕೊಟ್ಟು ಹೈರಾಣಾಗಿದ್ದಾರೆ. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಅಸಡ್ಡೆ ಗೊತ್ತಿರುವ ಸಂಘಟನೆಗಳೂ ಈ ಅಮಾಯಕರ ನೆರವಿಗೆ ನಿಲ್ಲಲು ಸಾಧ್ಯವಾಗದೆ ಅಸಹಾಯಕವಾಗಿವೆ. ಕಾಡಿನ ಕಟ್ಟಿಗೆ ಹೆಕ್ಕಿ ಬೆಂಕಿ ಉರಿಸುತ್ತಿದ್ದ ಇವರಿಗೆ, `ಉಜ್ವಲ’ ಯೋಜನೆಯ ಅಡುಗೆ ಅನಿಲ ದಕ್ಕಿರುವುದು ಒಂದಿಷ್ಟು ನೆಮ್ಮದಿ ನೀಡಿದರೆ, ಜಲಜೀವನ ಮಿಷನ್ ನಿಂದ ನೀರಿನ ವ್ಯವಸ್ಥೆ ದೊರೆತಿದೆ.
ವಿದ್ಯುತ್ ಮರೀಚಿಕೆ!: ಬವಣೆಗಳಿಂದ ಬಂಧಿಯಾಗಿರುವ ದಿಡ್ಡಳ್ಳಿ ಗಿರಿಜನರಿಗೆ ವಿದ್ಯುತ್ ಎಂಬುದು ಗಗನ ಕುಸುಮವೇ ಸರಿ. ರಾತ್ರಿ ಯಾಯ್ತೆಂದರೆ, ಹಾಡಿ ಕಾರ್ಗತ್ತ ಲಲ್ಲಿ ಮುಳುಗುತ್ತದೆ. ಪೇಟೆಗೆ ಹೋದಾಗ ನೂರಾರು ರೂಪಾಯಿ ಕೊಟ್ಟು ಡೀಸೆಲ್ ಖರೀದಿಸಿ, ಕತ್ತಲೆ ನಿಂದ ನೀರಿನ ವ್ಯವಸ್ಥೆ ದೊರೆತಿದೆ.
ವಿದ್ಯುತ್ ಮರೀಚಿಕೆ!: ಬವಣೆಗಳಿಂದ ಬಂಧಿಯಾಗಿರುವ ದಿಡ್ಡಳ್ಳಿ ಗಿರಿಜನರಿಗೆ ವಿದ್ಯುತ್ ಎಂಬುದು ಗಗನ ಕುಸುಮವೇ ಸರಿ. ರಾತ್ರಿ ಯಾಯ್ತೆಂದರೆ, ಹಾಡಿ ಕಾರ್ಗತ್ತ ಲಲ್ಲಿ ಮುಳುಗುತ್ತದೆ. ಪೇಟೆಗೆ ಹೋದಾಗ ನೂರಾರು ರೂಪಾಯಿ ಕೊಟ್ಟು ಡೀಸೆಲ್ ಖರೀದಿಸಿ, ಕತ್ತಲೆ ವಿದ್ಯಾವಂತ ಮಕ್ಕಳು ಓದಿಕೊಳ್ಳ ಬೇಕಾದರೆ, ಬೆಳಕಿಲ್ಲ. ಸಾಲಸೋಲ ಮಾಡಿ ಖರೀದಿಸಿದ ಮೊಬೈಲ್ ಫೋನ್‌ಗಳಿಗೆ ಜೀವ ತುಂಬಲು ವಿದ್ಯುತ್ ಇಲ್ಲ. ಸಮೀಪದ ತೋಟ ಮಾಲೀಕರ ಮನೆಗಳಿಗೆ ದೌಢಾಯಿಸಿ, ಕಾಡಿಬೇಡಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬೇಕು. ಹಾಗೆ ಚಾರ್ಜ್ ಮಾಡಿಕೊಂಡ ದಿನಗಳಲ್ಲಿ ಮಾತ್ರ ಮೊಬೈಲ್‌ನಿಂದ ಒಂದಿಷ್ಟು ರಂಜನೆಯೋ, ಮಾತುಕತೆಯೋ ಪ್ರತಿಧ್ವನಿಸುತ್ತದೆ. ಮಿಕ್ಕ ದಿನಗಳಲ್ಲಿ ಹಾಡಿ ಕಗ್ಗತ್ತಲ ಕೊಂಪೆಯಾಗುತ್ತದೆ.
ಗಿರಿಜನರಿಗೆಂದು ಮೀಸಲಾಗಿ ರುವ ಕೋಟ್ಯಂತರ ವೆಚ್ಚದ ಯೋಜನೆಗಳು, ದಿಡ್ಡಳ್ಳಿಯೆಂಬ ಕಾಡಿನ ಹಾಡಿಯನ್ನು ಮರೆತೇಬಿಟ್ಟಿವೆ. ಸ್ವಸಹಾಯ ಸಂಘಗಳಿAದ ಸಿಗುವ ಸಾಲವನ್ನೇ ನಂಬಿ ಬದುಕುತ್ತಿದ್ದಾರೆ ಈ ಮಂದಿ. ಬದುಕೇ ಬೇಡ ಎಂಬAತಾಗಿದೆ ಎಂದು ಮರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಡಿಗೆ ಕಾಂಕ್ರೀಟ್ ರಸ್ತೆಯಾಗಿದೆ. ಕುಡಿಯುವ ನೀರಿಗೆ ಬರವಿಲ್ಲ. ಆದರೆ, ದನಗಳ ಕೊಟ್ಟಿಗೆಯಂತಿರುವ ಮನೆಗಳು ಹಾಡಿಯನ್ನು ಅಣಕಿ ಸುತ್ತಿವೆ. ಇಲ್ಲಿರುವ ಸಮುದಾಯ ಭವನವೊಂದಕ್ಕೆ ಪ್ರತೀ ವಾರ ಅಧಿಕಾರಿಗಳು ಬಂದು, ಗಿರಿಜನರ ಸಭೆ ನಡೆಸುತ್ತಾರೆ. ಸಮಸ್ಯೆಗಳ ಬಗ್ಗೆ ಕೇಳಿ ಬರೆದುಕೊಳ್ಳುತ್ತಾರೆ. ಆದರೆ, ಇಂಥ ಅದೆಷ್ಟೋ ಸಭೆಗಳನ್ನು ಕಂಡಿರುವ ನಿವಾಸಿಗಳು, ಮೌನವಾಗಿ ಉಳಿದುಹೋಗಿದ್ದಾರೆೆ.
`ನಂಗ ಮಕ್ಕಗೂ ಬವಿಷ್ಯ ಇಲ್ಲೆಯಾ?. ಎಲ್ಲರಂಗೆ ಬದುಕಲು ಆಗದಿಲ್ಲೆಯಾ? (ನಮ್ಮ ಮಕ್ಕಳಿಗೆ ಭವಿಷ್ಯ ಇಲ್ಲವೇ? ಎಲ್ಲರಂತೆ ಅವರೂ ಬದುಕಲಾಗದೇ?) ಎನ್ನುತ್ತಾ ಕಣ್ಣೀರಿಡುವ ಕುಟುಂಬಗಳ ದೈನ್ಯ ಪರಿಸ್ಥಿತಿ ನೋಡಿದರೆ, ನಮ್ಮ ಇಲಾಖೆಗಳ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗೋಸುಂಬೆತನ ಬಟಾ ಬಯಲಾಗುತ್ತದೆ. ಈ ನೆಲದ ಹಕ್ಕು ದಾರರಾಗಿದ್ದರೂ, ಪ್ರಾಣಿಗಳಿಗಿಂತ ಕೀಳಾಗಿ ಜೀವನ ಸಾಗಿಸುವ ಪರಿಸ್ಥಿತಿ ದಿಡ್ಡಳ್ಳಿ ಗಿರಿಜನರಿಗೆ ಒದಗಿ ಬಂದಿದೆ.
- ಅಂಚೆಮನೆ ಸುಧಿ