ವೀರಾಜಪೇಟೆ, ನ, ೯: ಗುಜರಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯಲ್ಲ್ಲಿ ದಾಖಲೆಗಳಿಲ್ಲದ ದ್ವಿಚಕ್ರ ವಾಹನ ಪತ್ತೆಯಾಗಿದ್ದು, ಈ ಸಂಬAಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಬ್ಯಾಟರಾಯನಪುರ ನಿವಾಸಿ ಲಾರಿ ಚಾಲಕ ದೊಡ್ಡಯ್ಯ (೪೫) ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ
ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬರು ನಗರದ ವರ್ಕ್ಶಾಪ್‌ವೊಂದರಲ್ಲಿ ದ್ವಿಚಕ್ರ ವಾಹನವನ್ನು ರಿಪೇರಿಗೆ ಬಿಟ್ಟಿದ್ದಾರೆೆ ಎನ್ನಲಾಗಿದೆ. ಮೆಕ್ಯಾನಿಕ್ ಸಾವಿರಾರು ರೂಪಾಯಿಗಳು ವೆಚ್ಚವಾಗುತ್ತದೆ ಎಂದು ಮಾಲೀಕನಿಗೆ ಹೇಳಿದ್ದಾನೆ. ಕೆಲ ದಿನ ಬಿಟ್ಟು ಬಂದ ವ್ಯಕ್ತಿಯು ವಾಹನ ದುರಸ್ತಿಗೊಳ್ಳದೆ ಯಥಾಸ್ಥಿತಿಯಲ್ಲಿರುವುದು ಗಮನಿಸಿ ವಾಹನವನ್ನು ಗುಜರಿಗೆ ಹಾಕಲು ನಿರ್ಧಾರ ಮಾಡುತ್ತಾನೆ. ಬಳಿಕ ನಗರದ ತೆಲುಗರ ಬೀದಿಯಲ್ಲಿರುವ ಗುಜರಿ ಅಂಗಡಿ ಮಾಲೀಕ ಗಫೂರ್ ಮೌಲ್ಯ ನಿಗದಿಗೊಳಿಸಿ ವಾಹನ ಖರೀದಿ ಮಾಡಿದ್ದಾರೆ.
ಗುಜರಿ ಅಂಗಡಿಯ ಮಾಲೀಕ ಗಫೂರ್ ಗುಜರಿ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಮೈಸೂರು ನಗರಕ್ಕೆ ಲಾರಿಯಲ್ಲಿ ನಿರುಪಯುಕ್ತ ವಸ್ತುಗಳೊಂದಿಗೆ ಹೀರೊ ಹೊಂಡ ಸ್ಪೆ÷್ಲಂಡರ್ ಪ್ಲಸ್ ಬೈಕ್ (ಕೆಎ-೫೧ಇಡಿ-೨೦೮೬) ಅನ್ನು ಲಾರಿಯಲ್ಲಿ ರವಾನಿಸಿದ್ದಾರೆ. ಗುಜರಿ ತುಂಬಿದ ಲಾರಿ ಪಟ್ಟಣದಿಂದ ಮೈಸೂರಿಗೆ ತೆರಳುವ ಸಂದರ್ಭ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಿಟ್ಟಂಗಾಲ ಮತ್ತು ಬಾಳುಗೋಡು ಜಂಕ್ಷನ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಗುಜರಿ ತುಂಬಿದ ವಾಹನದಲ್ಲಿ ದ್ವಿಚಕ್ರ ವಾಹನ ಪತ್ತೆಯಾಗಿದೆ.
ಈ ಬಗ್ಗೆ ವಿಚಾರಿಸಿದಾಗ ಲಾರಿ ಮಾಲೀಕ ವಿಷಯ ತಿಳಿಸಿದ್ದು, ಯಾವುದೇ ದಾಖಲೆ ಇಲ್ಲದ ದ್ವಿಚಕ್ರ ವಾಹನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ, ದಾಖಲೆ ಇಲ್ಲದ ವಾಹನ, ಸಂಶಯಾಸ್ಪದವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.