ಮಡಿಕೇರಿ, ನ. ೯: ಕಕ್ಕಬೆಯ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಕೊಡಗಿನ ಜಮ್ಮಾ ಮಲೆ ಹಿಡುವಳಿದಾರರ ಸಂಘದ ವತಿಯಿಂದ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಿ, ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.
ಕೊಡಗಿನ ಜಮ್ಮಾ ಬಾಣೆ, ಜಮ್ಮಾ ಮಲೆ ಸಮಸ್ಯೆಗಳನ್ನು ಇತ್ಯರ್ಥ ಗೊಳಿಸಬೇಕು, ಕಾವೇರಿ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆ ಗೊಳಿಸಬೇಕು, ಕಡಂಗದಿAದ ಭಾಗಮಂಡಲದವರೆಗೆ ಮುಖ್ಯರಸ್ತೆ ದುರಸ್ತಿಗೊಳಿಸಬೇಕು, ಕಕ್ಕಬೆಯಿಂದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಬೇಕು ಹಾಗೂ ಕಕ್ಕಬೆ ಸುತ್ತಮುತ್ತ ಹಳ್ಳಿಯಲ್ಲಿ ಏರ್ಪಟ್ಟಿರುವ ವಿದ್ಯುತ್ ಸಮಸ್ಯೆ ಪರಿಹಾರ ಸಂಬAಧ ಕ್ರಮಕೈಗೊಳ್ಳಬೇಕು, ಕಡಂಗದಿAದ ಭಾಗಮಂಡಲದವರೆಗೆ ಗುಡ್ಡಗಾಡು ಹಳ್ಳಿಗಳಾಗಿರುವುದರಿಂದ ರಸ್ತೆಗಳ ರಿಪೇರಿ, ಕರಡದಿಂದ ಮಲೆತಿರಿಕೆ ದೇವಸ್ಥಾನದ ದಾರಿ ಸೇರಿದಂತೆ ಮತ್ತು ಹೊಸರಸ್ತೆಗಳ ನಿರ್ಮಾಣ, ಕೊಡಗು ಕೃಷಿ ಪ್ರಧಾನ ಪ್ರದೇಶವಾಗಿರುವ ಹಿನ್ನೆಲೆ ಬೃಹತ್ ಪ್ರಮಾಣದ ರೆಸಾರ್ಟ್ಗಳ ನಿರ್ಮಾಣ ಹಾಗೂ ಗದ್ದೆಗಳನ್ನು ಲೇಔಟ್ಗಳಾಗಿ ಪರಿವರ್ತನೆ ಮಾಡುವುದನ್ನು ನಿರ್ಬಂಧಿಸುವAತೆ ಸಂಘ ಮನವಿ ಮಾಡಿತು.
ಸನ್ಮಾನ ಮತ್ತು ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಶಾಸಕರು, ನ್ಯಾಯಾಂಗ ತೀರ್ಪು ಹಾಗೂ ಆಡಳಿತಾತ್ಮಕ ಪರಿಹಾರ ಕ್ರಮ ಕೈಗೊಂಡಿದ್ದರೂ ಈವರೆಗೆ ಯಾವುದೇ ಪೂರ್ಣ ಪರಿಹಾರ ಕಲ್ಪಿಸ ಲಾಗದಿರುವುದು ವಿಷಾದನೀಯ. ತನಗೆ ಸಮಯಾವಕಾಶ ನೀಡಿ ಎಲ್ಲಾ ಗೊಂದಲಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮ್ಮಾಮಲೆ ಅಸೋಸಿಯೇಷನ್ನ ಅಧ್ಯಕ್ಷ ಎನ್. ಕೆ ಪೊನ್ನಪ್ಪ ವಹಿಸಿದ್ದರು.
ಸಮಿತಿ ಸದಸ್ಯರಾದ ಪೊನ್ನೊಂಡ ಕೆ ಚಿಣ್ಣಪ್ಪ, ಪೇರಿಯಂಡ ಸಾಬು ಪೂವಯ್ಯ, ಕರಿನೆರವಂಡ ರಮೇಶ್, ಪ್ರಮುಖರಾದ ಕೇಟೋಳಿರ ಗಣಪತಿ, ಅಪ್ಪಾರಂಡ ದೇವಯ್ಯ, ಪಾಂಡAಡ ನರೇಶ್, ಬೊಳಿಯಾಡಿರ ಸಂತು ಸುಬ್ರಮಣಿ, ಕಾರ್ಯಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಚೋಯಮಾಡಂಡ ಹರೀಶ್, ಪಾರ್ಥ, ತೊತ್ತಿಯಂಡ ಈಶ್ವರ, ಕರ್ತಂಡ ಶೈಲ ಕುಟ್ಟಪ್ಪ, ಪ್ರಮುಖರಾದ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ, ಕಾಳಚಂಡ ರವಿ, ಬಾಚಮಂಡ ರಾಜ ಪೂವಣ್ಣ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಚೋಯಮಾಡಂಡ ಶಶಿಕಲಾ ಪೂವಯ್ಯ ಪ್ರಾರ್ಥಿಸಿ, ಕಾರ್ಯದರ್ಶಿ ಉದಿಯಂಡ ಮೋಹನ್ ಪೆಮ್ಮಯ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರೂಪಣೆಯನ್ನು ಸಮಿತಿ ಸದಸ್ಯ ಅಪ್ಪುಮಣಿಯಂಡ ಸನ್ನು ಸೋಮಣ್ಣ ಮಾಡಿದರು.