ಪೊನ್ನAಪೇಟೆ, ನ. ೯: ಅಕ್ರಮವಾಗಿ ಗಂಡು ಚುಕ್ಕಿ ಜಿಂಕೆಯನ್ನು ಬೇಟೆಯಾಡಿ ಕೊಂದು, ಮಾಂಸಮಾಡಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊನ್ನಂಪೇಟೆ ಅರಣ್ಯ ವಲಯ ಮತ್ತು ನಾಗರಹೊಳೆ ವ್ಯಾಪ್ತಿಯ ಕಲ್ಲಳ್ಳ ವನ್ಯಜೀವಿ ವಲಯ ಅರಣ್ಯಾಧಿ ಕಾರಿಗಳು ಜಂಟಿ ಕಾರ್ಯಾ ಚರಣೆ ನಡೆಸಿ ಬಂಧಿಸಿದ್ದಾರೆ.

ಪೊನ್ನAಪೇಟೆ ತಾಲೂಕಿನ ನಿಟ್ಟೂರು ಗ್ರಾಮದ

ಬಿ.ಸಿ. ಜೀವನ್ ಹಾಗೂ ವಿ.ಜಿ. ಲಿಂಗರಾಜು ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿರುವ ಇನ್ನೂ ಮೂವರು ಆರೋಪಿಗಳಾದ ನಿಟ್ಟೂರು

(ಮೊದಲ ಪುಟದಿಂದ) ಕಾರ್ಮಾಡು ಗ್ರಾಮದ ಶರತ್, ಚೇತನ್ ಹಾಗೂ ಸ್ವಾಮಿ ಎಂಬವರು ತಲೆ ಮರೆಸಿಕೊಂಡಿದ್ದಾರೆ.

ಘಟನೆ ವಿವರ : ನಿಟ್ಟೂರು ಗ್ರಾಮದ ಬಿ.ಸಿ. ಜೀವನ್, ತಮ್ಮ ಲೈಸನ್ಸ್ ಕೋವಿಯೊಡನೆ, ಶರತ್ ಎಂಬವನೊAದಿಗೆ ಬೇಟೆಗೆ ತೆರಳಿ, ಕಲ್ಲಳ್ಳ ವನ್ಯ ಜೀವಿ ವಲಯ ಪ್ರದೇಶಕ್ಕೆ ಸಮೀಪದ ಸ್ಥಳದಲ್ಲಿ ಗಂಡು ಚುಕ್ಕಿ ಜಿಂಕೆಯನ್ನು ಗುಂಡು ಹೊಡೆದು ಕೊಂದು ಹಾಕಿದ್ದರು. ಕೊಂದ ಜಿಂಕೆಯನ್ನು ಮಾಂಸ ಮಾಡುವ ಕೆಲಸಕ್ಕೆ ಪರಿಚಯಸ್ಥರನ್ನು ಬರಮಾಡಿ ಕೊಂಡು ಜಿಂಕೆಯನ್ನು ಮಾಂಸ ಮಾಡಿ ಹಂಚಿಕೊAಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಬೇಟೆಗೆ ಬಳಸಿದ ಕೋವಿ, ಒಂದು ಖಾಲಿ ಕಾಡತೂಸು, ೫ ಜೀವಂತ ಕಾಡತೂಸು, ಸುಮಾರು ಎರಡೂವರೆಯಿಂದ ಮೂರು ಕಿ.ಗ್ರಾಂ.ನಷ್ಟು ಬೇಯಿಸಿದ ಜಿಂಕೆ ಮಾಂಸ, ಎರಡು ಕೊಂಬುಗಳುಳ್ಳ ಜಿಂಕೆಯ ತಲೆ ಬುರುಡೆಯನ್ನು ವಶಪಡಿಸಿ ಕೊಂಡಿದ್ದಾರೆ. ಬಂಧಿತ ಆರೋಪಿ ಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ತಲೆ ಮರೆಸಿ ಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.

ಪೊನ್ನAಪೇಟೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಶಾಂತೇಶ್ ಅವರು ವಶಪಡಿಸಿಕೊಂಡ ಜಿಂಕೆ ಮಾಂಸವನ್ನು ಪರಿಶೀಲಿಸಿ, ದೃಢೀಕರಿಸಿದ್ದು, ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಡಿಎಫ್‌ಓ ಶರಣ ಬಸಪ್ಪ, ಎಸಿಎಫ್ ಕೆ.ಪಿ.ಗೋಪಾಲ್ ಅವರ ನಿರ್ದೇಶನದ ಮೇರೆಗೆ, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ.ಎಂ.ಶAಕರ್ ಅವರ ಮಾರ್ಗ ದರ್ಶನದಲ್ಲಿ, ಉಪ ವಲಯ ಅರಣ್ಯಾ ಧಿಕಾರಿ ಕೆ.ಜಿ. ದಿವಾಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಲ್ಲಳ್ಳ ಉಪ ವಲಯ ಅರಣ್ಯಾಧಿಕಾರಿ ವಿಲಾಸ್ ಪವರ್, ಗಸ್ತು ಅರಣ್ಯ ಪಾಲಕರಾದ ಬಸಪ್ಪ, ವಿರೇಶ್, ಸಂತೋಷ್, ಯೋಗೇಶ್ ಹಾಗೂ ಆರ್‌ಆರ್‌ಟಿ ಸಿಬ್ಬಂದಿ ಪಾಲ್ಗೊಂಡಿದ್ದರು.

-ಚನ್ನನಾಯಕ