ಮಡಿಕೇರಿ, ನ. ೯: ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡುವಿನ ಕೊಯಮತ್ತೂರುವಿನಲ್ಲಿ ನಡೆಯುತ್ತಿರುವ ೩೮ನೇ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಯುವ ಕ್ರೀಡಾಪ್ರತಿಭೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಬೊಳ್ಳಂಡ ಉನ್ನತಿ ಅಯ್ಯಪ್ಪ ೧೦೦ ಮೀಟರ್ ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ. ಈ ಅಂತರವನ್ನು ಉನ್ನತಿ ೧೩.೯೮ ಸೆಕೆಂಡ್ಸ್ನಲ್ಲಿ ಕ್ರಮಿಸುವ ಮೂಲಕ ಮೊದಲಿಗರಾಗಿದ್ದಾರೆ. ಈ ಸಾಧನೆಯಿಂದಾಗಿ ಇವರು ಮುಂದಿನ ವರ್ಷ ಜರುಗಲಿರುವ ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಉನ್ನತಿ ಮಡಿಕೇರಿಯ ನಿವಾಸಿ ಬೆಂಗಳೂರಿನಲ್ಲಿರುವ ರಾಷ್ಟಿçÃಯ ಅಥ್ಲೆಟಿಕ್ ತರಬೇತುದಾರ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ ದಂಪತಿಯ ಪುತ್ರಿ.