ಮಡಿಕೇರಿ, ನ. ೮: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಬಾಳುಗೋಡುವಿನಲ್ಲಿರುವ ಫೀ.ಮಾ. ಕಾರ್ಯಪ್ಪ ಕೊಡವ ಸಾಂಸ್ಕೃತಿಕ ಕೇಂದ್ರ ಹಾಗೂ ಕ್ರೀಡಾ ಸಮುಚ್ಚಯದಲ್ಲಿ ೯ನೇ ವರ್ಷದ ಕೊಡವ ನಮ್ಮೆ ಕಾರ್ಯಕ್ರಮ ಈ ಬಾರಿ ತಾ. ೧೭ ರಿಂದ ೧೯ರವರೆಗೆ ಜರುಗಲಿದೆ. ಅಂತರ ಕೊಡವ ಸಮಾಜಗಳ ನಡುವೆ ಹಾಕಿ ಪಂದ್ಯಾವಳಿ, ಸಾಂಸ್ಕೃತಿಕ-ಜನಪದ ಪೈಪೋಟಿ ಹಾಗೂ ಕೇಂದ್ರದ ಆವರಣದಲ್ಲಿ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದೊಂದಿಗೆ ಕಳೆದ ೮ ವರ್ಷಗಳಿಂದ ಈ ಕೊಡವ ನಮ್ಮೆ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಇದಕ್ಕೆ ಸಿದ್ಧತೆ ನಡೆದಿದೆ.

ಕೊಡವ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಆಸಕ್ತಿ ಮೂಡಿಸುವುದರೊಂದಿಗೆ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು, ಕ್ರೀಡೆಗೆ ಉತ್ತೇಜನ ನೀಡುವುದು ಹಾಗೂ ದೇಶಕ್ಕಾಗಿ ದುಡಿದವರಿಗೆ ಗೌರವ ಸಮರ್ಪಣೆಯೊಂದಿಗೆ ಸೇನೆಯ ಬಗ್ಗೆ ಯುವ ಜನಾಂಗಕ್ಕೆ ಪ್ರೇರೇಪಣೆ ನೀಡುವ ಚಿಂತನೆಯೊAದಿಗೆ ಈ ಕಾರ್ಯಕ್ರಮ ವರ್ಷಂಪ್ರತಿ ಜರುಗುತ್ತಿದೆ.

ಜಿಲ್ಲೆಯ ಕೊಡವ ಸಮಾಜಗಳು ಸೇರಿದಂತೆ ಬೆಂಗಳೂರು, ಮೈಸೂರು ಮತ್ತಿತರ ಕಡೆಗಳಲ್ಲಿರುವ ಇನ್ನಿತರ ಕೊಡವ ಸಮಾಜಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತವೆ. ಇದನ್ನು ಅಂತರ ಕೊಡವ ಸಮಾಜಗಳ ನಡುವಿನ ಪೈಪೋಟಿಯೊಂದಿಗೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಅವರುಗಳು ತಿಳಿಸಿದ್ದಾರೆ. ಈ ಬಾರಿಯ ಹಾಕಿ ಪಂದ್ಯಾವಳಿ ಮೊದಲ ದಿನವಾದ ತಾ.೧೭ರಂದು ಉದ್ಘಾಟನೆಗೊಳ್ಳಲಿದೆ. ಇದರ ಟೈಸ್ ಡ್ರಾ ಪ್ರಕ್ರಿಯೆ ತಾ.೧೦ರಂದು ನಡೆಯಲಿದೆ. ತಾ.೧೮ರಂದು ಕೇಂದ್ರದ ಆವರಣದಲ್ಲಿರುವ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಯೊAದಿಗೆ ಗೌರವ ಸಮರ್ಪಣೆ, ಬಳಿಕ ಸಭಾ ಕಾರ್ಯಕ್ರಮ ಜರುಗಲಿದೆ. ತಾ.೧೯ರಂದು ಬೆಳಿಗ್ಗೆಯಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನ, ಜನಪದ ಪೈಪೋಟಿ, ಅಪರಾಹ್ನ ಹಾಕಿ ಪಂದ್ಯಾವಳಿಯ ಫೈನಲ್ ನಡೆಯಲಿದೆ.

ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಿವೃತ್ತ ಮೇಜರ್ ಜನರಲ್ ಬಾಚಮಂಡ ಎ. ಕಾರ್ಯಪ್ಪ ಅವರು೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಪಾಲ್ಗೊಳ್ಳಲಿದ್ದಾರೆ. ಸಮಾರೋಪ ದಿನದಂದು ಅತಿಥಿಗಳಾಗಿ ಸಂಸದರಾದ ಪ್ರತಾಪ್ ಸಿಂಹ, ಶಾಸಕ ಎ.ಎಸ್. ಪೊನ್ನಣ್ಣ, ಎಂ.ಎಲ್.ಸಿ. ಸುಜಾ ಕುಶಾಲಪ್ಪ ಮತ್ತಿತರರು ಭಾಗವಹಿಸಲಿದ್ದಾರೆ. ಮೂರು ದಿನಗಳಲ್ಲೂ ಅಪರಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕಾಳಿಮಾಡ ಮೋಟಯ್ಯ ಅವರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸಮಿತಿ ಇದ್ದು, ಸಂಚಾಲಕರಾಗಿ ಹಂಚೆಟ್ಟಿರ ಮನು ಮುದ್ದಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರೀಡಾ ಸಮಿತಿ ಅಧ್ಯಕ್ಷರಾಗಿ ತಂಬುಕುತ್ತಿರ ಮಧು ಮಂದಣ್ಣ, ಸಂಚಾಲಕರಾಗಿ ಕಂಬೀರAಡ ಕಿಟ್ಟು ಕಾಳಪ್ಪ, ಊಟೋಪಚಾರ ಸಮಿತಿ ಅಧ್ಯಕ್ಷರಾಗಿ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ನೂತನ ಮೈದಾನ:

ಕೇಂದ್ರದಲ್ಲಿನ ಕ್ರೀಡಾ ಮೈದಾನವನ್ನು ಇದೀಗ ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ ಎರಡು ಮೈದಾನಗಳಿದ್ದು, ಇದೀಗ ಸಂಸದ ಪ್ರತಾಪ್‌ಸಿಂಹ ಅವರು ಒದಗಿಸಿರುವ ರೂ. ೪೦ ಲಕ್ಷ ಅನುದಾನದಲ್ಲಿ ವಿಶಾಲವಾದ ಒಂದೇ ಮೈದಾನವಾಗಿ ಇದನ್ನು ಪರಿವರ್ತಿಸಲಾಗಿದೆ ಎಂದು ಶಂಕರಿ ಪೂವಯ್ಯ ಅವರು ತಿಳಿಸಿದ್ದಾರೆ.