ಸAದರ್ಶನ : ಅನಿಲ್ ಎಚ್.ಟಿ.

ಬೆಂಗಳೂರು, ನ. ೯: ಭಾರತೀಯ ಕಾಫಿಯನ್ನು ಜಗತ್ತೇ ಗಮನಿಸುತ್ತಿರುವ ಈ ದಿನಗಳಲ್ಲಿ ಭಾರತೀಯ ಕಾಫಿ ಮಂಡಳಿ ಮೂಲಕ ‘ಕಾಫಿ ಕನೆಕ್ಟ್’ ಎಂಬ ವಿನೂತನ ಯೋಜನೆಯೊಂದಿಗೆ ಕಾಫಿ ಕೃಷಿ, ಉದ್ಯಮದಲ್ಲಿ ಹೊಸ ಚಿಂತನೆ, ನವ ಯೋಜನೆ ಜಾರಿಗೆ ಮುಂದಾಗುವೆ ಎಂದು ಕಾಫಿ ಮಂಡಳಿಯ ನೂತನ ಅಧ್ಯಕ್ಷ ದಿನೇಶ್ ದೇವವೃಂದ ಹೇಳಿದ್ದಾರೆ.

ಬೆಂಗಳೂರಿನ ಕಾಫಿ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಮಂಡಳಿಯ ನೂತನ ಅಧ್ಯಕ್ಷರಾಗಿ ೩ ವರ್ಷಗಳ ಅವಧಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ‘ಶಕ್ತಿ’ಗೆ ಮೊದಲ ಸಂದರ್ಶನ ನೀಡಿದ ದಿನೇಶ್ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಬೋಜೇಗೌಡ ಮೂಲಕ ಕಾಫಿ ಮಂಡಳಿಗೆ ನಾಲ್ಕು ವರ್ಷಗಳ ಮೊದಲು ಪ್ರಥಮ ಬಾರಿಗೆ ಕಾಫಿ ಬೆಳೆಗಾರರೋರ್ವರು ಅಧ್ಯಕ್ಷರಾಗಿದ್ದರು. ಈ ಮೂಲಕ ಅಧಿಕಾರಿಗಳ ಬದಲಾಗಿ ಬೆಳೆಗಾರರೇ ಕಾಫಿ ಮಂಡಳಿಯ ಅಧ್ಯಕ್ಷರಾಗಬೇಕೆಂಬ ಬೆಳೆಗಾರ ಸಮುದಾಯದ ಬೇಡಿಕೆಗೆ ಕೇಂದ್ರ ಸರ್ಕಾರ ಮನ್ನಣೆ ನೀಡಿತ್ತು. ಎರಡನೇ ಅವಧಿಗೂ ಮುಂದುವರೆದಿದ್ದ ಬೋಜೇಗೌಡ ಕಳೆದ ವರ್ಷ ತೋಟದಲ್ಲಿ ಹೆಜ್ಜೇನು ದಾಳಿ ಹಿನ್ನೆಲೆಯಲ್ಲಿ ಜೇನು ಕಚ್ಚಿ ಸಾವನ್ನಪ್ಪಿದ್ದರು. ಹೀಗಾಗಿ ವರ್ಷದಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಇದೀಗ ಕೇಂದ್ರ ವಾಣಿಜ್ಯ ಸಚಿವಾಲಯ ಮಧ್ಯಮ ಬೆಳೆಗಾರರಾದ ದಿನೇಶ್ ದೇವವೃಂದ ಎಂಬ ಪತ್ರಕರ್ತರನ್ನು ಕಾಫಿ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದೆ. ಬೆಳೆಗಾರ ಸಮುದಾಯದೊಂದಿಗೆ ಹಲವಾರು ವರ್ಷಗಳಿಂದ ನಿಕಟ ಸಂಪರ್ಕ ಹೊಂದಿರುವ ದಿನೇಶ್ ಆಯ್ಕೆ ಕಾಫಿ ಬೆಳೆಗಾರ ವಲಯದಲ್ಲಿ ಶ್ಲಾಘನೆಗೆ ಕಾರಣವಾಗಿದೆ.

ವಾರ್ಷಿಕ ೩೦೦ ಕೋಟಿ ರೂ.ಗಳ ಬಜೆಟ್ ಹೊಂದಿರುವ ಕಾಫಿ ಮಂಡಳಿಗೆ ಅಧ್ಯಕ್ಷರಾದ ನಂತರ ತನ್ನ ಮುಂದಿನ ಕಾರ್ಯಯೋಜನೆಗಳ ಬಗ್ಗೆ ದಿನೇಶ್ ದೇವವೃಂದ ಮಾಹಿತಿಯನ್ನು ಹಂಚಿಕೊAಡರು.

ಭಾರತೀಯ ಕಾಫಿ ಮಂಡಳಿಯ ನೂತನ ಅಧ್ಯಕ್ಷರ ಅನಿಸಿಕೆಗಳ ಪ್ರಮುಖ ಅಂಶಗಳು ಇಲ್ಲಿವೆ

ಸಮಸ್ಯೆ ಎದುರಿಸಿಯೇ ಮೇಲೆ ಬಂದವನು ನಾನು. ಕಾಫಿ ತೋಟ, ಉದ್ಯಮದ ಹಲವು ಸಮಸ್ಯೆಗಳು, ವ್ಯವಸ್ಥೆಗಳ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡಿದ್ದೇನೆ.

ಸಣ್ಣ ಬದಲಾವಣೆಗಳ ಮೂಲಕ ದೊಡ್ಡದಾಗಿ ಕಾಫಿಯನ್ನು ಪರಿಚಯಿಸಲು ಸಾಧ್ಯವಿದೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ವಿಶ್ವಕಾಫಿ ಸಮ್ಮೇಳನವು ಭಾರತೀಯ ಮೂಲದ ಕಾಫಿಯ ಮಹತ್ವವನ್ನು ಜಗತ್ತಿಗೆ ಸಾರಿದೆ. ಹೀಗಾಗಿ ಈಗ ವಿಶ್ವದ ಕಾಫಿ ಉದ್ಯಮ ಭಾರತದ ಕಾಫಿ ಉದ್ಯಮದತ್ತ ದೃಷ್ಟಿ ನೆಟ್ಟಿದೆ. ಈ ನಿಟ್ಟಿನಲ್ಲಿ ಕಾಫಿ ಮಂಡಳಿಯು ಪ್ರಮುಖ ಹೆಜ್ಜೆ ಇರಿಸಬೇಕಾಗಿದೆ. ಭಾರತೀಯ ಕಾಫಿಗೆ ಲಭಿಸಿರುವ ಈ ಮಾನ್ಯತೆಯನ್ನು ಹೇಗೆ ವಿಶ್ವಮಟ್ಟದಲ್ಲಿ ಸಕಾರಾತ್ಮಕವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಕಾಫಿ ಮಂಡಳಿ ವಿಳಂಬ ರಹಿತವಾಗಿ ಯೋಜನೆ ರೂಪಿಸುವ ಅಗತ್ಯವಿದೆ. ಲಭಿಸಿರುವ ಮಾನ್ಯತೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಅದು ಭಾರತೀಯ ಕಾಫಿ ಬೆಳೆಗಾರರು ಮತ್ತು ಕಾಫಿ ಉದ್ಯಮಕ್ಕೂ ಬಹಳಷ್ಟು ರೀತಿಯಲ್ಲಿ ನೆರವಾಗಬಲ್ಲದು. ಭಾರತೀಯ ಕಾಫಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತದೆ ಎಂದು ಇಂಗಿತ ವ್ಯಕ್ತಪಡಿಸಿದರು.

ಕಾಫಿ ಸಸಿಗಳ ನರ್ಸರಿ ಮಾಡುವ ಬೆಳೆಗಾರನಿಂದ ಮೊದಲ್ಗೊಂಡು, ಕಾಫಿ ಬೆಳೆಗಾರ, ಕಾಫಿ ಕಾರ್ಮಿಕ, ಕಾಫಿ ಖರೀದಿದಾರ, ಕಾಫಿ ಉದ್ಯಮಿ, ಕಾಫಿ ಕಾರ್ಮಿಕ, ಕಾಫಿ ಮಾರಾಟಗಾರ, ಕಾಫಿ ಕೆಫೆ, ಜಾಗತಿಕ ಮಟ್ಟದಲ್ಲಿ ಕಾಫಿಯನ್ನು ಖರೀದಿಸುವ ರಫ್ತುದಾರ ಕಾಫಿ ಸಂಸ್ಥೆಗಳು ಇಂಥ ಬೇರೆ ಬೇರೆ ಒಂದಕ್ಕೊAದು ಸಂಪರ್ಕ ಕಳೆದುಕೊಂಡಿರುವ ಆದರೆ ಕಾಫಿಯ ಅಂಗವೇ ಆಗಿರುವವರನ್ನು ಒಂದೇ ವೇದಿಕೆಗೆ ತರುವ ಕೆಲಸಕ್ಕೆ ಆದ್ಯತೆ ನೀಡಲಿದ್ದೇನೆ. ಇದಕ್ಕೆ ‘ಕಾಫಿ ಕನೆಕ್ಟ್’ ಎಂಬ ಹೆಸರಿನ ಯೋಜನೆ ರೂಪಿಸಲಾಗುತ್ತದೆ. ಪರಸ್ಪರ ಸಮನ್ವಯತೆಯನ್ನು ಕಾಫಿ ಕೃಷಿಗೆ ಸಂಬAಧಿಸಿದAತೆ ತರುವುದೇ ನನ್ನ ಪ್ರಥಮ ಉದ್ದೇಶವಾಗಿದೆ.

ತಂತ್ರಜ್ಞಾನದ ಮೂಲಕ ಸಣ್ಣ ಬೆಳೆಗಾರರನ್ನು ತಲುಪಿಸುವ ಪ್ರಯತ್ನ ಮಾಡುವೆ. ನಾನು ಈಗಾಗಲೇ ಕಾಫಿಗೆ ಸಂಬAಧಿಸಿದAತೆ ಆ್ಯಪ್ ರೂಪಿಸಿ ಯಶಸ್ವಿಯಾಗಿದ್ದೇನೆ. ಕಾಫಿ ಕನೆಕ್ಟ್ನಲ್ಲಿ ಆ್ಯಪ್ ಸೇರಿದಂತೆ ಸಂಪರ್ಕ ಮಾಧ್ಯಮಗಳು ಮುಖ್ಯವಾಗಿರುತ್ತದೆ. ನವ ತಂತ್ರಜ್ಞಾನದ ಯುಗದಲ್ಲಿ ನಾವಿದ್ದೇವೆ. ತಾಂತ್ರಿಕತೆ ಕಾಫಿಯ ಮಾರುಕಟ್ಟೆಯಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಇದೇ ತಾಂತ್ರಿಕತೆಯನ್ನೂ ಬೆಳೆಗಾರರು - ಉದ್ಯಮಿಗಳ ನಡುವಿನ ಬೆಸುಗೆಯಾಗಿ ಬಳಸಿಕೊಂಡದ್ದೇ ಆದಲ್ಲಿ ಖಂಡಿತ ಭಾರತೀಯ ಕಾಫಿ ಮತ್ತೊಂದು ಎತ್ತರವನ್ನು ತಲುಪಲು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಓರ್ವ ಮಧ್ಯಮ ಬೆಳೆಗಾರನಾಗಿ ಆ್ಯಪ್ ನಂಥ ಸಾಮಾಜಿಕ ಮಾಧ್ಯಮದ ಮೂಲಕ ಉತ್ತಮ ಬೆಲೆಯನ್ನೇ ನಾನು ಬೆಳೆದ ಕಾಫಿಗೆ ಪಡೆಯುತ್ತಿದ್ದೇನೆ. ನಾನೇ ಲಾಭ ಪಡೆಯುತ್ತಿದ್ದೇನೆಂದರೆ ಇದೇ ಲಾಭ ಉಳಿದ ಬೆಳೆಗಾರರಿಗೂ ದೊರಕುವ ನಿಟ್ಟಿನಲ್ಲಿ ನನ್ನ ಮಾದರಿಯನ್ನೇ ಬಳಸಿಕೊಂಡು ಮುಂದೆ ಸಾಗಲಿದ್ದೇನೆ. ಬೆಳೆಗಾರನಿಗೆ ಸೇರಿದ ಒಂದು ಕಡತ, ಕಾಫಿ ಮಂಡಳಿಯ ಯಾವುದೇ ಕಚೇರಿಗೆ ಬಂದರೂ ಆ ಕಡತ ಯಾವ ಸ್ಥಿತಿಯಲ್ಲಿದೆ. ಹಂತಹAತವಾಗಿ ಕಡತ ತಲುಪುತ್ತಿರುವ ಪ್ರಕ್ರಿಯೆ ಬಗ್ಗೆ ಆ್ಯಪ್ ಮೂಲಕ ಕಡತ ನೀಡಿದವನಿಗೆ ಮಾಹಿತಿ ದೊರಕಿಸುವ ಚಿಂತನೆ ಕೂಡ ನನ್ನಲ್ಲಿದೆ. ಹೀಗಾಗಿ ಹೆಚ್ಚಿನ ಅಧಿಕಾರಿ, ಸಿಬ್ಬಂದಿಗಳಿಲ್ಲದೇ ತಂತ್ರಜ್ಞಾನದ ಮೂಲಕವೇ ಕಾರ್ಯಪ್ರವೃತ್ತರಾಗುವುದು ಮತ್ತು ಮಾಹಿತಿ ನೀಡಲು ಸಾಧ್ಯವಿದೆ ಎಂಬುದನ್ನು ನಿರೂಪಿಸಬೇಕಾದ ದೊಡ್ಡ ಸವಾಲು ನನ್ನ ಮುಂದಿದೆ. ಭಾರತೀಯ ಕಾಫಿಗೆ ಬಹಳ ಒಳ್ಳೆಯ ಭವಿಷ್ಯ ಇದೆ. ಆದರೆ ಅದನ್ನು ಹೇಗೆ ನಾವು ಜಾಗತಿಕ ಮಟ್ಟದಲ್ಲಿ ಬಳಸಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ.

ಕಾಫಿ ಮಂಡಳಿಗೂ ಕಾಯಕಲ್ಪ ಕೊಡಬೇಕಾಗಿದೆ. ಅಧಿಕಾರಿ, ಸಿಬ್ಬಂದಿಗಳ ಕೊರತೆ ಇರುವುದು ವಾಸ್ತವ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹೊಸ ನೇಮಕಾತಿ ಸಾಧ್ಯವಾಗಲಾರದು. ಇದರ ಬದಲಿಗೆ, ಇರುವ ಅಧಿಕಾರಿ, ಸಿಬ್ಬಂದಿಗಳನ್ನೇ ಬಳಸಿಕೊಂಡು ಯಾವ ರೀತಿಯಲ್ಲಿ ಯಶಸ್ವಿ ಕಾರ್ಯ ಸಾಧ್ಯವಾಗಲಿದೆ ಎಂಬುದನ್ನು ಗಮನಿಸಬೇಕಾಗಿದೆ. ಹಾಗೇ ವಿದೇಶಗಳಲ್ಲಿ ಕಾಫಿ ಕೃಷಿ, ಉದ್ಯಮದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಲಾಗಿದೆ. ಭಾರತೀಯ ಕಾಫಿ ಗುಣಮಟ್ಟದಲ್ಲಿ ಉತ್ತಮವಾಗಿದ್ದರೂ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿದೆ. ಈ ಬಗ್ಗೆಯೂ ಗಮನ ನೀಡಲಿದ್ದೇನೆ ಎಂದು ತನ್ನ ಗುರಿಯ ಬಗ್ಗೆ ವಿವರಿಸಿದರು.

ನನ್ನ ಆಯ್ಕೆ ಅನಿರೀಕ್ಷಿತ, ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಗುರುತಿಸಲ್ಪಟ್ಟವನು ನಾನು. ಮಧ್ಯಮ ಬೆಳೆಗಾರನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಇಂತಿರುವಾಗ ಕೇಂದ್ರ ಸರ್ಕಾರದ ಮಟ್ಟದಲ್ಲಿ ನನ್ನಂಥ ಮಧ್ಯಮ ಬೆಳೆಗಾರನನ್ನು ಗುರುತಿಸಿ ಕಾಫಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಿದ್ದು ಹೆಮ್ಮೆ ತಂದಿದೆ.

ಈ ಲೆಕ್ಕಾಚಾರವನ್ನು ಸೂಕ್ಷö್ಮವಾಗಿ ಗಮನಿಸಿ ನೋಡಿ, ನಾವು ೩.೫೦ ಲಕ್ಷ ಟನ್ ಕಾಫಿಯನ್ನು ಕೇವಲ ೩ ತಿಂಗಳಲ್ಲಿ ಕುಯ್ಲು ಮಾಡುತ್ತೇವೆ. ಅಂದರೆ, ೩.೦೫ ರೂಪಾಯಿ ಕೆಜಿ. ಕಾಫಿಗೆ ಮೌಲ್ಯ ಹಾಕಿದರೆ ಅದು ೭೦೦ ಕೋಟಿ ರೂ. ಗಳಾಗುತ್ತದೆ. ಇಷ್ಟು ಪ್ರಮಾಣದ ಹಣವನ್ನು ಕೇವಲ ೩ ತಿಂಗಳಿಗೆ ನಾವು ಕಾರ್ಮಿಕರಿಗೆ ವಿನಿಯೋಗಿಸುತ್ತಿದ್ದೇವೆ.

ಇತರ ಉದ್ಯಮದಂತೆ ಕಾಫಿ ಕೃಷಿಕರು ಶಿಕ್ಷಣವಂತರಲ್ಲ, ವೃತ್ತಿಪರರಲ್ಲ. ನಾವು ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ನೀಡುತ್ತಾ ಬಂದಿದ್ದೇವೆ. ತಾಂತ್ರಿಕತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿದ್ದೇ ಆದಲ್ಲಿ ಖಂಡಿತವಾಗಿಯೂ ಕಾಫಿ ಉದ್ಯಮ ೨೦೦ ಕೋಟಿ ರೂ.ಗಳನ್ನು ವಾರ್ಷಿಕವಾಗಿ ಉಳಿಸಲು ಸಾಧ್ಯವಿದೆ. ಇದೇ ೨೦೦ ಕೋಟಿ ರೂ.ಗಳನ್ನು ಸಹಾಯ ಧನದ ರೂಪದಲ್ಲಿ ಬೆಳೆಗಾರರಿಗೆ ನೀಡಿದ್ದೇ ಆದಲ್ಲಿ ಅದು ಮಹತ್ವ ಪಡೆಯುತ್ತದೆ. ಆದರೆ, ಅದೇ ೨೦೦ ಕೋಟಿ ರೂ. ಗಳನ್ನು ತಾಂತ್ರಿಕತೆ ಬಳಸುವ ಮೂಲಕ ಉಳಿಕೆ ಮಾಡಿದ್ದಲ್ಲಿ ಹೆಚ್ಚಿನವರಿಗೆ ಮಹತ್ವ ಅನ್ನಿಸುವುದಿಲ್ಲ.

ಹೊಸ ರೀತಿಯಲ್ಲಿ, ನವ ಚಿಂತನೆಯೊAದಿಗೆ ಕಾಫಿ ಮಂಡಳಿಯನ್ನು ಕೊಂಡೊಯ್ಯುವೆ. ಇನ್ನೊಂದು ಗಮನಾರ್ಹ ಅಂಶ ಎಂದರೆ ನಾನೋರ್ವ ಪತ್ರಕರ್ತನಾಗಿ ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿರುವುದು ಹೆಮ್ಮೆ ಎನಿಸಿದೆ. ಪತ್ರಕರ್ತರಿಗೂ ಸಂದ ಗೌರವ ಇದಾಗಿದೆ. ಕೃಷಿಕ ಎಂಬ ಮಾಸಿಕ ಪತ್ರಿಕೆಯ ಮೂಲಕ ೧೭ ವರ್ಷಗಳಿಂದಲೂ ಕಾಫಿ ಉದ್ಯಮದ ವಿವಿಧ ಸಮಸ್ಯೆಗಳು, ಕಾಫಿಯ ವಿಭಿನ್ನ ಆಯಾಮಗಳನ್ನು ಪ್ರಕಟಿಸುತ್ತಾ ಬಂದಿದ್ದೇವೆ. ಹೊಸ ರೀತಿಯಲ್ಲಿ ಕೃಷಿಕರನ್ನೊಳಗೊಂಡAತೆ ಕೃಷಿಕ ಪತ್ರಿಕೆಯನ್ನು ರೂಪಿಸಿದ್ದೇನೆ. ಈ ಪತ್ರಿಕೆಯಿಂದಾಗಿಯೇ ನಾನು ಇಂದು ಭಾರತೀಯ ಕಾಫಿ ಮಂಡಳಿಯAಥ ಪ್ರತಿಷ್ಟಿತ ಸಂಸ್ಥೆಯ ಅಧ್ಯಕ್ಷನಾಗಲು ಸಾಧ್ಯವಾಗಿದೆ. ವಿನಮ್ರತೆಯ ಭಾವ ನನ್ನದಾಗಿದೆ ಎಂದು ದಿನೇಶ್ ಎಂ.ಜೆ. ತನ್ನ ಪ್ರಥಮ ಸಂದರ್ಶನದಲ್ಲಿ ಹೇಳಿದರು.