ಪೊನ್ನಂಪೇಟೆ, ನ. ೯ : ಬಿಟ್ಟಂಗಾಲ ಅಂಬಟ್ಟಿ ಗ್ರಾಮದ ದರ್ಗಾ ಶರೀಫ್ ನಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಶೇಕ್ ವಲಿಯುಲ್ಲಾಹಿರವರ ವಾರ್ಷಿಕ ಉರೂಸ್ (ಮಕ್ಕಾನಿ ನೇರ್ಚೆ) ಮುಂಬರುವ ಫೆಬ್ರವರಿ ತಿಂಗಳ ೧೬ ರಿಂದ ೨೦ ರವರೆಗೆ ಅದ್ದೂರಿಯಾಗಿ ನಡೆಸಲು ಅಂಬಟ್ಟಿ ಜುಮಾ ಮಸೀದಿ ಆಡಳಿತ ಮಂಡಳಿ ನಿರ್ಧರಿಸಿದೆ. ಫೆಬ್ರವರಿ ೧೯ರಂದು ಉರೂಸಿನ ಭಾಗವಾಗಿ ಸಾರ್ವಜನಿಕ ಸಮ್ಮೇಳನ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ಅಂಬಟ್ಟಿ ಜುಮಾ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎ. ಯೂಸುಫ್ ಅವರು ತಿಳಿಸಿದ್ದಾರೆ.