ವೀರಾಜಪೇಟೆ, ನ. ೯: ಒಕ್ಕಲಿಗರ ಯುವ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಲ್ಕನೇ ವರ್ಷದ ಶಟಲ್ ಬ್ಯಾಡ್‌ಮಿಂಟನ್ ಪಂದ್ಯಾಟವು ಬಿಟ್ಟಂಗಾಲ ಗ್ರಾಮದ ತಂಗಾಳಿ ಒಳಾಂಗಣ ಕ್ರೀಡಾ ಮೈದಾನ ದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಒಕ್ಕಲಿಗ ಜನಾಂಗದ ಸೇವೆಯನ್ನು ಯಾರು ಕೂಡ ಮರೆಯುವಂತಿಲ್ಲ, ಬೆಂಗಳೂರಿಗೆ ಕೆಂಪೇಗೌಡ ಅವರಿಂದ ಹಿಡಿದು ದೇವೆಗೌಡ, ಎಸ್.ಎಂ ಕೃಷ್ಣ ಅಂತಹ ಮಹಾನ್ ನಾಯಕರನ್ನು ಈ ಭೂಮಿಗೆ ಪರಿಚಯಿಸಿತು. ಮುಂದೆ ನಿಮ್ಮ ಜನಾಂಗದ ಯಾವುದೇ ಕಾರ್ಯಕ್ರಮಗಳಿಗೆ ತಮ್ಮ ಬೆಂಬಲ ವಿರುವುದಾಗಿ ಭರವಸೆ ಇತ್ತರು.

ಯುವ ವೇದಿಕೆ ಅಧÀ್ಯಕ್ಷ ವಿ.ಪಿ ಡಾಲು ಅವರ ಅಧ್ಯಕ್ಷತೆಯಲ್ಲಿ ಕಾರ್ಯ ಕ್ರಮ ಜರುಗಿತು. ಎರಡು ದಿನಗಳ ಕಾಲ ನಡೆದ ಕ್ರೀಡೆಯಲ್ಲಿ ಜನಾಂಗದ ಸುಮಾರು ಅರವತ್ತು ಮಂದಿ ಕ್ರೀಡಾ ಪಟುಗಳು ಭಾಗವಹಿಸಿದ್ದರು. ಮೂರು ಹಂತಗಳಲ್ಲಿ ಕ್ರೀಡಾ ಪಂದ್ಯಾಟವನ್ನು ನಡೆಸಲಾಯಿತು. ಹದಿನೇಳು ವರ್ಷದ ಒಳಗೆ, ಹದಿನೇಳು ವರ್ಷದಿಂದ ನಲವತೈದು ವರ್ಷದವರೆಗೆ, ನಲವತ್ತೆöÊದು ವರ್ಷಗಳ ಮೇಲ್ಪಟ್ಟ ವಯಸ್ಸಿನವರಿಗೆ ಪ್ರತ್ಯೇಕವಾಗಿ ಶಟಲ್ ಬ್ಯಾಡ್‌ಮಿಂಟನ್ ಕ್ರೀಡೆ ನಡೆಯಿತು. ಡಬಲ್ಸ್ ವಿಭಾಗದಲ್ಲಿ ನಡೆದ ಕ್ರೀಡೆಯಲ್ಲಿ ಮಹೇಶ್ ಹಾಗೂ ಭವಿನ್ ಪ್ರಥಮ, ಕಿಲನ್ ಹಾಗೂ ರಂಜಿತ ದ್ವಿತೀಯ ಸ್ಥಾನ ಪಡೆದರು. ಸಿಂಗಲ್ ವಿಭಾಗದಲ್ಲಿ ಕೀರ್ತನ ಚೆನ್ನಂಗಿ ಪ್ರಥಮ, ಜೀವನ್ ಹಾತೂರು ದ್ವಿತೀಯ, ಮಹಿಳಾ ವಿಭಾಗದಲ್ಲಿ ಸಹನ ಕೈಕೇರಿ, ಪ್ರಥಮ, ಕಾವ್ಯ ದ್ವಿತೀಯ, ಹಿರಿಯರ ವಿಭಾಗದಲ್ಲಿ ಡಾಲು ಚೆನ್ನಂಗಿ ಪ್ರಥಮ, ಕೃಷ್ಣ ಕುಮಾರ್ ದ್ವಿತೀಯ, ಮಕ್ಕಳ ವಿಭಾಗ ದಲ್ಲಿ ಗ್ರಂಥ ಕೈಕೇರಿ ಪ್ರಥಮ, ಶರಣ್ಯ ದ್ವಿತೀಯ, ಪ್ರೀತಂ ಪ್ರಥಮ, ದಿಗಂತ ಕೊಟೆಕೊಪ್ಪ ದ್ವಿತೀಯ, ಸ್ಥಾನ ಗಳಿಸಿದರು. ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷರು ಜನಾಂಗದ ಮುಖಂಡರು, ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು. ಈ ಸಂದರ್ಭ ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಜನಾಂಗದ ವತಿಯಿಂದ ಸನ್ಮಾನಿಸÀಲಾಯಿತು.