ಕುಶಾಲನಗರ, ನ. ೮: ಬ್ಯಾಂಕಿನಿAದ ಹಣ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಗಮನವನ್ನು ಬೇರೆಡೆಗೆ ಸೆಳೆದು ೨.೯ ಲಕ್ಷ ರೂಗಳನ್ನು ದರೋಡೆ ಮಾಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯದ ರಸ್ತೆಯಲ್ಲಿ ಮಧ್ಯಾಹ್ನ ವೇಳೆಯಲ್ಲಿ ಘಟನೆ ನಡೆದಿದ್ದು, ಕೊಪ್ಪ ಗ್ರಾಮದ ಕೃಷಿಕ ಒಹಿಲೇಶ್ (೫೨) ಎಂಬವರು ಹಣ ಕಳೆದುಕೊಂಡ ವ್ಯಕ್ತಿ.
ಕುಶಾಲನಗರ ಬ್ಯಾಂಕ್ ಆಫ್ ಬರೋಡದಲ್ಲಿ ಚಿನ್ನ ಅಡವಿಟ್ಟು ಹಣ ಪಡೆದು ನಂತರ ಕೃಷಿ ಸಾಲ ಮರುಪಾವತಿಗಾಗಿ ಕೆನರಾ ಬ್ಯಾಂಕ್‌ಗೆ ತೆರಳುವ ಸಂದರ್ಭ ಸ್ನೇಹಿತನನ್ನು ಕುಶಾಲನಗರ ಸರ್ಕಾರಿ ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಬಸ್ ನಿಲ್ದಾಣಕ್ಕೆ ಬಿಟ್ಟು ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಯ್ಯಪ್ಪ ಸ್ವಾಮಿ ರಸ್ತೆಯ ಕೇಬಲ್ ಆಫೀಸ್ ಎದುರುಗಡೆ ಹಿಂದಿನಿAದ ಬೈಕ್‌ನಲ್ಲಿ ಬಂದ ಇಬ್ಬರು ಆಗಂತುಕರು ನಿಮ್ಮ ಜೇಬಿನಿಂದ ಹಣ ಬೀಳುತ್ತಿದೆ ಎಂದು ತಿಳಿಸಿದ್ದು, ದ್ವಿಚಕ್ರವಾಹನವನ್ನು ನಿಲ್ಲಿಸಿ ಒಹಿಲೇಶ್ ಅವರು ಬಿದ್ದಿರುವ ಹಣವನ್ನು ತೆಗೆದುಕೊಳ್ಳುವ ಸಂದರ್ಭ ಆಗಂತುಕರು ಒಹಿಲೇಶ್ ಅವರ ರಸ್ತೆಯಲ್ಲಿ ಹಣ ಬೀಳಿಸಿ ವೈಲೇಶ್ ಗಮನವನ್ನು ಸೆಳೆದು ಈ ಸಂದರ್ಭದಲ್ಲಿ ಬೈಕ್ ನಲ್ಲಿ ಎದುರುಗಡೆ ಕವರ್ ನಲ್ಲಿ ಇರಿಸಿದ್ದ ೨.೯ ಲಕ್ಷ ಹಣವನ್ನು ಎಗರಿಸಿದ್ದಾರೆ.
ನಂತರ ಹಣದೊಂದಿಗೆ ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಕುಶಾಲನಗರ ಗಣಪತಿ ದೇವಸ್ಥಾನ ಮುಂಭಾಗ ತೆರಳಿ ಮೈಸೂರು ರಸ್ತೆಯಲ್ಲಿ ಪರಾರಿಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ದೊರೆತಿದೆ. ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಆಧರಿಸಿ ತನಿಖೆ ಮುಂದುವರಿದಿದೆ. ಎಸ್‌ಪಿ. ಕೆ ರಾಮರಾಜನ್, ಡಿವೈಎಸ್‌ಪಿ ಮೋಹನ್ ಕುಮಾರ್, ಠಾಣಾಧಿಕಾರಿಗಳಾದ ಹೆಚ್.ವಿ. ಚಂದ್ರಶೇಖರ್, ಗೀತಾ, ಮೋಹನ್, ರಾಜು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.