ಕೋವರ್ ಕೊಲ್ಲಿ ಇಂದ್ರೇಶ್
ಮೈಸೂರು, ನ. ೯: ವೈದ್ಯಕೀಯ ನಿರ್ಲಕ್ಷö್ಯದ ಘಟನೆಯೊಂದರಲ್ಲಿ ಜಿಲ್ಲೆಯ ಬೊಮ್ಮಾಡು ಗ್ರಾಮದ ಸೋನಿಯಾ ಎಂಬ ೧೨ರ ಹರೆಯದ ವಿಶೇಷಚೇತನ ಬಾಲಕಿ ಮೈಸೂರಿನ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೇ ಸಾವನ್ನಪ್ಪಿದ್ದಾಳೆ. ತೀವ್ರ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದ ಸೋನಿಯಾಳನ್ನು ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಲು ನಿರಾಕರಿಸಲಾಗಿದೆ ಎಂದು ಆರೋಪಿಸಲಾಗಿದೆ, ಆಕೆಯ ಸ್ಥಿತಿ ಗಂಭೀರವಾಗಿದ್ದರೂ, ಅವರ ಕುಟುಂಬವು ಆ್ಯಂಬ್ಯುಲೆನ್ಸ್ನಲ್ಲಿ ಸುಮಾರು ಆರು ಗಂಟೆಗಳ ಕಾಲ ಕಾಯುವಂತೆ ಮಾಡಲಾಗಿತ್ತು. ಕೊಡಗು ಮೂಲದ ಮೈಸೂರಿನ ೧ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಮುಖ್ಯ ನ್ಯಾಯಿಕ ಮ್ಯಾಜಿಸ್ಟೆçÃಟ್ ಎ.ಜಿ. ಶಿಲ್ಪಾ ಅವರು ಮಧ್ಯಪ್ರವೇಶಿಸಿದ ನಂತರವೇ ಆಕೆಯನ್ನು ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು.
ಆದರೆ, ಅಕ್ಟೋಬರ್ ೩೧ ರಂದು ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಮೂವರು ಅಧಿಕಾರಿಗಳ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆ ಹಾಗೂ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣದ ವಿವರ
ವೀರಾಜಪೇಟೆ ತಾಲೂಕಿನ ಬೊಮ್ಮಾಡು ಗ್ರಾಮದ ಗಿರಿಜನ ಕುಟುಂಬದ ಸಂಗೀತ ಮತ್ತು ಅಫ್ಜಲ್ ದಂಪತಿಯ ಪುತ್ರಿ ಆಗಿರುವ ಸೋನಿಯಾ ಅಕ್ಟೋಬರ್ ೨೬ ರಂದು ತೀವ್ರವಾದ ಉಸಿರಾಟದ ತೊಂದರೆಗಳಿAದ ಬಳಲಿದಾಗ ಗ್ರಾಮಕ್ಕೆ ಹತ್ತಿರದ ವೈದ್ಯಕೀಯ ಕೇಂದ್ರವಾದ ಗೋಣಿಕೊಪ್ಪಲು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಸ್ಥಳೀಯ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ಲಭ್ಯವಿಲ್ಲದ ಕಾರಣ ಸೋನಿಯಾಳನ್ನು ಮಡಿಕೇರಿಗೆ ಕರೆದುಕೊಂಡು ಹೋಗುವಂತೆ ಪೋಷಕರನ್ನು ಕೋರಲಾಗಿತ್ತು. ನಂತರ ಆಕೆಯ ಪೋಷಕರು ಆಕೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆಗೆ ಹೃದಯ ಸಂಬAಧಿ ಕಾಯಿಲೆ ಇದೆ ಮತ್ತು ಚಿಕಿತ್ಸೆ ಅಗತ್ಯವಿದೆ ಎಂದು ಕಾರಣ ನೀಡಿ ಮೈಸೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರು.
ದಿನಗೂಲಿ ಕೆಲಸ ಮಾಡುವ ಸಂಗೀತಾ ಮತ್ತು ಅಫ್ಜಲ್ ಕಷ್ಟಪಟ್ಟು ಹಣ ಸಂಗ್ರಹಿಸಿ, ಮೈಸೂರಿಗೆ ಕರೆದೊಯ್ಯಲು ಖಾಸಗಿ ಆ್ಯಂಬ್ಯುಲೆನ್ಸ್ನಲ್ಲಿ ಯಶಸ್ವಿಯಾದರು. ಮೈಸೂರಿನಲ್ಲಿ ಯಾರೊಬ್ಬರನ್ನೂ ತಿಳಿದಿಲ್ಲದ ದಂಪತಿ, ನಗರದಲ್ಲಿ ಮ್ಯಾಜಿಸ್ಟೆçÃಟ್ ಆಗಿರುವ ತಮ್ಮದೇ ಗ್ರಾಮದ ಎ.ಜಿ. ಶಿಲ್ಪಾ ಅವರನ್ನು ಸಂಪರ್ಕಿಸಿದರು. ಸೋನಿಯಾಳನ್ನು ಮೈಸೂರಿಗೆ ಕರೆತಂದು ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮ್ಯಾಜಿಸ್ಟೆçÃಟ್ ದಂಪತಿಗೆ ಹೇಳಿದ್ದಾರೆ. ಆದರೆ ಆಕೆಗೆ ಹೃದಯ ಸಂಬAಧಿ ಸಮಸ್ಯೆ ಇಲ್ಲದ ಕಾರಣ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಾಗಿರುವ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಸೋನಿಯಾಳನ್ನು ಚೆಲುವಾಂಬಕ್ಕೆ ಕರೆದುಕೊಂಡು ಹೋದಾಗ ಅಲ್ಲಿಯ ಡ್ಯೂಟಿ ಡಾಕ್ಟರ್ ಹಾಸಿಗೆ ಲಭ್ಯವಿಲ್ಲ ಎಂಬ ಕಾರಣಕ್ಕೆ ಮಗುವನ್ನು ಸೇರಿಸಿಕೊಳ್ಳಲು ನಿರಾಕರಿಸಿದರು ಎನ್ನಲಾಗಿದೆ. ಇದರಿಂದ ಆತಂಕಗೊAಡ ಪೋಷಕರು ಸೋನಿಯಾ ಅವರನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಕರೆದೊಯ್ದರು, ಮುಂದಿನ ೧೦ ದಿನಗಳವರೆಗೆ ಚಿಕಿತ್ಸೆಗೆ ದಿನಕ್ಕೆ ರೂ. ೨೫,೦೦೦ ರಿಂದ ೩೦,೦೦೦ ವೆಚ್ಚವಾಗಲಿದೆ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ಕೈಯಲ್ಲಿ ಹಣವಿಲ್ಲದ ಕಾರಣ ದಂಪತಿ ಮಗುವನ್ನು ಸರ್ಕಾರಿ ಕೆ.ಆರ್. ಆಸ್ಪತ್ರೆಗೆ ಪುನಃ ವಾಪಸ್ ಕರೆ ತಂದಿದ್ದಾರೆ. ನಂತರ ಶಿಲ್ಪಾ ಅವರು ಜಿಲ್ಲಾ ಆರೋಗ್ಯ ಅಧಿಕಾರಿಗೆ ಕರೆ ಮಾಡಿ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಆದರೆ ಅವರು ಹೇಳಿದ ನಂತರವೂ ವೈದ್ಯರು ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡಿದ್ದಾರೆ.
ಎಫ್ಐಆರ್ನ ಪ್ರಕಾರ, ಕೆಆರ್ ಆಸ್ಪತ್ರೆಯಲ್ಲಿ ಆ ದಿನ ಡ್ಯೂಟಿ ಡಾಕ್ಟರ್ ಆಗಿದ್ದ ಡಾ. ಚೈತ್ರಾ ಅವರು ಅವರನ್ನು ನಿದ್ದೆಯಿಂದ ಎಬ್ಬಿಸಿದರು ಎಂದು ಕೋಪಗೊಂಡಿದ್ದರು. ಶಿಲ್ಪಾ ಅವರು ತಾವು ಮ್ಯಾಜಿಸ್ಟೆçÃಟ್ ಎಂದು ತಿಳಿಸಿದರೂ ಚೈತ್ರಾ ಅವರು ನಿರ್ಲಕ್ಷö್ಯ ತೋರಿದ್ದಾರೆ ಎನ್ನಲಾಗಿದೆ. ಡ್ಯೂಟಿ ಡಾಕ್ಟರ್ ಮತ್ತು ಪಿಜಿ ವಿದ್ಯಾರ್ಥಿ ಡಾ. ಸೈಯದ್ ಸೋನಿಯಾ ಪ್ರಕರಣದ ಬಗ್ಗೆ ಚರ್ಚಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಸೋನಿಯಾಳನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಮಕ್ಕಳ ರೋಗಿಗಳಿಗೆ ಚೆಲುವಾಂಬ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಇಬ್ಬರೂ ಹೇಳಿದ್ದಾರೆ. ಆ ಸಮಯದಲ್ಲಿ, ಶಿಲ್ಪಾ ಅವರನ್ನು ಸಂಪರ್ಕಿಸಿದ ಆರ್ಎಂಒ ಆಸ್ಪತ್ರೆಗೆ ಬಂದು ಸೋನಿಯಾಳನ್ನು ಅಡ್ಮಿಟ್ ಮಾಡಿಕೊಂಡಿದ್ದಾರೆ. ಮರುದಿನವೇ ನ್ಯಾಯಾಧೀಶೆ ಶಿಲ್ಪಾ ಅವರು ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಸೋನಿಯಾಳನ್ನು ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸೋನಿಯಾ ಚೆಲುವಾಂಬ ಆಸ್ಪತ್ರೆಗೆ ದಾಖಲಾದ ಐದು ದಿನಗಳ ನಂತರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ನಂತರ, ನ್ಯಾಯಾಧೀಶೆ ಶಿಲ್ಪಾ ಅವರು ಅಕ್ಟೋಬರ್ ೨೭ ರಂದು ದೂರು ನೀಡಿದ ನಂತರ ಚೆಲುವಾಂಬ ಮತ್ತು ಕೆಆರ್ ಆಸ್ಪತ್ರೆಗಳ ಡ್ಯೂಟಿ ವೈದ್ಯರ ವಿರುದ್ಧ ಸೆಕ್ಷನ್ ೩೩೭ (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಅಥವಾ ನೋವುಂಟು ಮಾಡುವುದು) ಮತ್ತು ೩೩೮ (ದುಃಖ ಉಂಟು ಮಾಡುವ) ಅಡಿಯಲ್ಲಿ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವೈದ್ಯಕೀಯ ನಿರ್ಲಕ್ಷö್ಯ ತೋರಿರುವ ಆರೋಪದ ಮೇಲೆ ಶಿಲ್ಪಾ ಅವರು ನೀಡಿರುವ ದೂರನ್ನು ದಾಖಲಿಸಿಕೊಂಡು ಪ್ರಕರಣದ ತನಿಖೆ ಮಾಡಿ ಉಪ ಲೋಕಾಯುಕ್ತರಿಗೆ ವರದಿ ಸಲ್ಲಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ತಿಳಿಸಿದರು.