ಕೊಡ್ಲಿಪೇಟೆ, ನ. ೮: ಗಾಳಿ ಮಳೆಗೆ ಮರಬಿದ್ದು ಎರಡು ಮನೆಗಳಿಗೆ ಹಾನಿಯಾಗಿ ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿರುವ ಘಟನೆ ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಸುರಿದ ಭಾರೀ ಮಳೆ ಹಾಗೂ ಗಾಳಿಯ ರಭಸಕ್ಕೆ ಮನೆಯ ಪಕ್ಕದಲ್ಲಿದ್ದ ಮರ ಬಿದ್ದಿದ್ದು, ಎರಡು ಮನೆಗಳ ಛಾವಣಿ ಜಖಂಗೊAಡಿದೆ. ಬ್ಯಾಡಗೊಟ್ಟ ಪಂಚಾಯತ್ ಸಮೀಪದ ನಿವಾಸಿಗಳಾದ ಜರೀನಾ ಅಬ್ದುಲ್ ಅಜೀಜ್ ಮತ್ತು ಅಜ್ಜಿಮ್ಮ ಇಬ್ರಾಹಿಂ ಅವರುಗಳ ಮನೆಯ ಹಿಂಭಾಗ ಮರಬಿದ್ದು ಎರಡು ಕೊಠಡಿಗಳ ಮೇಲ್ಚಾವಣಿ ಸಂಪೂರ್ಣ ಜಖಂಗೊAಡಿದೆ.

ಇದರೊAದಿಗೆ ಗೋಡೆ ಬಿರುಕು ಬಿಟ್ಟಿದ್ದು, ಗ್ಯಾಸ್ ಸ್ಟೌವ್ ಸೇರಿದಂತೆ ಅಡುಗೆ ಮನೆಯ ಸಾಮಗ್ರಿ, ಸೋಲಾರ್ ಪ್ಯಾನೆಲ್ ಹಾನಿಯಾಗಿ ಸುಮಾರು ಎರಡು ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸ ಲಾಗಿದೆ. ಘಟನೆಯಿಂದ ಮನೆ ಯೊಳಗಿದ್ದ ಈರ್ವರು ಮಹಿಳೆಯರ ತಲೆಗೆ ಛಾವಣಿ ಬಿದ್ದಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಹೋಬಳಿ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಆಡಳಿತಾಧಿಕಾರಿ ಚೈತ್ರ, ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷ ಹನೀಫ್ ಎಂ.ಎA. ಭೇಟಿ ನೀಡಿ ಪರಿಶೀಲಿ ಸಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ಹೋಬಳಿ ನಾಡ ಕಚೇರಿಯಲ್ಲಿ ಮನವಿ ಸಲ್ಲಿಸಲಾಗಿದೆ.