ಮಡಿಕೇರಿ, ನ. ೮: ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಉಕ್ಕುಡದ ನಿವೃತ್ತ ಯೋಧ ಸಂದೇಶ್ ಮೃತದೇಹ ಇಂದು ರಾತ್ರಿ ಪಂಪಿನಕೆರೆಯಲ್ಲಿ ಪತ್ತೆಯಾಗಿದೆ. ಖ್ಯಾತ ಮುಳುಗು ತಜ್ಞ ಮಲ್ಪೆಯ ಈಶ್ವರ್ ಮತ್ತು ತಂಡ ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾಯಿತು.

ಸಂದೇಶ್ (೩೬) ತಾ. ೭ರಂದು ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದರು. ಅವರ ಮೊಬೈಲ್ ಹಾಗೂ ಚಪ್ಪಲಿ ಪಂಪಿನಕೆರೆ ದಡದಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ, ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಸ್ಥಳೀಯ ನುರಿತ ಈಜುಗಾರ ಮುತ್ತಪ್ಪ ಹಾಗೂ ಇತರರನ್ನು ಒಳಗೊಂಡು ಎಷ್ಟೇ ಹುಡುಕಾಟ ನಡೆಸಿದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ನಗರಸಭಾ ಸದಸ್ಯ ಕೆ.ಎಸ್. ರಮೇಶ್ ನೇತೃತ್ವದಲ್ಲಿ ಹೆಸರಾಂತ ಮುಳುಗು ತಜ್ಞ ಮಲ್ಪೆಯ ಈಶ್ವರ್ ಅವರನ್ನು ಕಾರ್ಯಾಚರಣೆಗೆ ಕರೆಸಲಾಯಿತು. ಆರು ಮಂದಿಯ ತಂಡದೊAದಿಗೆ ಆಗಮಿಸಿದ ಈಶ್ವರ್ ರಾತ್ರಿ ಸುಮಾರು ೭.೩೫ ರಿಂದ ಕಾರ್ಯಾಚರಣೆ ಆರಂಭಿಸಿದರು. ಸುಮಾರು ೧ ಗಂಟೆಗಳ ಕಾಲ ತಮ್ಮ ತಂಡದೊAದಿಗೆ ಕಾರ್ಯಾಚರಣೆ ನಡೆಸಿದ ಈಶ್ವರ್ ಪಂಪಿನ ಕೆರೆಯ ದಡದಿಂದ ೪೦ ಅಡಿ ದೂರದಲ್ಲಿ; ೪೦ ಅಡಿ ಆಳದಲ್ಲಿದ್ದ ಸಂದೇಶ್ ಅವರ ಮೃತದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.

ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೆರೆ ಸಮೀಪ ತಾತ್ಕಾಲಿಕ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳೀಯ ನಾಗರಿಕರು, ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಮೃತದೇಹವನ್ನು ಮೇಲೆತ್ತಿದ ಬಳಿಕ ನಗರಸಭಾ ಸದಸ್ಯ ಮನ್ಸೂರ್ ಮತ್ತಿತರರು ಕೆರೆಯ ಬಳಿಯಿಂದ ಮೃತದೇಹವನ್ನು ಮುಖ್ಯರಸ್ತೆಗೆ ಹೊತ್ತು ತಂದರು. ಈ ಸಂದರ್ಭ ಅಲ್ಲಿದ್ದ ಸಂದೇಶ್ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ನಗರಸಭಾ ಸದಸ್ಯ ಅಮೀನ್ ಮೊಯ್ಸಿನ್ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಪ್ರಮುಖರು ಹಾಜರಿದ್ದರು. ಬಳಿಕ ಆಂಬ್ಯುಲೆನ್ಸ್ ಮೂಲಕ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ಪಣತೊಟ್ಟಿದ್ದೆ- ಈಶ್ವರ್

ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಪೆ ಈಶ್ವರ್ ದೇಶಸೇವೆ ಮಾಡಿದ ವ್ಯಕ್ತಿಯೊಬ್ಬರ ಮೃತದೇಹವನ್ನು ಎಷ್ಟೇ ಕಷ್ಟವಾದರೂ ಸರಿ ಮೇಲೆತ್ತಲೇಬೇಕೆಂದು ಪಣತೊಟ್ಟಿದ್ದೆ. ಆ ಛಲದಿಂದಲೇ ಕಾರ್ಯಾಚರಣೆ ನಡೆಸಿ ಯಶಸ್ವಿಯಾದೆ ಎಂದು ಹೇಳಿದರು. ಪಂಪಿನಕೆರೆಯ ಆಳದಲ್ಲಿ ತುಂಬಾ ಮರಗಿಡಗಳು ತುಂಬಿಕೊAಡಿದ್ದು, ತಾನೇ ಕಾರ್ಯಾಚರಣೆ ವೇಳೆ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಎರಡು ಬಾರಿ ಅಲ್ಲಿ ಸಿಲುಕಿಕೊಂಡೆನಾದರೂ ಹಗ್ಗದ ಸಹಾಯದಿಂದ ಮೇಲೆ ಬಂದೆ. ೪೦ ಅಡಿ ಆಳದಲ್ಲಿ ಅರ್ಧ ಮುಕ್ಕಾಲು ಅಡಿ ಹೂಳಿನ ಒಳಗೆ ಸಂದೇಶ್ ಅವರ ಮೃತದೇಹ ಸಿಲುಕಿಕೊಂಡಿತ್ತು. ಸ್ಕೂಬಾ ಡೈವಿಂಗ್‌ನಲ್ಲಿ ೧೨ ಕೆ.ಜಿ. ಆಮ್ಲಜನಕದೊಂದಿಗೆ ನೀರಿನ ಒಳಗೆ ಕಾರ್ಯಾಚರಣೆ ಮಾಡಿದ್ದಾಗಿ ಈಶ್ವರ್ ತಿಳಿಸಿದರು. ಸುಮಾರು ೧ ಸಾವಿರಕ್ಕೂ ಅಧಿಕ ಶವಗಳನ್ನು ಈವರೆಗೆ ಮೇಲೆತ್ತಿದ್ದೇನೆ. ಕೊಲ್ಲೂರಿನಲ್ಲಿ ಒಬ್ಬ ಯುವಕನ ಶವವನ್ನು ಏಳೆಂಟು ದಿನ ಕಾರ್ಯಾಚರಣೆ ನಡೆಸಿ ತೆಗೆದಿದ್ದೇನೆ ಎಂದು ಈಶ್ವರ್ ಮಾಹಿತಿಯಿತ್ತರು. ಪತ್ನಿಯಿಂದ ಪೊಲೀಸ್ ದೂರು

ಸಂದೇಶ್ ಅವರಿಗೆ ಗಣಪತಿ ಬೀದಿ ನಿವಾಸಿ ಜೀವಿತಾ ಎಂಬ ಮಹಿಳೆ ಫೇಸ್‌ಬುಕ್ ಮೂಲಕ ಪರಿಚಯವಾಗಿ ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದಳು. ಪ್ರತಿ ತಿಂಗಳು ೨೦ ಸಾವಿರ ಹಣ ಪಡೆಯುತ್ತಿದ್ದಳು. ಇದುವರೆಗೂ ಸುಮಾರು ೧೫ ಲಕ್ಷ ರೂ. ವರೆಗೆ ಹಣ ಪಡೆದಿದ್ದು, ಕೆಲ ದಿನಗಳ ಹಿಂದೆ ೫೦ ಲಕ್ಷ ಹಣ ನೀಡುವಂತೆ ಅಥವಾ ಮನೆ ಕಟ್ಟಿಸಿಕೊಡುವಂತೆ ಒತ್ತಡ ಹಾಕಿದ್ದಲ್ಲದೇ, ಹಣ ನೀಡದಿದ್ದಲ್ಲಿ ಖಾಸಗಿ ವೀಡಿಯೋ ಹಾಗೂ ಫೋಟೊಗಳನ್ನು ಫೇಸ್‌ಬುಕ್‌ಗೆ ಹಾಕಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದರಿಂದ ಸಂದೇಶ್ ಡೆತ್‌ನೋಟ್ ಬರೆದಿಟ್ಟು ಕಣ್ಮರೆಯಾಗಿದ್ದಾರೆ ಎಂದು ಅವರ ಪತ್ನಿ ಯಶೋಧ ನೀಡಿದ ದೂರಿನನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂದೇಶ್ ಮೃತದೇಹ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಂದೇಶ್ ತಮ್ಮ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದ ಪೊಲೀಸ್ ಸತೀಶ್, ಇಬ್ನಿಸ್ಪಿçಂಗ್ ಮಾಲೀಕ ಸತ್ಯ ಹಾಗೂ ಇತರರ ಮೇಲೆಯೂ ಕ್ರಮ ಜರುಗಿಸಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.