ಮಡಿಕೇರಿ, ನ. ೯: ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿ ಕಳೆದ ರಾತ್ರಿ ಪಂಪಿನ ಕೆರೆಯಲ್ಲಿ ಶವವಾಗಿ ಪತ್ತೆಯಾದ ಮಾಜಿ ಯೋಧ ಉಕ್ಕುಡದ ಸಂದೇಶ್ ಪ್ರಕರಣಕ್ಕೆ ಸಂಬAಧಿಸಿದAತೆ ಐದು ಮಂದಿ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ತಾ. ೭ ರಂದು ಡೆತ್‌ನೋಟ್‌ನಲ್ಲಿ ಕೆಲವರ ಹೆಸರುಗಳನ್ನು ಉಲ್ಲೇಖಿಸಿ, ಅವರುಗಳ ಮಾನಸಿಕ ಕಿರುಕುಳ ದಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ನಂತರ ಸಂದೇಶ್ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಮತ್ತು ಚಪ್ಪಲಿ ಪಂಪಿನಕೆರೆಯ ದಡದಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಕೊನೆಗೆ ಖ್ಯಾತ ಮುಳುಗುತಜ್ಞ ಮಲ್ಪೆ ಈಶ್ವರ್ ತಂಡ ಕಳೆದರಾತ್ರಿ ಆಗಮಿಸಿ ಕಾರ್ಯಾಚರಣೆ ಕೈ ಗೊಂಡಾಗ ಸಂದೇಶ್ ಶವ ಪತ್ತೆಯಾಗಿತ್ತು. ಬಳಿಕ ಅವರ ಪತ್ನಿ ಯಶೋಧ ಅವರು ನೀಡಿದ ದೂರಿ ನನ್ವಯ ಸಂದೇಶ್ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದ ಜೀವಿತಾ ಮೇಲೆ ಸೆಕ್ಷನ್ ೩೮೪ ಅಡಿಯಲ್ಲಿ ಸುಲಿಗೆ (ಹನಿಟ್ರಾö್ಯಪ್) ಪ್ರಕರಣ ದಾಖಲಾಗಿದ್ದು, ಸಂದೇಶ್ ಶವ ದೊರೆತ ನಂತರ ಜೀವಿತಾ ಸೇರಿದಂತೆ ಇಬ್ನಿಸ್ಪಿçಂಗ್ ಮಾಲೀಕ ಸತ್ಯ, ಪೊಲೀಸ್ ಸತೀಶ್, ಜೀವಿತಾಳ ತಾಯಿ, ತಂಗಿ ವಿರುದ್ಧ ಸೆಕ್ಷನ್ ೩೦೬ ಅಡಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.