ಮಡಿಕೇರಿ, ನ. ೮: ಆದಿಮ ಸಂಜಾತ ಕೊಡವ ಜನಾಂಗಕ್ಕೆ ಸಂವಿ ಧಾನದ ಭದ್ರತೆಯ ಅನಿವಾರ್ಯದ ಹಿನ್ನೆಲೆಯಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಐದನೇ ಹಂತದ ಪಾದಯಾತ್ರೆ ಜಿಲ್ಲೆಯ ವಿವಿಧೆಡೆ ಮುಂದುವರೆದಿದೆ.
ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಇಂದು ಕಡಿಯತ್‌ನಾಡ್‌ನ ಕರಡದ "ಬೇಲಿಯಾಣೆ ಮಂದ್" ಮತ್ತು ಬಲಂಬೇರಿ ಮಂದ್‌ನಲ್ಲಿ ಪಾದಯಾತ್ರೆ ಹಾಗೂ ಕೊಡವ ಜಾಗೃತಿ ಸಭೆ ನಡೆಸಿ ಕೊಡವ ಲ್ಯಾಂಡ್‌ಗಾಗಿ ಹಕ್ಕೊತ್ತಾಯ ಮಂಡಿಸಲಾಯಿತು.
ಕಡಿಯತ್‌ನಾಡ್‌ನ "ಬೇಲಿಯಾಣೆ ಮಂದ್" ನ ಪಾದಯಾತ್ರೆ ಮತ್ತು ಸಭೆಯಲ್ಲಿ ಬೇಪಡಿಯಂಡ ರುಕ್ಮಿಣಿ, ಬೇಪಡಿಯಂಡ ಕಾಮವ್ವ ಶಂಕರ್, ಪತ್ರಪಂಡ ಶೋಭಾ, ಬೇಪಡಿಯಂಡ ಬೊಳ್ಳಮ್ಮ ಮೊಣ್ಣಪ್ಪ, ಬೇಪಡಿಯಂಡ ಪೂಜಾ ಅಪ್ಪಣ್ಣ, ಚೋಳಪಂಡ ಜ್ಯೋತಿ ನಾಣಯ್ಯ, ನೆರ್ಪಂಡ ಜಿಮ್ಮಿ, ಚಂಗAಡ ಕಿಶೋರ್, ಐತಿಚಂಡ ಬನ್ಸಿ, ನೆರ್ಪಂಡÀ ಗಣಪತಿ, ಬೇಪಡಿಯಂಡ ಬಿದ್ದಪ್ಪ, ಮತ್ತಿತರರು ಪಾಲ್ಗೊಂಡಿದ್ದರು.
ಬಲAಬೇರಿ ಮಂದ್ ನಲ್ಲಿ ಬಿದ್ದಂಡ ಉಷಾ ದೇವಮ್ಮ, ಬೆಲ್ಲತಂಡ ಸ್ವಾತಿ ಕಿರಣ್, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಬಿದ್ದಂಡ ನೀತ ಸಂದೀಪ್, ಪಾಲಂದಿರ ಗಂಗಮ್ಮ ಗಣೇಶ್, ಬೋಲ್ತಂಡ ರೇಖಾ ನಾಣಯ್ಯ, ಬಿದ್ದಂಡ ಚಿತ್ರ, ಬೊಳ್ಳಚೆಟ್ಟಿರ ಹೇಮಾ ಸುರೇಶ್, ಬೊಳ್ಳಚೆಟ್ಟಿರ ಜಯಂತಿ, ಪಾಲಂದಿರ ಆಶಾ ನಾಚಪ್ಪ, ಬೋಳಕರಂಡ ಇಂದಿರಾ ಮುದ್ದಯ್ಯ, ಮಂದತAಡ ರಾಧಿಕ ಸತೀಶ್, ಚಂಗAಡ ಪಳಂಗಪ್ಪ, ಪಾಲಂದಿರ ಮಂದಣ್ಣ, ಬೊಳ್ಳಚೆಟ್ಟಿರ ಕಾಳಪ್ಪ, ಮತ್ತಿತರರು ಪಾಲ್ಗೊಂಡಿದ್ದರು.
ಇAದಿನ ಪಾದಯಾತ್ರೆ: ತಾ.೯ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ನೂರಂಬಡನಾಡ್ ಮಂದ್, ಸಂಜೆ ೪.೩೦ ಗಂಟೆಗೆ ನೆಲಜಿನಾಡ್ ಮಂದ್ (ನೆಲಜಿ)ನಲ್ಲಿ ನಡೆಯಲಿದೆ.
ತಾ.೧೦ ರಂದು ಬೆಳಿಗ್ಗೆ ೯ ಗಂಟೆಗೆ ಯಾತ್ರೆಯು ಪಾಡಿನಾಡ್- ಪಾಡಿ ಇಗ್ಗುತ್ತಪ್ಪ ದೇವ ಸನ್ನಿಧಿ ತಲುಪಿ, ಮಧ್ಯಾಹ್ನ ೧೨ ಗಂಟೆಗೆ ಮಡಿಕೇರಿ ತಾಲೂಕಿನ ಕುಂಜಿಲ- ಕಕ್ಕಬ್ಬೆ "ಕೆಂಜರಾಣೆ ಪಾಡಿನಾಡ್‌ಮಂದ್'ನಲ್ಲಿ ಸಮಾರೋಪಗೊಳ್ಳಲಿದೆ ಎಂದು ನಾಚಪ್ಪ ತಿಳಿಸಿದ್ದಾರೆ.