(ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ)

ಒಂದರ್ಥದಲ್ಲಿ, ಕ್ರಿಕೆಟ್ ಭಾರತೀಯರ ಉಸಿರು. ಅದೇಕೋ ಏನೋ, ಈ ಆಟ ಭಾರತೀಯರೆಲ್ಲರನ್ನೂ ಭಾವನಾತ್ಮಕವಾಗಿ ಬೆಸೆಯುತ್ತದೆ. ಟೀಮ್ ಇಂಡಿಯಾದ ಪಂದ್ಯ ನಡೆಯುತ್ತಿದೆ ಎಂದಾಗಲೆಲ್ಲ, ೧೪೦ ಕೋಟಿ ಭಾರತೀಯರ ದೇಶಪ್ರೇಮ ಅನಾಯಾಸವಾಗಿ ಬಹಿರಂಗವಾಗುತ್ತದೆ. ತಂಡ ವಿಶ್ವ ಚಾಂಪಿಯನ್ ಆಗಲಿ ಎಂದು ಹೋಮ-ಹವನಗಳೂ, ದೇವಾಲಯಗಳಲ್ಲಿ ವಿಶೇಷ ಪೂಜೆಗಳೂ ನಡೆಯುತ್ತವೆ..!

ಇನ್ನು ಭಾರತದ ಆತಿಥ್ಯದಲ್ಲಿಯೇ ಈ ಬಾರಿ ವಿಶ್ವಕಪ್ ನಡೆದಿದೆ ಎಂದರೆ, ದೇಶದ ಕ್ರೀಡಾಪ್ರೇಮಿಗಳ ಸಂಭ್ರಮ ವರ್ಣನೆಗೂ ನಿಲುಕದ್ದು. ‘ಈ ಬಾರಿ ಕಪ್ ನಮ್ದೇ’ ಎಂಬ ಹಾರೈಕೆ.

ಅಂತರರಾಷ್ಟಿçÃಯ ಕ್ರಿಕೆಟ್ ಮಂಡಳಿ ಆಯೋಜಿಸಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ೧೩ನೇ ಆವೃತ್ತಿಯ ಫೈನಲ್ ಪಂದ್ಯ ಇಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಆತಿತೇಯ ಭಾರತ ತಂಡ, ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟೆçÃಲಿಯಾ ವಿರುದ್ಧ ವಿಶ್ವ ಚಾಂಪಿಯನ್ ಪಟ್ಟಕ್ಕೆ ಸೆಣಸಲಿದೆ. ಭಾರತ, ಮುಂಬಯಿ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ನ್ಯೂ ಜಿಲ್ಯಾಂಡ್‌ಅನ್ನು ಮಣಿಸಿ ಫೈನಲ್ ಪ್ರವೇಶಿಸಿದರೆ, ಆಸ್ಟೆçÃಲಿಯಾ ಗುರುವಾರ ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಸೆಮಿಯಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಜಯ ಗಳಿಸಿ ಅಂತಿಮ ಪಂದ್ಯಾವಳಿಗೆ ಕಾಲಿಟ್ಟಿದೆ.

ಇನ್ನು ಒಂದು ಹಜ್ಜೆ ಬಾಕಿ

ಭಾರತ ೧೯೮೩ ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಹಾಗೂ ೨೦೧೧ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಎತ್ತಿ ಹಿಡಿದಿತ್ತು. ಆ ಸಂಭ್ರಮ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮತ್ತೆ ಮರುಕಳಿಸಲಿ ಎಂಬುದೇ ಸಹೃದಯಿ ಭಾರತೀಯರೆಲ್ಲರ ಆಶಯ. ಎರಡು ದಶಕಗಳ ಬಳಿಕ ಭಾರತ ಮತ್ತು ಆಸ್ಟೆçÃಲಿಯಾ ತಂಡಗಳು ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ೨೦೦೩ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಅಂತಿಮ ಪಂದ್ಯದಲ್ಲಿ ಸೌರವ್ ಗಂಗೂಲಿ ನಾಯಕತ್ವದ ಭಾರತ ತಂಡ ರಿಕಿ ಪಾಂಟಿAಗ್ ಪಡೆಯೆದುರು ಸೋಲನುಭವಿಸ ಬೇಕಾಗಿತ್ತು. ೨೦ ವರ್ಷಗಳ ಬಳಿಕ ಇದಕ್ಕೆ ಪ್ರತಿಕಾರ ಪಡೆಯಲು ಶರ್ಮಾ ಪಡೆ ಸಜ್ಜುಗೊಂಡಿದೆ.

ಉತ್ತಮ ಫಾರ್ಮ್ನಲ್ಲಿ ಆಟಗಾರರು

ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ತಮ್ಮ ೫೦ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಏಕದನ ಕ್ರಿಕೆಟ್‌ನಲ್ಲಿ ಕ್ರಿಕೆಟ್‌ನ ದೇವರೆಂದೇ ಪ್ರಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರ ೪೯ ಶತಕಗಳ ದಾಖಲೆ ಮುರಿದಿದ್ದಾರೆ. ಆರಂಭಿಕ ಆಟಗಾರರಾದ ನಾಯಕ ರೋಹಿತ್ ಹಾಗೂ ಗಿಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಇದುವರೆಗೆ ೫೫೦ ರನ್‌ಗಳನ್ನು ಹೊಡೆಯುವ ಮೂಲಕ ಶ್ರೇಯಸ್ ಐಯರ್, ಉತ್ತಮ ಕೀಪಿಂಗ್ ಮಾಡುತ್ತಿರುವ ಕರ್ನಾಟಕದ ರಾಹುಲ್, ಭಾರತಕ್ಕೆ ವಿಶ್ವಕಪ್‌ಗಳಲ್ಲೇ ಅತಿ ಹೆಚ್ಚು ವಿಕೆಟ್‌ಗಳನ್ನು ಗಳಿಸಿರುವ ಶಮಿ ಹಾಗೂ ಇವರೊಂದಿಗೆ ಮಾರಕ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ದೇವರೆಂದೇ ಪ್ರಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರ ೪೯ ಶತಕಗಳ ದಾಖಲೆ ಮುರಿದಿದ್ದಾರೆ. ಆರಂಭಿಕ ಆಟಗಾರರಾದ ನಾಯಕ ರೋಹಿತ್ ಹಾಗೂ ಗಿಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಇದುವರೆಗೆ ೫೫೦ ರನ್‌ಗಳನ್ನು ಹೊಡೆಯುವ ಮೂಲಕ ಶ್ರೇಯಸ್ ಐಯರ್, ಉತ್ತಮ ಕೀಪಿಂಗ್ ಮಾಡುತ್ತಿರುವ ಕರ್ನಾಟಕದ ರಾಹುಲ್, ಭಾರತಕ್ಕೆ ವಿಶ್ವಕಪ್‌ಗಳಲ್ಲೇ ಅತಿ ಹೆಚ್ಚು ವಿಕೆಟ್‌ಗಳನ್ನು ಗಳಿಸಿರುವ ಶಮಿ ಹಾಗೂ ಇವರೊಂದಿಗೆ ಮಾರಕ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಹೇಜಲ್‌ವುಡ್, ಕಮಿನ್ಸ್, ಜಾಂಪಾ ಅವರ ಬೌಲಿಂಗ್ ಎದುರಿಸಿ ವೇಗವಾಗಿ ರನ್ ಪೇರಿಸುವ ಸವಾಲು ಭಾರತಕ್ಕಿದೆ. ಅಂತೆಯೇ ವಾರ್ನರ್, ಹೆಡ್, ಮ್ಯಾಕ್ಸ್ವೆಲ್, ಮಾರ್ಶ್ ಅವರ ರನ್‌ಗಳಿಗೆ ನಮ್ಮ ಬೌಲರ್‌ಗಳು ಬ್ರೇಕ್ ಹಾಕುವ ಅಗತ್ಯ ಕೂಡ ಇದೆ.

ಪ್ರಧಾನಿಯಿಂದ ವೀಕ್ಷಣೆ, ಏರ್ ಶೋಗೆ ಸಿದ್ಧತೆ

ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿರುವ ಗುಜರಾತ್‌ನ ಅಹ್ಮದಾಬಾದ್‌ನಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣವು ಇಂದು ೧.೩೨ ಲಕ್ಷ ಕ್ರಿಕೆಟ್ ಪ್ರೇಮಿಗಳಿಂದ ಕೂಡಿರಲಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇಂದಿನ ಪಂದ್ಯ ವೀಕ್ಷಣೆ ನಡೆಸಲಿದ್ದಾರೆ. ಇವರೊಂದಿಗೆ ಆಸ್ಟೆçÃಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಅವರು ಕೂಡ ಹಾಜರಿರಲಿದ್ದಾರೆ. ಈ ಹಿಂದೆ ವಿಶ್ವ ಕಪ್‌ಗಳನ್ನು ಗೆದ್ದ ಎಲ್ಲ ನಾಯಕರನ್ನೂ ಪಂದ್ಯಕ್ಕೆ ಅಂತರರಾಷ್ಟಿçÃಯ ಕ್ರಿಕೆಟ್ ಕೌನ್ಸಿಲ್ ಆಹ್ವಾನ ನೀಡಿದೆ. ಅವರುಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಬಿ.ಸಿ.ಸಿ.ಐ. ನೆರವೇರಿಸಲಿದೆ. ಸೆಮಿಫೈನಲ್‌ನಲ್ಲಿಯೇ ಬಾಲಿವುಡ್ ತಾರೆಗಳು ಸೇರಿದಂತೆ ವಿಶ್ವ ಶ್ರೇಷ್ಠ ಮಾಜಿ ಇಂಗ್ಲೆAಡ್ ಫುಟ್‌ಬಾಲ್‌ಪಟು ಡೇವಿಡ್ ಬೆಕಮ್ ಅವರು ಕೂಡ ಆಗಮಿಸಿ ಪಂದ್ಯಾವಳಿಗೆ ಇನ್ನಷ್ಟು ಮೆರುಗು ನೀಡಿದ್ದರು. ಫೈನಲ್‌ನಲ್ಲಿ ಇನ್ನಷ್ಟು ‘ಸೆಲೆಬ್ರಿಟಿ’ಗಳು ಆಗಮಿಸುವ ನಿರೀಕ್ಷೆ ಇದೆ. ಪಂದ್ಯಾವಳಿಗೂ ಮುನ್ನ ಭಾರತೀಯ ವಾಯು ಸೇನೆ ವತಿಯಿಂದ ‘ಏರ್ ಶೋ’ ನಡೆಯಲಿದ್ದು, ಇದರ ತಾಲೀಮು ಈಗಾಗಲೇ ನಡೆದಿದೆ.

ರೂ. ೧೦,೦೦೦ - ಟಿಕೆಟ್ ಕನಿಷ್ಟ ದರ...

ರೂಮ್‌ಗೆ ರೂ. ೨ ಲಕ್ಷ...!

ಭಾರತವು ಫೈನಲ್‌ಗೆ ಪ್ರವೇಶಿಸುತ್ತಿದ್ದಂತೆ ಫೈನಲ್ ಪಂದ್ಯದ ಟೆಕೆಟ್ ಕನಿಷ್ಟ ದರವನ್ನು ರೂ. ೧೦,೦೦೦ಕ್ಕೆ ಏರಿಸಲಾಗಿದೆ. ನವದೆಹಲಿ ಹಾಗೂ ಇತರ ಪ್ರಮುಖ ಪ್ರದೇಶಗಳಿಂದ ಅಹ್ಮದಾಬಾದ್‌ಗೆ ವಿಮಾನ ದರವನ್ನು ಶೇ. ೨೦೦ ರಿಂದ ೩೦೦ಕ್ಕೆ ಏರಿಕೆ ಮಾಡಲಾಗಿದೆ. ಸ್ಥಳೀಯ ‘೩-ಸ್ಟಾರ್’ ಹೊಟೇಲ್‌ಗಳಲ್ಲಿನ ಒಂದು ಕೊಠಡಿಯ ದಿನದ ದರವನ್ನು ಪ್ರಸ್ತುತ ಇದ್ದ ರೂ. ೨೪,೦೦೦ ದಿಂದ ೩ ಲಕ್ಷದವರೆಗೂ ಏರಿಕೆ ಮಾಡಲಾಗಿದೆ.