ಮಡಿಕೇರಿ, ನ. ೧೮: ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿ ಯೇಷನ್ ವತಿಯಿಂದ ಮಲ್ಲಂಗಡ ಎಂ.ಎ. ಬೆಳ್ಳಿಯಪ್ಪ ಸ್ಮರಣಾರ್ಥ ಮಡಿಕೇರಿಯ ಜನರಲ್ ತಿಮ್ಮಯ್ಯ ಟೇಬಲ್ ಟೆನ್ನಿಸ್ ಒಳಾಂಗಣ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಕೂರ್ಗ್ ಚಾಂಪಿಯನ್ಸ್ ಕಪ್ - ೨೦೧೩ ಟೇಬಲ್ ಟೆನ್ನಿಸ್ ಕ್ರೀಡಾಕೂಟಕ್ಕೆ ಚಾಲನೆ ದೊರಕಿತು.
ಕ್ರೀಡಾಕೂಟವನ್ನು ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ, ವೈದ್ಯರುಗಳಾದ ಡಾ. ನವೀನ್ ಹಾಗೂ ಡಾ. ರಾಜೇಶ್ವರಿ, ಅಂರ‍್ರಾಷ್ಟಿçÃಯ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಹಾಗೂ ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ಮಲ್ಲೆಂಗಡ ರಚನ್ ಪೊನ್ನಪ್ಪನವರು ದೀಪಬೆಳಗುವ ಮೂಲಕ ಉದ್ಘಾಟಿಸಿದರು.
ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ವಿಸ್ಮಯಿ ಚಕ್ರವರ್ತಿ, ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಇಂತಹ ಕ್ರೀಡಾಕೂಟಗಳಿಗೆ ಮೊದಲಿನಿಂದಲೂ ಸಹಕರಿಸುತ್ತಾ ಬಂದಿದ್ದು, ಕೊಡಗಿನ ಮನೆಮನೆಯಲ್ಲೂ ಕ್ರೀಡಾಪಟುಗಳಿದ್ದಾರೆ, ಅವರನ್ನು ಗುರುತಿಸಿ ಸರಿಯಾಗಿ ಅವಕಾಶ ಕಲ್ಪಿಸಿದರೆ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ನಮ್ಮ ನಾಡಿನ ಕ್ರೀಡಾಪಟುಗಳು ಸಾಧಿಸುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳ ಆಯೋಜನೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ನಂತರ ಮಾತನಾಡಿದ ಡಾ. ನವೀನ್ ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಬಹಳ ಮುಖ್ಯ, ಕ್ರೀಡೆಗೆ ಒತ್ತು ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು. ಡಾ. ರಾಜೇಶ್ವರಿ, ಗೆಲುವು ಸೋಲಿಗಿಂತ ಕ್ರೀಡಾ ಸ್ಫೂರ್ತಿ ಮುಖ್ಯ ಎಂದರು. ಅಂರ‍್ರಾಷ್ಟಿçÃಯ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಕೋಚ್ ತಾತಪಂಡ ಜ್ಯೋತಿ ಸೋಮಯ್ಯ ಮಾತನಾಡಿ, ತಮ್ಮ ಕ್ರೀಡಾ ಜೀವನದ ಹಲವು ಏಳು ಬೀಳುಗಳನ್ನು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಬೇಕಾದ ಅಗತ್ಯ ಸಿದ್ಧತೆ, ಟ್ರೆöÊನಿಂಗ್‌ಗಳ ಕುರಿತು ಮಾಹಿತಿ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕ ಮಾತನಾಡಿದರು.
ಕ್ರೀಡಾಕೂಟದ ಆಯೋಜಕ ಹಾಗೂ ಅಸೋಸಿಯೇಷನ್‌ನ ಸ್ಥಾಪಕ ರಚನ್ ಪೊನ್ನಪ್ಪ ಟೇಬಲ್ ಟೆನ್ನಿಸ್ ಆಟಗಾರರಿಗೆ ಸರಿಯಾದ ವೇದಿಕೆ ಕಲ್ಪಿಸಿಕೊಡುವುದು ಈ ಕ್ರೀಡಾಕೂಟದ ಮೂಲ ಉದ್ದೇಶ ಎಂದರು. ವೇದಿಕೆಯಲ್ಲಿ ಕ್ರೀಡಾಕೂಟದ ಆಯೋಜಕ ಡೆರಿಕ್ ಡಿಸೋಜ ಇದ್ದರು.