ಮಡಿಕೇರಿ, ನ. ೧೮: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ಮರಗೋಡು ಗ್ರಾಮ ಪಂಚಾಯಿತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮರಗೋಡು ಇವರ ಸಹಯೋಗ ದೊಂದಿಗೆ ಮರಗೋಡು ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಮತ್ತು ಅಂಗನವಾಡಿ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಕಟ್ಟೆಮಾಡು, ಮರಗೋಡು, ಕಡಗದಾಳು ಅಂಗನವಾಡಿ ಮಕ್ಕಳು ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು ೮೦ ಮಕ್ಕಳು ಛದ್ಮವೇಶದ ಮೂಲಕ ಗಮನ ಸೆಳೆದರು. ಕಡಗದಾಳು, ಕತ್ತಲೆಕಾಡು, ಪರಂಬು ಪೈಸಾರಿ, ಜನತಾ ಕಾಲೋನಿ, ಮರಗೋಡು, ಕ್ಲೋಸ್ ಬರ್ನ್, ಬೊಟ್ಲಪ್ಪ ಪೈಸಾರಿ, ಕಟ್ಟೆಮಾಡು ಅಂಗನವಾಡಿ ಮಕ್ಕಳಿಂದ ನೃತ್ಯ ನೆರವೇರಿತು. ಅರೆಕಾಡು-ರಮ್ಯ, ಬೆಲ್ಸ್ ಎಸ್ಟೇಟ್-ಪ್ರಮೀಳಾ, ಹೊಸಕೇರಿ ಬೆಟ್ಟ-ಸುಮಿತ್ರ, ಅಂಗನವಾಡಿ ಸಹಾಯಕಿಯರಿಂದ ಗುಂಪು ನೃತ್ಯ ನೆರವೇರಿತು. ಕಟ್ಟೆಮಾಡು ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿಯವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು.
ಛದ್ಮವೇಷ, ನೃತ್ಯ, ಹಾಡಿನಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ಹಾಗೂ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ (ಪದಕಗಳನ್ನು) ಮೆಡಲ್ಸ್ಗಳನ್ನು ನೀಡಲಾಯಿತು. ಅಂಗನವಾಡಿ ದಿನಾಚರಣೆ ಪ್ರಯುಕ್ತ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಯರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಬಾಂಬ್ ಇಂದ ಸಿಟಿ-ಪ್ರಥಮ-ಜಯಲಕ್ಷಿö್ಮ ಕಟ್ಟೆಮಾಡು, ದ್ವಿತೀಯ-ಕತ್ತಲೆಕಾಡು-ಪೌಜಿಯ, ಸಿಸಿ ಬಂಗ್ಲೆ-ಪಾರ್ವತಿ, ಕಪ್ಪೆ ಜಿಗಿತ-ಅಂಗನವಾಡಿ ಸಹಾಯಕಿಯರಿಗೆ- ಪ್ರಥಮ-ಪದ್ಮಿನಿ-ಮರಗೋಡು, ರಮ್ಯಾ-ಅರೆಕಾಡು, ವಿನಿತ-ಪರಂಬು ಪೈಸಾರಿ. ಕಪ್ಪೆ ಜಿಗಿತ ಪೋಷಕರಿಗೆ ರಮ್ಯಾ ಎಂ.ಎA. ಕ್ಲೋಸ್ ಬರ್ನ್, ಮಾಲಿನಿ ಕವನ್ ಕಟ್ಟೆಮಾಡು-೨.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಮಕ್ಕಳ ಪ್ರತಿಭೆಂiÀiನ್ನು ಹೊರಹೊಮ್ಮಿಸಲು ಸೂಕ್ತವಾದ ವೇದಿಕೆಯನ್ನು ಪ್ರಾರಂಭಿಕ ಹಂತದಲ್ಲೇ ನೀಡ ಬೇಕಾಗಿರುವುದರಿಂದ ಮರಗೋಡು ವೃತ್ತದ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಹಕಾರದೊಂದಿಗೆ ಅಂಗನವಾಡಿ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆಯನ್ನು ನಡೆಸುತ್ತಾ ಮಕ್ಕಳ ಪ್ರತಿಭೆಗೆ ಒಂದು ವೇದಿಕೆಯನ್ನು ಕಲ್ಪಿಸಲಾಗಿದೆಯೆಂದು ತಿಳಿಸಿದರು. ಕಾರ್ಯಕ್ರಮಕ್ಕೆ ಸ್ಥಳಾವಕಾಶವನ್ನು ನೀಡಿದ ಮಾದರಿ ಪ್ರಾಥಮಿಕ ಶಾಲೆಯವರಿಗೆ, ಊಟದ ವ್ಯವಸ್ಥೆಯನ್ನು ಮಾಡಿದ ಮರಗೋಡು ಗ್ರಾಮ ಪಂಚಾಯಿತಿರವರಿಗೆ, ಪ್ರಶಸ್ತಿ ಪತ್ರವನ್ನು ನೀಡಿದ ಮುಕ್ಕಾಟಿ ಸದಾ ಡಿನ್ನಿಸ್ ಗ್ರಾಮಸ್ಥರು, ಸಮಾಜ ಸೇವಕರವರಿಗೆ, ಪದಕಗಳನ್ನು ನೀಡಿದ ಗ್ರಾಮಸ್ಥರು, ಸಮಾಜ ಸೇವಕರು ಆದ ಚೆರಿಯಮನೆ ಭಾರ್ಗವರವರಿಗೆ, ಕಾರ್ಯಕ್ರಮಕ್ಕೆ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರಾದ ಅಕ್ಕಮ್ಮ, ಅನಿಲ, ಹರಿಣಾಕ್ಷಿ, ಸಾಜಿದ, ಭವಾನಿ ಹಾಗೂ ಸಹಾಯಕಿ ಪದ್ಮಿನಿರವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕಟ್ಟೆಮಾಡು ಅಂಗನವಾಡಿ ಕಾರ್ಯಕರ್ತೆ ಮಹಾಲಕ್ಷಿö್ಮ ನಡೆಸಿದರು. ಸ್ವಾಗತವನ್ನು ಕಟ್ಟೆಮಾಡು-೧ ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ ನಡೆಸಿದರು, ಮರಗೋಡು ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ ವಂದಿಸಿದರು.