ಎಲ್ಲ ಜೀವಿಗಳಿಗೂ ಸುಗಮವಾದ ಬದುಕನ್ನು ನಡೆಸುವುದಕ್ಕಾಗಿ ತಿನ್ನಲು ಆಹಾರವು ಎಷ್ಟು ಅವಶ್ಯವೋ ಅದೇ ರೀತಿಯಲ್ಲಿ ತಿಂದ ಆಹಾರವನ್ನು ಜೀರ್ಣಿಸಿಕೊಂಡು ಅನಂತರ ಶೌಚದ ಮೂಲಕ ಹೊರಗೆ ಹಾಕುವುದೂ ಅಷ್ಟೇ ಅವಶ್ಯವಾಗಿರುತ್ತದೆ. ಅದರಲ್ಲೂ ಮನುಷ್ಯರಿಗೆ ಬೆಳಿಗ್ಗೆ ಹಾಸಿಗೆಯಿಂದೆದ್ದ ಕೂಡಲೇ ಶೌಚಕ್ಕೆ ಹೋಗಲಾಗದಿದ್ದಲ್ಲಿ ದೇಹವು ಹಲವು ಬಾಧೆಗಳಿಗೆ ತುತ್ತಾಗಬಹುದು. ಆದರೆ ಪ್ರಾಣಿ ಮತ್ತಿತರ ಜೀವಿಗಳಂತೆ ಮನಬಂದಕಡೆ ಮನುಷ್ಯರಿಗೆ ಈ ಶೌಚ ಕ್ರಿಯೆಯನ್ನು ಮಾಡಲಾಗುವುದಿಲ್ಲ. ಇದಕ್ಕೆಂದೇ ಪ್ರತ್ಯೇಕ ಸ್ಥಳವನ್ನು ಕಾಯ್ದಿರಿಸಿದ್ದು ಈ ಸ್ಥಳದಲ್ಲಿಯೇ ಮನುಷ್ಯರು ತಮ್ಮ ಶೌಚವನ್ನು ಪೂರೈಸಿಕೊಳ್ಳಬೇಕಾಗುತ್ತದೆ. ಈ ದೃಷ್ಟಿಯಿಂದ ಶೌಚಾಲಯದ ಮೇಲಿರುವ ತಪ್ಪು ದೃಷ್ಟಿಯನ್ನು ಅಳಿಸಿಹಾಕಿ ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದ ರಾಷ್ಟಿçÃಯ ಒಕ್ಕೂಟಗಳು ನವೆಂಬರ್ ಹತ್ತೊಂಬತ್ತನ್ನು ವಿಶ್ವ ಶೌಚಾಲಯದಿನವೆಂದು ೨೦೦೧ರಲ್ಲಿ ಘೋಷಿಸಿದವು.
ಪ್ರಪಂಚದಾದ್ಯAತ ಸುಮಾರು ೪.೨ ಬಿಲಿಯನ್ ಜನರು ಸುರಕ್ಷಿತವಾಗಿ ನಡೆಸಬಹುದಾದ ನೈರ್ಮಲ್ಯ ಕಾರ್ಯಗಳಿಂದ ವಂಚಿತರಾಗಿದ್ದಾರೆAದು ಇತ್ತೀಚೆಗಷ್ಟೇ ನಡೆಸಿದ ಅಧ್ಯಯನವೊಂದು ಹೇಳುತ್ತದೆ. ವಿಶ್ವ ಶೌಚಾಲಯ ದಿನಾಚರಣೆಯಂದು ಇಂತಹ ನೈರ್ಮಲ್ಯದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ಪ್ರತಿಯೊಂದು ಕುಟುಂಬವೂ ಕಡ್ಡಾಯವಾಗಿ ತಮ್ಮಲ್ಲಿ ಶೌಚಾಲಯವನ್ನು ಹೊಂದುವ ಬಗ್ಗೆ ಆಸಕ್ತಿಯನ್ನು ಮೂಡಿಸಲಾಗುತ್ತಿದೆ. ಹಾಗಾಗಿ ಪ್ರತಿ ವರ್ಷ ವಿಶ್ವ ಶೌಚಾಲಯದ ದಿನದಂದು ಹೊಸ ಘೋಷ ವಾಕ್ಯಗಳನ್ನು ಮಾಡಿ ಜನರನ್ನು ಜಾಗೃತಿಗೊಳಿಸಲಾಗುತ್ತಿದೆ.
ಭೂಗರ್ಭದಲ್ಲಿರುವ ಜಲವು ವಿಶ್ವದಲ್ಲಿಯೇ ಅತಿಹೆಚ್ಚು ತಾಜಾ ಜಲವಾಗಿದ್ದು ಇದನ್ನು ಕುಡಿಯುವ ಜಲ, ನೈರ್ಮಲ್ಯದ ವ್ಯವಸ್ಥೆಗಳು, ಕೃಷಿ ಮತ್ತು ಕೈಗಾರಿಕೆಗಳಿಗೆ ಬಳಸಲಾಗುತ್ತದೆ. ಹಾಗಾಗಿ ನೇರವಾಗಿ ದೃಷ್ಟಿಗೆ ಕಾಣದಿರುವ ಅಂತರ್ಜಲದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲೇಬೇಕಾದ ಅನಿವಾರ್ಯತೆಯು ಎಲ್ಲರಿಗೂ ಇದೆ. ಈ ನಿಟ್ಟಿನಲ್ಲಿ ೨೦೨೨ರ ವಿಶ್ವ ಶೌಚಾಲಯದ ದಿನದಂದು ಕಾಣದಿರುವುದನ್ನು ಕಾಣುವುದು ಎನ್ನುವ ಧ್ಯೇಯ ವಾಕ್ಯವನ್ನು ಇರಿಸಿಕೊಂಡು ಅಂತರ್ಜಲಕ್ಕೆ ಮನುಷ್ಯರ ಶೌಚದಿಂದಾಗುವ ಮಾಲಿನ್ಯವನ್ನು ತಡೆಗಟ್ಟುವ ಯತ್ನವನ್ನು ಮಾಡಲಾಗುತ್ತಿದೆ. ಸಧ್ಯಕ್ಕೆ ವಿಶ್ವವು ಊರ್ಜಿತವಾಗಬಲ್ಲ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ೨೦೩೦ ರೊಳಗೆ ಪ್ರಪಂಚದ ಎಲ್ಲರಿಗೂ ಕ್ಷೇಮಕರವಾದ ಶೌಚಾಲಯವನ್ನು ಹೊಂದುವAತೆ ಮಾಡುವ ಗುರಿಯನ್ನು ಇರಿಸಿಕೊಂಡಿದೆ. ಈ ದೃಷ್ಟಿಯಿಂದ ಎಲ್ಲ ಸರಕಾರಗಳು ಸರ್ವರಿಗೂ ಶೌಚಾಲಯವನ್ನು ಹೊಂದುವ ಗುರಿಯನ್ನು ಸಾಧಿಸುವ ಬಗ್ಗೆ ನಾಲ್ಕುಪಟ್ಟು ಹೆಚ್ಚು ಒತ್ತಡವನ್ನು ಹೇರುತ್ತಿವೆ.
ವಿಶ್ವ ಶೌಚಾಲಯದ ದಿನಗಳಲ್ಲಿ ವಿಶ್ವರಾಷ್ಟç ಒಕ್ಕೂಟವು ಕೆಲವು ಗಂಭೀರ ವಿಷಯಗಳ ಬಗ್ಗೆ ಚಿಂತನೆಯನ್ನು ಹರಿಸುತ್ತಿದೆ. ಪ್ರಪಂಚದಲ್ಲಿ ೪.೨ ಮಿಲಿಯನ್ ವ್ಯಕ್ತಿಗಳಿಗೆ ಸುರಕ್ಷಿತವೆನ್ನಿಸುವ ಶೌಚಾಲಯಗಳಿಲ್ಲ. ಹಾಗಾಗಿ ಅವರು ಮಾತ್ರವಲ್ಲದೆ ಇತರರೂ ಬಳಸುವ ಕುಡಿಯುವ ನೀರು ಅಶುದ್ಧವಾಗುತ್ತಿದ್ದು ಹಲವು ಗಂಭೀರವಾದ ಕಾಯಿಲೆಗಳಿಗೆ ಅದು ಕಾರಣವಾಗಬಹುದಾಗಿದೆ. ಪ್ರತಿದಿನವೂ ಐದುವರ್ಷದೊಳಗಿನ ಸುಮಾರು ೮೦೦ ಮಕ್ಕಳು ಅತಿಸಾರ ಭೇದಿಗೆ ಕಾರಣವಾಗುವ ಅಶುದ್ಧ ನೀರಿನ ಬಳಕೆಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಕೊಕ್ಕೆಹುಳ, ಜಂತುಹುಳ ಮೊದಲಾದುವು ಶೌಚ ಮಾಡಿದ ನೆಲದ ಮೇಲೆ ಬರಿಗಾಲಿನಲ್ಲಿ ಓಡಾಡುವವರ ಕಾಲಿನ ಮೂಲಕ ಉದರಕ್ಕೆ ಸೇರಿ ಅವರನ್ನು ಹಲವು ತೊಂದರೆಗಳಿಗೆ ಗುರಿಯನ್ನು ಮಾಡುತ್ತವೆ. ಹಾಗಾಗಿ ಸಿಕ್ಕ ಸಿಕ್ಕಲ್ಲಿ ಶೌಚಕ್ಕೆ ಕೂರದೆ ಅದಕ್ಕಾಗಿ ಒಂದು ಸ್ಥಾನವನ್ನು ಕಲ್ಪಿಸುವುದು ಉತ್ತಮವಾದ ಚಿಂತನೆಯಾಗಿದೆ.
ಭಾರತ ಸರಕಾರವೂ ಈ ಹಿಂದೆ ಎಲ್ಲ ಕುಟುಂಬಗಳಿಗೂ ಒಂದೊAದು ಶೌಚಾಲಯ ಎನ್ನುವ ನಿರ್ಣಯವನ್ನು ಕೈಗೊಂಡು ಆ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಿತು. ಆದರೆ ಭಾರತದಂತಹ ದೇಶಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರುವುದು ಬಹಳ ಕಷ್ಟಕರವಾಗಿದೆ. ಮೊದಲನೆಯದಾಗಿ ಶೌಚಾಲಯವನ್ನು ನಿರ್ಮಿಸಲು ಸಾಕಷ್ಟು ಸ್ಥಳವೂ ಬೇಕಾಗುತ್ತದೆ. ಭಾರತದ ಕೆಲವು ಕುಟುಂಬಗಳಲ್ಲಿ ಮನೆಯ ಒಳಗೆ ಶೌಚಾಲಯವನ್ನು ನಿರ್ಮಿಸಲು ಹಿರಿಯ ತಲೆಮಾರಿನವರು ಒಪ್ಪುವುದಿಲ್ಲ. ಸಾಮೂಹಿಕ ಸುರಕ್ಷಿತ ಶೌಚಾಲಯವನ್ನು ಕಟ್ಟಿಕೊಟ್ಟರೂ ಅದು ಮನೆಯಿಂದ ತುಸು ದೂರವಿದೆ ಎನ್ನುವ ಕಾರಣದಿಂದ ಹೆಣ್ಣು ಮಕ್ಕಳು ಅದನ್ನು ಬಳಸಲು ಹಿಂದೆ ಮುಂದೆ ನೋಡುವರು. ಇದರೊಂದಿಗೆ ಶೌಚಾಲಯದಲ್ಲಿ ಬಳಸಲು ನೀರಿನ ವ್ಯವಸ್ಥೆಯೂ ಬೇಕಾಗುತ್ತದೆ.
ರಾಜಸ್ಥಾನ, ಬಿಹಾರ್ ಮೊದಲಾದ ಸ್ಥಳಗಳಲ್ಲಿ ನೀರಿಗೆ ಬಹಳ ಅಭಾವವಿರುವುದರಿಂದ ಇಂತಹ ಶೌಚಾಲಯಗಳನ್ನು ಶುಚಿಯಾಗಿರಿಸಲು ಯಾರೂ ಹೋಗುವುದಿಲ್ಲ. ಹಾಗಾಗಿ ಸರಕಾರ ನಿರ್ಮಿಸಿದ ಶೌಚಾಲಯದ ಸಮೀಪಕ್ಕೂ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿ ಅದು ಗಬ್ಬು ಶೌಚಾಲಯವಾಗಿ ಪರಿವರ್ತನೆಗೊಳ್ಳುತ್ತಿದೆ.
ಇಂತಹ ಕೆಲಸಗಳಿಗೆ ಸರಕಾರ ಮಾತ್ರ ತೊಡಗಿಕೊಂಡರೆ ಅದರ ಯಶಸ್ಸು ನಿರೀಕ್ಷಿತ ಮಟ್ಟಕ್ಕೆ ತಲುಪುವುದಿಲ್ಲ. ಇದಕ್ಕೆ ಶೌಚಾಲಯವನ್ನು ಬಳಸಲು ಇಚ್ಛಿಸುವವರೂ ಸ್ವಯಂಪ್ರೇರಿತರಾಗಿ ಕೈಜೋಡಿಸಬೇಕಾಗುತ್ತದೆ. ಶೌಚಾಲಯಗಳನ್ನು ಹೇಗೆ ಬಳಸಬೇಕು ಎನ್ನುವ ಬಗ್ಗೆ ಜನರಲ್ಲಿ ತಿಳಿವನ್ನು ನೀಡಬೇಕಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲಿ ನೀರಿನ ವ್ಯವಸ್ಥೆಯನ್ನೂ ಮಾಡಿಕೊಡಬೇಕಾಗುತ್ತದೆ. ಹೀಗೆ ನಿಗದಿತ ಗುರಿಯಾದ ೨೦೩೦ ರೊಳಗೆ ಎಲ್ಲ ಕುಟುಂಬಗಳಿಗೂ ಶೌಚಾಲಯವು ಸ್ಥಾಪಿತಗೊಂಡರೆ ಜನರ ಆರೋಗ್ಯವು ಗಣನೀಯವಾಗಿ ಹೆಚ್ಚಾಗುವುದರ ಜೊತೆಗೆ ಹೆಣ್ಣು ಮಕ್ಕಳಿಗೂ ಬಯಲಿಗೆ ಹೋಗುವ ಕ್ರಿಯೆಯಿಂದಾಗುವ ಮುಜುಗರವನ್ನು ತಪ್ಪಿಸಬಹುದಾಗಿದೆ.
- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು. ಮೊ. ೯೧೪೧೩ ೯೫೪೨೬.