ಐಗೂರು, ನ. ೧೮: ಐಗೂರಿನ ವಿಜಯನಗರದ ಗುಳಿಗಪ್ಪ ಸ್ವಾಮಿ ಮತ್ತು ವನದುರ್ಗಿ ದೇವಿಯ ೩೧ನೇ ವಾರ್ಷಿಕ ಪೂಜೆಯ ಪ್ರಯುಕ್ತ ದೇವಾಲಯವನ್ನು ತಳಿರು ತೋರಣ ಮತ್ತು ಹೂವಿನ ಚಿತ್ತಾರದಿಂದ ಅಲಂಕರಿಸಲಾಗಿತ್ತು. ದೇವಾಲಯದ ಅರ್ಚಕರುಗಳಾದ ಅಚ್ಚುತ ಮತ್ತು ಈಶ್ವರ ಭಟ್ಟ ಅವರ ಸಮ್ಮುಖದಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ಸ್ಥಳೀಯ ಚಾಣಕ್ಯ ಚಂಡೆ ಮೇಳ, ನಾಕೂರಿನ ಬ್ಯಾಂಡ್ ಸೆಟ್, ಈ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿತು. ದೀಪಾವಳಿಯ ಮಹಾಪೂಜೆಗೆ ನೆರೆಯ ಹಾಸನ, ಮೈಸೂರು, ಬೆಂಗಳೂರು, ಮಂಗಳೂರು ಜಿಲ್ಲೆಗಳಲ್ಲದೆ ಐಗೂರು, ನ. ೧೮: ಐಗೂರಿನ ವಿಜಯನಗರದ ಗುಳಿಗಪ್ಪ ಸ್ವಾಮಿ ಮತ್ತು ವನದುರ್ಗಿ ದೇವಿಯ ೩೧ನೇ ವಾರ್ಷಿಕ ಪೂಜೆಯ ಪ್ರಯುಕ್ತ ದೇವಾಲಯವನ್ನು ತಳಿರು ತೋರಣ ಮತ್ತು ಹೂವಿನ ಚಿತ್ತಾರದಿಂದ ಅಲಂಕರಿಸಲಾಗಿತ್ತು. ದೇವಾಲಯದ ಅರ್ಚಕರುಗಳಾದ ಅಚ್ಚುತ ಮತ್ತು ಈಶ್ವರ ಭಟ್ಟ ಅವರ ಸಮ್ಮುಖದಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ಸ್ಥಳೀಯ ಚಾಣಕ್ಯ ಚಂಡೆ ಮೇಳ, ನಾಕೂರಿನ ಬ್ಯಾಂಡ್ ಸೆಟ್, ಈ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿತು. ದೀಪಾವಳಿಯ ಮಹಾಪೂಜೆಗೆ ನೆರೆಯ ಹಾಸನ, ಮೈಸೂರು, ಬೆಂಗಳೂರು, ಮಂಗಳೂರು ಜಿಲ್ಲೆಗಳಲ್ಲದೆ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿತ್ತು.
ಈ ಮಹಾಪೂಜೆಯ ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷ ಆರ್. ರವಿ, ಉಪಾಧ್ಯಕ್ಷ ಟಿ.ಜಿ. ಮುತ್ತಪ್ಪ, ಕಾರ್ಯದರ್ಶಿ ಕೆ.ಆರ್. ರಮೇಶ್, ಖಜಾಂಚಿ ಕೆ.ಪಿ. ಮುತ್ತಪ್ಪ, ಕಮಿಟಿ ಸದಸ್ಯರು, ದಾನಿಗಳು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.