ಮಡಿಕೇರಿ, ನ. ೧೮: ವೀರಾಜಪೇಟೆಯ ತೂಕ್‌ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ಕೊಡವ ವಾಲಗತಾಟ್ ನಮ್ಮೆ ಈ ಬಾರಿ ಡಿಸೆಂಬರ್ ೧೨ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ಜರುಗಲಿದೆ. ಕೊಡವ ವಾಲಗ ಹಾಗೂ ಸಾಂಪ್ರದಾಯಿಕ ಆಟ್ ಅನ್ನು ಜನಪ್ರಿಯಗೊಳಿಸಿ ಈ ಹಿಂದಿನAತೆ ನೃತ್ಯ ಪ್ರಾಕಾರವನ್ನು ಮುಂದುವರಿಸುವ ಚಿಂತನೆಯೊAದಿಗೆ ಕಳೆದ ವರ್ಷದಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮೊದಲ ವರ್ಷ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು ೩೦೦ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಈ ಬಾರಿ ಸ್ಪರ್ಧಾಗಳುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿರುವ ನಿರೀಕ್ಷೆಯಿರುವುದಾಗಿ ಕಾರ್ಯಕ್ರಮದ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ಅವರು ತಿಳಿಸಿದ್ದಾರೆ.

ಅಮ್ಮತ್ತಿ ಕೊಡವ ಸಮಾಜದ ಸಹಕಾರದಲ್ಲಿ ಸಂಸ್ಥೆಯಿAದ ಎರಡನೇ ವರ್ಷದ ಕೊಡವ ವಾಲಗತ್ತಾಟ್ ನಮ್ಮೆಯನ್ನು ಆಯೋಜಿಸಲಾಗಿದ್ದು ಸ್ಪರ್ಧಿಗಳು ಡಿಸೆಂಬರ್ ೨ನೇ ತಾರೀಖಿನ ಒಳಗೆ ತಮ್ಮ ಹೆಸರನ್ನು ವೀರಾಜಪೇಟೆಯ ಮೂರ್ನಾಡು ರಸ್ತೆಯಲ್ಲಿರುವ ತೂಕ್ ಬೊಳಕ್ ಕೊಡವ ವಾರ ಪತ್ರಿಕೆಯ ಕಚೇರಿಯಲ್ಲಿ ಅಥವಾ ಫೋನ್ ಮೂಲಕ ನೋಂದಾಯಿಸಲು ಕೋರಿದ್ದಾರೆ.

ಡಿಸೆಂಬರ್ ೧೨ರಂದು ಅಮ್ಮತ್ತಿ ಕೊಡವ ೩ಆರನೇ ಪುಟಕ್ಕೆ(ಮೊದಲ ಪುಟದಿಂದ) ಸಮಾಜದ ಆವರಣದಲ್ಲಿ ಸ್ಪರ್ಧೆ ಜರುಗಲಿದ್ದು ಪುರುಷರು ಹಾಗೂ ಮಹಿಳೆಯರು ಎಂದು ಬೇರೆ ಬೇರೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ತಲಾ ಐದು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು ಪ್ರಾಥಮಿಕ ವಿಭಾಗ ಎಂದು ಒಂದರಿAದ ೭ನೇ ತರಗತಿಯವರೆಗೆ, ೮ನೇ ತರಗತಿ ಯಿಂದ ೧೦ನೇ ತರಗತಿಯವರೆಗೆ ಹೈಸ್ಕೂಲ್ ವಿಭಾಗ, ಒಂದನೇ ಪಿಯುಸಿಯಿಂದ ೩ನೇ ಪದವಿಯ ವರೆಗೆ ಕಾಲೇಜು ವಿಭಾಗ, ಕಾಲೇಜಿನ ನಂತರ ೬೦ ವಯಸ್ಸಿನವರೆಗೆ ಮತ್ತೊಂದು ವಿಭಾಗ, ೬೦ ವಯಸ್ಸಿನ ಮೇಲ್ಪಟ್ಟು ಹಿರಿಯ ನಾಗರಿಕರ ವಿಭಾಗ ಹೀಗೆ ಐದು ವಿಭಾಗಗಳಲ್ಲಿ ಪುರುಷರು ಮಹಿಳೆಯರು ಎಂದು ತಲಾ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಮಧೋಶ್ ಪೂವಯ್ಯ ತಿಳಿಸಿದ್ದಾರೆ. ಕಳೆದ ವರ್ಷ ಮೊದಲ ಬಾರಿಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ಯಶಸ್ವಿ ಕೊಡವ ವಾಲಗತ್ತಾಟ್ ನಮ್ಮೆಯನ್ನು ಆಯೋಜಿಸಲಾಗಿದ್ದು ಜನಮನ್ನಣೆ ಪಡೆದಿತ್ತು, ಈ ಬಾರಿ ಅಮ್ಮತ್ತಿ ಕೊಡವ ಸಮಾಜದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಪರ್ಧಿಗಳು ಮಾತ್ರವಲ್ಲದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದ್ದು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆಸಕ್ತರು ಡಿಸೆಂಬರ್ ೨ನೇ ತಾರೀಕಿನ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳ ಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೋಂದಣಿಗಾಗಿ ೯೪೮೦೫೫೬೬೬೭ ಅಥವಾ ೯೪೮೩೮೧೫೪೭೮ ಮೊಬೈಲ್ ಸಂಖ್ಯೆ ಯನ್ನು ಸಂಪರ್ಕಿಸಲು ಕೋರಿದ್ದಾರೆ. ಅಮ್ಮತ್ತಿಯ ಖ್ಯಾತ ವಾಲಗ ಕಲಾವಿದ ನರಶಿಯ್ಯ ತಂಡದವರು ವಾಲಗ ನುಡಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.