ಪ್ರತಿವರ್ಷ ನವೆಂಬರ್ ೧೯ ರಂದು ಅಂರ‍್ರಾಷ್ಟಿçÃಯ ಪುರುಷರ ದಿನವನ್ನಾಗಿ ಆಚರಿಸಲಾಗುತ್ತದೆ. ೧೯೯೯ ರಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿನ ವೆಸ್ಟ್ ಇಂಡೀಸ್ ವಿಶ್ವ ವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರಾಗಿದ್ದ ಡಾ. ಜೆರೋಮ್ ಟೀಲಿಕ್ಸಿಂಗ್ ಅವರು ತಮ್ಮ ತಂದೆಯ ಜನ್ಮ ದಿನದ ನೆನಪಿಗಾಗಿ ಅಂರ‍್ರಾಷ್ಟಿçÃಯ ಪುರುಷರ ದಿನವನ್ನು ಮೊದಲ ಬಾರಿಗೆ ಆಚರಿಸಿದರು.

ಒಬ್ಬ ಸಾಮಾನ್ಯ ಕಾರ್ಮಿಕ ಕೂಡ ಶ್ರಮದಿಂದ ಯೋಗ್ಯ ಜೀವನವನ್ನು ನಡೆಸುತ್ತಾನೆ. ಹೀಗೆ ಸಮಾಜಕ್ಕೆ ಮಾದರಿಯಾಗುವ ಪುರುಷರನ್ನು ಗುರುತಿಸಿ ಗೌರವಿಸುವುದು ಈ ದಿನ ಉದ್ದೇಶವಾಗಿದೆ. ಸಮಾಜದ ಏಳಿಗೆಯಲ್ಲಿ ಪುರುಷರ ಕೊಡುಗೆ ಮತ್ತು ಸಾಧನೆಯನ್ನು ಗೌರವಿಸುವುದು, ಪುರುಷರು ಎದುರಿಸುತ್ತಿರುವ ನಾನಾ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಈ ದಿನದ ಉದ್ದೇಶವಾಗಿದೆ. ಅಂತೆಯೇ ಕೆಲಸದಂತೆ ಆರೋಗ್ಯವೂ ತುಂಬಾ ಮುಖ್ಯವಾದುದು. ಕೆಲಸದ ಒತ್ತಡದಿಂದ ಆರೋಗ್ಯವನ್ನು ನಿರ್ಲಕ್ಷಿಸಬೇಡಿ ಎಂದು ಸಾರಲು ಈ ದಿನವನ್ನು ಮೀಸಲಿಡಲಾಗಿದೆ.

ಜೀವನ ಎಂಬ ನಾಟಕರಂಗದಲ್ಲಿ ಪುರುಷನ ಪಾತ್ರ ಅತ್ಯಂತ ದೊಡ್ಡದು ಹಾಗೂ ಮಹತ್ವದ್ದಾಗಿದೆ. ಮಗ, ಸಹೋದರ, ಆಪ್ತಮಿತ್ರ, ಆದರ್ಶ ಪತಿ, ತಂದೆ... ಕೊನೆಯದಾಗಿ ಅಜ್ಜನಾಗಿ ಪಾತ್ರ ವಹಿಸುವುದು ಕಷ್ಟಸಾಧ್ಯವೇ ಸರಿ. ವೈಯಕ್ತಿಕ ಬದುಕು ಮಾತ್ರವಲ್ಲದೇ ಸಾಮಾಜಿಕ ಬದುಕಿನಲ್ಲಿ ಪುರುಷನ ಪಾತ್ರ ಅತ್ಯಂತ ಮುಖ್ಯವಾದುದು. ಪುರುಷನು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾ ತನ್ನ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ.

ನಾವು ನಮ್ಮ ಜೀವನದಲ್ಲಿ ನೋಡುವ ಮೊದಲ ಪುರುಷನೆಂದರೆ ‘ಅಪ್ಪ’. ಅಪ್ಪ ಮಕ್ಕಳನ್ನು ತುಂಬಾ ಪ್ರೀತಿಯಿಂದ ಕಾಣುತ್ತಾನೆ. ಮಕ್ಕಳ ಬೇಕು, ಬೇಡವನ್ನೆಲ್ಲ ಈಡೇರಿಸುತ್ತಾನೆ. ಮಕ್ಕಳ ಆಟ-ಪಾಠದಲ್ಲಿ ಜೊತೆಯಾಗಿ ಅವರಿಗೆ ಬೆಂಬಲವಾಗಿ ನಿಲ್ಲುತ್ತಾನೆ. ಮಕ್ಕಳಿಗೊ ಅಪ್ಪನ ಮೇಲೆ ಅಪಾರವಾದ ಭರವಸೆ. ಅಪ್ಪ ಜೊತೆಯಿರಲು ಪ್ರಪಂಚವನ್ನೇ ಗೆಲ್ಲಬಹುದು ಅನ್ನುವಷ್ಟು ವಿಶ್ವಾಸ. ಅದಕ್ಕೆ ಅಲ್ವಾ, ‘ಅಪ್ಪ ಮಕ್ಕಳ ಮೊದಲ ಹೀರೋ’ ಆಗಿರುವುದು ಅಪ್ಪನ ಪ್ರೀತಿಯ ಜೊತೆಗೆ ಅಣ್ಣ-ತಮ್ಮಂದಿರೊಡನೆ ಬೆಳೆಯುತ್ತಾರೆ. ಶಾಲಾ ಜೀವನದಲ್ಲಿ ಶಿಕ್ಷಕರು ಅಪ್ಪನ ಸ್ಥಾನವನ್ನು ತುಂಬುತ್ತಾರೆ. ಮಕ್ಕಳ ಭವ್ಯ ಭವಿಷ್ಯವನ್ನು ರೂಪಿಸುವುದರ ಜೊತೆಗೆ ಜೀವನದ ಮೌಲ್ಯವನ್ನು ಹೇಳಿಕೊಡುತ್ತಾರೆ. ಸಮಾಜದಲ್ಲಿ ಹೇಗೆ ಗೌರವಯುತವಾಗಿ ಬದುಕಬೇಕು, ಹಿರಿಯರೊಡನೆ ಹೇಗೆ ಮಾತನಾಡಬೇಕು ಎನ್ನುವುದನ್ನು ಶಿಕ್ಷಕರಿಂದ ಕಲಿಯುತ್ತೇವೆ. ಇನ್ನು ಮುಂದಿನ ಬದುಕಿನಲ್ಲಿ ಒಳ್ಳೆಯ ಮಿತ್ರನಾಗಿ ಬದುಕುತ್ತಾನೆ. ಮದುವೆ ಎಂಬ ಬಂಧನದಲ್ಲಿ ಸ್ತಿçÃಯ ಬಾಳಸಂಗಾತಿಯಾಗಿ ಮಕ್ಕಳ ಆದರ್ಶ ಅಪ್ಪನಾಗುತ್ತಾನೆ. ಹೀಗೆ ಬದುಕಿನ ನಾಟಕರಂಗದ ಕೊನೆಯ ಪಾತ್ರವಾಗಿ ಮೊಮ್ಮಕ್ಕಳ ಪ್ರೀತಿಯ ಅಜ್ಜನಾಗುತ್ತಾನೆ.

ನಮ್ಮ ಸಮಾಜ ಹಾಗೂ ದೇಶದ ಅಭಿವೃದ್ಧಿಯಲ್ಲಿ ಪುರುಷರ ಕೊಡುಗೆ ಅಪಾರವಾಗಿದೆ. ಅದರಲ್ಲೂ ವಿಶೇಷವಾಗಿ ಗೌರವಿಸಲ್ಪಡುವ ಪುರುಷರ ಸಾಲಿನಲ್ಲಿ ನಮ್ಮ ವೀರ ಯೋಧರು ಮೊದಲಿಗರಾಗಿರುತ್ತಾರೆ. ದೇಶ ಸೇವೆಯೇ ಉಸಿರು ಅಂದುಕೊAಡು ರಾಷ್ಟç ರಕ್ಷಣೆಗಾಗಿ ಹಗಲಿರುಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಶ್ರಮಿಸುತ್ತಾರೆ. ಅವರಿಗೆ ಎಲ್ಲರ ಪರವಾಗಿ ಅಂರ‍್ರಾಷ್ಟಿçÃಯ ಪುರುಷರ ದಿನದ ಶುಭಾಶಯಗಳು.

ಹಾಗೆಯೇ ಮಳೆ, ಗಾಳಿ ಎನ್ನದೇ ಪ್ರಾಣಭಯ ತೊರೆದು ವಿದ್ಯುತ್ ಕಂಬವನ್ನೇರುವ ನಮ್ಮ ಲೈನ್‌ಮೆನ್‌ಗಳಿಗೂ, ಸ್ವಚ್ಛ ಭಾರತ ಅಭಿಯಾನದ ಮೂಲರಾಗಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೂ ವಂದನೆಗಳನ್ನು ಸಲ್ಲಿಸಬೇಕು. ಕೊನೆಯದಾಗಿ ಸ್ತಿçÃಯರನ್ನು ಗೌರವಿಸುವ, ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುವ, ವಯಸ್ಸಾದ ಹೆತ್ತವರ ಶಕ್ತಿಯಾಗಿ ಅವರಿಗೆ ಪ್ರೀತಿಯ ಆಸರೆ ಕೊಡುವ ಹಾಗೂ ಸಮಾಜ, ದೇಶದ ರಕ್ಷಣೆ ಹಾಗೂ ಅಭಿವೃದ್ಧಿಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ದುಡಿಯುತ್ತಿರುವ ಎಲ್ಲಾ ಪುರುಷರಿಗೂ ಅಂರ‍್ರಾಷ್ಟಿçÃಯ ಪುರುಷರ ದಿನದ ಶುಭಾಶಯಗಳು.

- ರೇಣುಕಾ ಆರ್. ನಾಯ್ಕ, ವೀರಾಜಪೇಟೆ, ಮೊ. ೯೪೮೦೪೬೩೬೨೩.