ವೀರಾಜಪೇಟೆ, ನ. ೧೮: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ವೀರಾಜಪೇಟೆ, ಅಮ್ಮತ್ತಿ ಕೊಡವ ಸಮಾಜಗಳು ಫೈನಲ್ ಪ್ರವೇಶಿಸಿವೆ.

ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯಾಟದಲ್ಲಿ ಅಮ್ಮತ್ತಿ ಕೊಡವ ಸಮಾಜ ತಂಡವು ನಾಪೋಕ್ಲು ಕೊಡವ ಸಮಾಜ ತಂಡವನ್ನು ೬-೫ ಗೋಲುಗಳಿಂದ ಸಡನ್‌ಡೆತ್‌ನಲ್ಲಿ ಪರಾಭವಗೊಳಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದ ಕಾರಣ ತೀರ್ಪುಗಾರರು ಪೆನಾಲ್ಟಿ ಶೂಟೌಟ್ ನಿಯಮವನ್ನು ಅಳವಡಿಸಿದರು. ಅದರಲ್ಲೂ ಸಮಬಲ ಸಾಧಿಸಿದ ಕಾರಣ ಸಡನ್ ಡೆತ್ ನಿಯಮದಲ್ಲಿ ಅಮ್ಮತ್ತಿ ಕೊಡವ ಸಮಾಜ ತಂಡ ಫೈನಲ್ಸ್ಗೆ ಅರ್ಹತೆ ಪಡೆದುಕೊಂಡಿತು.

ಅಂರ‍್ರಾಷ್ಟಿçÃಯ ನಿಯಮದಂತೆ ಪಂದ್ಯಾಟವನ್ನು ೧೫ ನಿಮಿಷಗಳ ನಾಲ್ಕು ಕ್ವಾರ್ಟರ್ ರೀತಿಯಲ್ಲಿ ನಡೆಸಲಾಯಿತು. ಅಮ್ಮತ್ತಿ ತಂಡದ ಪರ ೧೬ನೇ ನಿಮಿಷದಲ್ಲಿ ಇಂಡಿಯನ್ ಕ್ಯಾಂಪರ್ ಐನಂಡ ಆಕಾಶ್ ಪೂವಣ್ಣ ಗೋಲು ದಾಖಲಿಸುವುದರ ಮೂಲಕ ಮುನ್ನಡೆ ಕಾಯ್ದುಕೊಂಡರು. ೪೬ನೇ ನಿಮಿಷದಲ್ಲಿ ನಾಪೋಕ್ಲು ತಂಡದ ಎಂಇಜಿ ಆಟಗಾರ ಬೊಳ್ಳಚೆಟ್ಟಿರ ಪೂವಣ್ಣ ಗೋಲು ದಾಖಲಿಸಿ ಸಮಬಲ ಕಾಯ್ದುಕೊಂಡರು. ಸಮಬಲ ಆದ ಕಾರಣ ಪೆನಾಲ್ಟಿ ಶೂಟೌಟ್‌ನಲ್ಲಿ ಅಮ್ಮತ್ತಿ ಪರ ಮಂಡೇಪAಡ ಸಜನ್ ಅಚ್ಚಯ್ಯ ೨, ನೆಲ್ಲಮಕ್ಕಡ ಪೂವಣ್ಣ ೨ ನೆಲ್ಲಮಕ್ಕಡ ಅಯ್ಯಪ್ಪ ಗೋಲು ದಾಖಲಿಸಿದರು. ನಾಪೋಕ್ಲು ತಂಡದ ಪರ ಮೈಂದಪAಡ ಕಾರ್ಯಪ್ಪ ೩, ಕುಂಡ್ಯೋಳAಡ ಕಾರ್ಯಪ್ಪ ಒಂದು ಗೋಲು ದಾಖಲಿಸಿದರು. ಅಮ್ಮತ್ತಿ ತಂಡದ ಪರ ಅಶಿಸ್ತು ಪ್ರದರ್ಶನಕ್ಕೆ ನೆಲ್ಲಮಕ್ಕಡ ಸಚಿನ್ ಅವರಿಗೆ ಗ್ರೀನ್ ಕಾರ್ಡ್, ನಾಪೋಕ್ಲು ತಂಡದ ಪರ ಬೊಳ್ಳಚಂಡ ಪೂವಣ್ಣ ಅವರಿಗೆ ಹಳದಿ ಕಾರ್ಡ್ ಪ್ರದರ್ಶಿಸಲಾಯಿತು. ಅಮ್ಮತ್ತಿ ತಂಡಕ್ಕೆ ಒಂದು ಪೆನಾಲ್ಟಿ ಕಾರ್ನರ್ ಲಭಿಸಿದರೆ, ನಾಪೋಕ್ಲು ತಂಡಕ್ಕೆ ೧೦ ಪೆನಾಲ್ಟಿ ಕಾರ್ನರ್ ಲಭಿಸಿತು ಆದರೆ ಯಾವುದು ಗೋಲಾಗಿ ಪರಿವರ್ತನೆ ಆಗಲಿಲ್ಲ.

ಎರಡನೇ ಸೆಮಿಫೈನಲ್ಸ್ನಲ್ಲಿ ವೀರಾಜಪೇಟೆ ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ಕೊಡವ ಸಮಾಜ ತಂಡ ೪-೦ ಗೋಲುಗಳಿಂದ ಮೈಸೂರು ಕೊಡವ ಸಮಾಜ ತಂಡವನ್ನು ಪರಾಭವಗೊಳಿಸಿತು. ಬಹುತೇಕ ರಾಷ್ಟಿçÃಯ ಅಂರ‍್ರಾಷ್ಟಿçÃಯ ಆಟಗಾರರನ್ನು ಒಳಗೊಂಡ ವೀರಾಜಪೇಟೆ ತಂಡ ಆರಂಭದಿAದಲೇ ಸಂಘಟಿತ ಆಟಕ್ಕೆ ಒತ್ತು ನೀಡಿತು. ವೀರಾಜಪೇಟೆ ಕೊಡವ ಸಮಾಜ ತಂಡದ ಪರ ಅಂರ‍್ರಾಷ್ಟಿçÃಯ ಆಟಗಾರ ಮೇಕೇರಿರ ನಿತಿನ್ ತಿಮ್ಮಯ್ಯ ೧೩,೨೧,೨೬,೫೦ ನೇ ನಿಮಿಷದಲ್ಲಿ ಸತತ ನಾಲ್ಕು ಗೋಲುಗಳನ್ನು ದಾಖಲಿಸಿ ತಂಡಕ್ಕೆ ನೆರವಾದರು. ಮೈಸೂರು ತಂಡವು ವಿಶ್ವವಿದ್ಯಾಲಯ ಮಟ್ಟದ ಆಟಗಾರರನ್ನು ಒಳಗೊಂಡರು ಉತ್ತಮ ಪ್ರದರ್ಶನ ನೀಡಿ ಗೋಲು ಗಳಿಸಲು ವಿಪುಲ ಅವಕಾಶಗಳಿತ್ತು. ಮೈಸೂರು ತಂಡಕ್ಕೆ ೯ ಪೆನಾಲ್ಟಿ ಕಾರ್ನರ್‌ಗಳು ಲಭಿಸಿದರೂ ಯಾವುದೂ ಗೋಲಾಗಿ ಪರಿವರ್ತನೆಗೊಳ್ಳಲಿಲ್ಲ.

ಪಂದ್ಯಾಟದ ತೀರ್ಪುಗಾರರಾಗಿ ಚಂದಪAಡ ಆಕಾಶ್, ನೆಲ್ಲಮಕ್ಕಡ ಪವನ್, ತಾಂತ್ರಿಕ ಸಮಿತಿಯಲ್ಲಿ ಪಟ್ರಪಂಡ ಸಚಿನ್ ಮಂದಣ್ಣ, ಮೈಂದಪAಡ ಡ್ಯಾನಿ, ಕೊಕ್ಕಲೆಮಾಡ ಗೌತಮಿ, ತಾಂತ್ರಿಕ ನಿರ್ದೇಶಕರಾಗಿ ಕೋಡಿಮಣಿಯಂಡ ಗಣಪತಿ ಕಾರ್ಯನಿರ್ವಹಿಸಿದರು. ಮಾಳೇಟಿರ ಶ್ರೀನಿವಾಸ್ ಹಾಗೂ ಚೆಪ್ಪುಡಿರ ಕಾರ್ಯಪ್ಪ ಪಂದ್ಯಾಟದ ವೀಕ್ಷಕ ವಿವರಣೆಯನ್ನು ನೀಡಿದರು.

ಇಂದು ಅಮ್ಮತ್ತಿ ಕೊಡವ ಸಮಾಜ ಹಾಗೂ ವೀರಾಜಪೇಟೆ ಕೊಡವ ಸಮಾಜದ ನಡುವೆ ಮಧ್ಯಾಹ್ನ ೨ ಗಂಟೆಗೆ ಅಂತಿಮ ಹಣಾಹಣಿ ನಡೆಯಲಿದೆ. ಜೊತೆಗೆ ಕೊಡವ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಲಿವೆ.

- ಪಳೆಯಂಡ ಪಾರ್ಥ ಚಿಣ್ಣಪ್ಪ