ಭಾಗಮಂಡಲ, ನ. ೧೮: ತುಲಾಸಂಕ್ರಮಣದ ಪ್ರಯುಕ್ತ ಅಕ್ಟೋಬರ್ ೧೬ರಂದು ಭಾಗಮಂಡಲ ದಿಂದ ತಲಕಾವೇರಿಗೆ ಕೊಂಡೊಯ್ಯ ಲಾಗಿದ್ದ ಕಾವೇರಿ ಮಾತೆಗೆ ತೊಡಿಸುವ ಆಭರಣಗಳನ್ನು ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಲಾಯಿತು.
ಜಾತ್ರೆಯ ಅಂಗವಾಗಿ ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಂದ ಆಭರಣ ಗಳನ್ನು ಪಡೆದು ತಲಕಾವೇರಿಯಲ್ಲಿ ಮಾತೆಗೆ ತೊಡಿಸಿದ್ದರು. ಕಿರು ಸಂಕ್ರಮಣದವರೆಗೆ ಕಾವೇರಿ ಕುಂಡಿಕೆಯಲ್ಲಿ ಆಭರಣ ಹಾಗೂ ಬೆಳ್ಳಿಯ ಕವಚಗಳನ್ನು ತೊಡಿಸಲಾಗಿತ್ತು. ಸಂಕ್ರಮಣ ಮುಗಿದ ಬಳಿಕ ಭಂಡಾರ ವನ್ನು ತರಲಾಯಿತು. ಚಿನ್ನಾಭರಣ ಗಳನ್ನು ಮರಳಿ ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸ ಲಾಗಿದ್ದು, ಭಾಗಮಂಡಲ ಕ್ಷೇತ್ರದಲ್ಲಿ ಭದ್ರವಾಗಿಡಲಾಗಿದೆ. ಬಳಿಕ ಹುಂಡಿ ಎಣಿಕೆ ಮಾಡಲಾಯಿತು. ಅಕ್ಟೋಬರ್ ೨೬ ರಿಂದ ನವೆಂಬರ್ ೧೮ರವರೆಗೆ ಇ- ಹುಂಡಿಯಲ್ಲಿ ಸಂಗ್ರಹವಾದ ರೂ. ೫೫,೬೨೮ ಸೇರಿದಂತೆ ತಲಕಾವೇರಿ ಮತ್ತು ಭಾಗಮಂಡಲ ಎರಡೂ ಕ್ಷೇತ್ರಗಳಲ್ಲಿ ಒಟ್ಟು ೨೪ ಲಕ್ಷದ ೯೪೧ ರೂ. ಸಂಗ್ರಹವಾಗಿದೆ.
ಭಾಗಮAಡಲದಲ್ಲಿ ಒಂದು ತಿಂಗಳ ಕಾಲ ನಂದಾದೀಪವನ್ನು ಇರಿಸಲಾಗಿದೆ ಹಾಗೂ ಅಕ್ಷಯ ಪಾತ್ರೆ ಯನ್ನು ಇರಿಸಲಾಗಿದ್ದು ಸಾಂಪ್ರದಾಯಿಕ ಆಚರಣೆ ಶನಿವಾರ ಸಮಾಪ್ತಿಗೊಂಡಿದೆ.
-ಸುನಿಲ್ ಕುಯ್ಯಮುಡಿ