ಅಹಮದಾಬಾದ್, ನ. ೧೯: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಾಟದಲ್ಲಿ ಆಸ್ಟೆçÃಲಿಯಾ ತಂಡ ಭಾರತವನ್ನು ಮಣಿಸುವ ಮೂಲಕ ವಿಶ್ವಕಪ್‌ನಲ್ಲಿ ೬ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಗೆಲುವಿನ
(ಮೊದಲ ಪುಟದಿಂದ) ಭರವಸೆಯಲ್ಲಿದ್ದ ಭಾರತ ತಂಡಕ್ಕೆ ನಿರಾಸೆ ಅನುಭವಿ ಸುವಂತಾಗಿದೆ. ಟಾಸ್ ಗೆದ್ದ ಆಸ್ಟೆçÃಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾಗೆ ಆರಂಭ ಉತ್ತವಾಗಿದ್ದರೂ ನಂತರ ಸತತವಾಗಿ ವಿಕೆಟ್‌ಗಳು ಉರುಳಿದ್ದ ರಿಂದ ಸಂಕಷ್ಟ ಎದುರಾಯಿತು. ಈ ವೇಳೆ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಆಸರೆಯಾದರು. ಈ ಇಬ್ಬರು ಆಟಗಾರರು ಅರ್ಧ ಶತಕ ಸಿಡಿಸಿ ಔಟಾದರು. ರೋಹಿತ್ ಶರ್ಮಾ ೪೭ ರನ್ ಗಳಿಸಿ ಔಟಾ ದರೆ, ಶುಭ್ಮನ್ ಗಿಲ್ ೪ ರನ್‌ಗಳಿಗೆ ಔಟಾದರು. ಇನ್ನು ಶ್ರೇಯಸ್ ಅಯ್ಯರ್ ೪ ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ವಿರಾಟ್ ಕೊಹ್ಲಿ ೫೪ ರನ್ ಸಿಡಿಸಿ ಔಟಾದರೆ ಕೆ.ಎಲ್. ರಾಹುಲ್ ೬೬ ರನ್‌ಗೆ ಔಟಾದರು. ಬಳಿಕ ಬಂದ ರವೀಂದ್ರ ಜಡೇಜಾ ೯ ರನ್ ಬಾರಿಸಿ ನಿರ್ಗಮಿಸಿದರು. ನಂತರ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ೧೮ ರನ್ ಗಳಿಸಿದರೆ, ಶಮಿ ೬, ಜಸ್‌ಪ್ರೀತ್ ಬುಮ್ರಾ ೧ ಮತ್ತು ಕುಲದೀಪ್ ಯಾದವ್ ೧೦ ರನ್ ಗಳಿಸಿದರು. ಮೊಹಮ್ಮದ್ ಸಿರಾಜ್ ೯ ರನ್ ಬಾರಿಸಿ ಅಜೇಯರಾಗಿ ಉಳಿದರು. ಆಸ್ಟೆçÃಲಿಯಾ ಪರ ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್ ೩, ಪ್ಯಾಟ್ ಕಮಿನ್ಸ್ ಮತ್ತು ಹೆಜಲ್ವುಡ್ ತಲಾ ೨ ವಿಕೆಟ್, ಗ್ಲೇನ್ ಮ್ಯಾಕ್ಸ್ ವೇಲ್ ಮತ್ತು ಜಂಪಾ ತಲಾ ೧ ವಿಕೆಟ್ ಪಡೆದರು. ೨೪೧ ರನ್ ಗುರಿಯನ್ನು ಬೆನ್ನಟ್ಟಿದ್ದ ಆಸ್ಟೆçÃಲಿಯಾ ತಂಡ ಆರಂಭದಲ್ಲಿ ೪೭ ರನ್‌ಗೆ ೩ ವಿಕೆಟ್‌ನ್ನು ಕಳೆದುಕೊಂಡು ಆಘಾತಕ್ಕೊಳಗಾದರೂ, ಟ್ರಾವಿಸ್ ಹೆಡ್ಡ್ ಅಮೋಘ ಶತಕ (೧೩೭) ಹಾಗೂ ಮಾರ್ನಸ್ ಲಬುಶೇನ್ ಅವರ ಅರ್ಧ ಶತಕ (ಅಜೇಯ -೫೮) ನೆರವಿನಿಂದ ಭಾರತದ ವಿರುದ್ಧ ೬ ವಿಕೆಟ್‌ಗಳ ಅಂತರದಿAದ ಗೆಲುವು ಸಾಧಿಸುವುದರ ಮೂಲಕ ೬ನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡರು. ಭಾರತದ ಪರ ಬುಮ್ರಾ ೨, ಶಮಿ, ಸಿರಾಜ್ ತಲಾ ೧ ವಿಕೇಟ್ ಪಡೆದರು.