ಮುಳ್ಳೂರು, ನ. ೨೦: ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ. ವ್ಯಾಪ್ತಿಯ ಕೊಡಗು ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ಬೆಸೂರು-ಕಟ್ಟೆಪುರ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಭೂಮಿಪೂಜೆ ನೆರವೇರಿಸಿದರು.
ಹೇಮಾವತಿ ಪುನರ್ ವಸತಿ ಯೋಜನೆಯಡಿ [ಎಚ್ಆರ್ಪಿ] ೮೮ ಲಕ್ಷ ರೂ. ವೆಚ್ಚದಲ್ಲಿ ಬೆಸೂರು ವೃತ್ತದಿಂದ ಕಟ್ಟೆಪುರ ಗ್ರಾಮದವರೆಗೆ ಸಂಪೂರ್ಣವಾಗಿ ಹದಗೆಟ್ಟಿದ್ದ ಉಳಿಕೆ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂಥರ್ ಗೌಡ ಚಾಲನೆ ನೀಡಿದ ಬಳಿಕ ಮಾತನಾಡಿ-ಬೆಸೂರು ಗ್ರಾ.ಪಂ.ಭಾಗದಲ್ಲಿ ಎಚ್ಆರ್ಪಿ ಯೋಜನೆಯಡಿಯಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಅವಕಾಶಗಳಿದ್ದು ಇದನ್ನು ಸದುಪಯೋಗಿಸಿಕೊಂಡು ಹಂತಹAತವಾಗಿ ಅಭಿವೃದ್ಧಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್, ಬೆಸೂರು ಗ್ರಾ.ಪಂ.ಅಧ್ಯಕ್ಷೆ ಕಮಲಮ್ಮ ಸದಸ್ಯರಾದ ರಾಮು, ಕಿಶನ್, ಗೌರಮ್ಮ, ದಯಾಕರ್ ಗ್ರಾ.ಪಂ. ಕಾರ್ಯದರ್ಶಿ ಆನಂದ್, ಬ್ಯಾಡಗೊಟ್ಟ ಗ್ರಾ.ಪಂ.ಅಧ್ಯಕ್ಷ ಮಹಮದ್ ಹನೀಪ್, ಸದಸ್ಯೆ ಪಾವನ ಕೊಡ್ಲಿಪೇಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್ ಪ್ರಮುಖರಾದ ತೇಜಕುಮಾರ್, ಶರತ್ಶೇಖರ್, ಚೇತನ್, ಮಲ್ಲೇಶ್, ಹಾಲಪ್ಪ, ಬೆಟ್ಟಪ್ಪ ಎಚ್ಆರ್ಪಿ ಅಭಿಯಂತರುಗಳಾದ ಸಜಿತ್, ಹಾರೂನ್ ರಶೀದ್ ಮುಂತಾದವರು ಹಾಜರಿದ್ದರು.