ಕುಶಾಲನಗರ, ನ.೧೯: ಕುಶಾಲನಗರದಲ್ಲಿ ಗುಡ್ಡಗಾಡು ಓಟ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಮೈಸೂರಿನ ರಾಹುಲ್ ಪ್ರಥಮ ಸ್ಥಾನ, ಕಜೆ ಸಾಬ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಯುವತಿಯರ ವಿಭಾಗದಲ್ಲಿ ಕುಶಾಲನಗರದ ಟಿ.ಪಿ. ಚೈತ್ರ ಪ್ರಥಮ ಮತ್ತು ಕೊಣನೂರಿನ ಎಸ್.ಎನ್. ರಶ್ಮಿತಾ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕೊಡಗು ಎಜುಕೇಶನಲ್ ಅಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರದಲ್ಲಿ ನಡೆದ ಗುಡ್ಡಗಾಡು ಓಟದಲ್ಲಿ ಯುವಕರಿಗೆ ೭ ಕಿಲೋಮೀಟರ್ ಹಾಗೂ ಯುವತಿಯರಿಗೆ ೪.೫ ಕಿಲೋಮೀಟರ್ ಓಟವನ್ನು ಆಯೋಜಿಸಲಾಗಿತ್ತು.

ಯುವಕರ ವಿಭಾಗದಲ್ಲಿ ೭೨ ಮಂದಿ ಭಾಗವಹಿಸಿದ್ದು, ಕುಶಾಲನಗರ ಪದವಿಪೂರ್ವ ಕಾಲೇಜಿನ ಮೈದಾನದಿಂದ ಓಟಕ್ಕೆ ಚಾಲನೆ ನೀಡಲಾಯಿತು. ಯುವಕರ ವಿಭಾಗದಲ್ಲಿ ಉಜಿರೆಯ ದಿವಾಕರ್ ಮರಾಠಿ ತೃತೀಯ ಸ್ಥಾನ, ಕೂಡಿಗೆಯ ಟಿ.ಡಿ. ತೇಜಸ್ ನಾಲ್ಕನೇ ಸ್ಥಾನ, ಎಂ.ಸಿ. ನಂದನ್ ಐದನೇ ಸ್ಥಾನ ಕೂಡಿಗೆಯ ಚನ್ನಬಸವ ೬ನೇ ಸ್ಥಾನ ಗಳಿಸಿದ್ದಾರೆ.

ವಿಜೇತ ಯುವಕರಿಗೆ ಪ್ರಥಮ ಬಹುಮಾನವಾಗಿ ೧೦,೦೦೦, ದ್ವಿತೀಯ ರು ೮೦೦೦, ತೃತೀಯ ರು ೬,೦೦೦, ನಾಲ್ಕನೇ ಬಹುಮಾನ ರೂ ೪,೦೦೦, ಐದನೇ ಬಹುಮಾನ ರೂ ೩೦೦೦ ಆರನೇ ಬಹುಮಾನವಾಗಿ ರೂ ೨, ಸಾವಿರ ಮತ್ತು ಪ್ರಮಾಣ ಪತ್ರ ನೀಡಲಾಯಿತು.

ಯುವತಿಯರ ವಿಭಾಗದಲ್ಲಿ ಒಟ್ಟು ೪೭ ಮಂದಿ ಓಟದಲ್ಲಿ ಪಾಲ್ಗೊಂಡಿದ್ದು ಸ್ಪೋರ್ಟ್ಸ್ ಹಾಸ್ಟೆಲ್‌ನ ಮೈತಾಲಿ ಮೊಲಾಡೆ ತೃತೀಯ ಸ್ಥಾನ, ಮಡಿಕೇರಿಯ ಪಟ್ಟೆಮನೆ ಪ್ರಕೃತಿ ಬೋಪಯ್ಯ ಮತ್ತು ಕೂಡಿಗೆಯ ಸಿ.ಡಿ. ನೆಕ್ಷ ನಾಲ್ಕನೇ ಸ್ಥಾನ ಗಳಿಸಿದರು. ಕೂಡಿಗೆಯ ನಮಿತಾ ಐದನೇ ಸ್ಥಾನ ಮತ್ತು ಕೂಡಿಗೆಯ ತಜ್ಞವಿ ಆರನೇ ಸ್ಥಾನ ಗಳಿಸಿದ್ದಾರೆ.

ಯುವಕರ ವಿಭಾಗದಲ್ಲಿ ರಾಹುಲ್ ೭ ಕಿ.ಮೀ ದೂರವನ್ನು ೨೩.೨೫ ನಿಮಿಷದಲ್ಲಿ ಕ್ರಮಿಸಿದರೆ, ಯುವತಿಯರ ವಿಭಾಗದ ಟಿ.ಪಿ. ಚೈತ್ರ ೪.೫ ಕಿ.ಮಿ. ಅಂತರವನ್ನು ೨೧.೩೩ ನಿಮಿಷಗಳ ಅಂತರದಲ್ಲಿ ಕ್ರಮಿಸಿದ್ದಾರೆ.

ವಿಜೇತ ಯುವತಿಯರಿಗೆ ಪ್ರಥಮ ೬೦೦೦ ರೂ ದ್ವಿತೀಯ ೫೦೦೦ ರೂ, ತೃತೀಯ ರೂ. ೪೦೦೦ ೪ ನೇ ಬಹುಮಾನ ಇಬ್ಬರಿಗೆ ರೂ ೩೦೦೦ ಐದನೇ ಬಹುಮಾನ ರೂ ೨,೦೦೦ ಮತ್ತು ೬ನೇ ಬಹುಮಾನ ರೂ ಒಂದು ಸಾವಿರ ನೀಡಲಾಯಿತು.

ಟ್ರಸ್ಟ್ನ ಅಧ್ಯಕ್ಷ ಮಂಡೆಪAಡ ಕೆ. ಚೆಂಗಪ್ಪ, ಪ್ರಮುಖರಾದ ಮೇಜರ್ ಜನರಲ್ (ನಿ.) ಕೋಡಂದೇರ ಅರ್ಜುನ್ ಮುತ್ತಣ್ಣ, ಮಾರ್ಚಂಡ ಗಣೇಶ್ ಪೊನ್ನಪ್ಪ, ಕ್ಯಾಪ್ಟನ್ ಪಟ್ಟಡ ಎಸ್. ಕಾರ್ಯಪ್ಪ, ಬಹುಮಾನ ವಿತರಿಸಿದರು.

ಕ್ಯಾಪ್ಟನ್ ಎ.ಪಿ. ಸುಬ್ಬಯ್ಯ, ಅಂತರರಾಷ್ಟಿçÃಯ ಮ್ಯಾರಥಾನ್ ಮೆಡಲಿಸ್ಟ್ ಹೊಸೊಕ್ಲು ಚಿನ್ನಪ್ಪ, ಕಾರ್ಯಕ್ರಮ ಆಯೋಜಕರಾದ ಹವಾಲ್ದಾರ್ ಜನಾರ್ಧನ್, ಸುಬೇದಾರ್ ಕೆ.ಜಿ. ಸೋಮಣ್ಣ, ಸಿಆರ್‌ಪಿಎಫ್ ಅಧಿಕಾರಿ ಶೈಲಾ, ರಕ್ಷಿತಾ ಜನಾರ್ಧನ್, ಕಾರ್ತಿಕ ಮತ್ತಿತರರು ಇದ್ದರು.

- ಚಂದ್ರಮೋಹನ್