ಚೆಯ್ಯAಡಾಣೆ, ನ. ೧೯ : ಕ್ರೀಡೆಗಳ ಆಯೋಜನೆಯೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹೇಳಿದರು.

ನಾಪೋಕ್ಲುವಿನ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾದ ೮ನೇ ವರ್ಷದ ನಾಪೋಕ್ಲು ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಗಳಲ್ಲಿ ಆಶಾಂತಿಗೆ ಆಸ್ಪದ ಕೊಡದೆ ಸಹೋದರತೆಯನ್ನು ಕಾಪಾಡಿಕೊಳ್ಳ ಬೇಕೆಂದು ಅವರು ಹೇಳಿದರು.

ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್, ನಾಪೋಕ್ಲು ಜಮಾಅತ್ ಅಧ್ಯಕ್ಷ ಸಲೀಂ ಹಾರಿಸ್ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು ಸಂಯಮ ಬಹಳ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಅವರನ್ನು ಡೆಕ್ಕನ್ ಯೂತ್ ಕ್ಲಬ್‌ನ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭ ಜೆಡಿಎಸ್ ಮುಖಂಡ ಮನ್ಸೂರ್ ಆಲಿ, ಗ್ರಾ.ಪಂ. ಮಾಜಿ ಸದಸ್ಯ ಅಬ್ದುಲ್ ಅಝೀಝ್, ಪಿ.ಎಂ ರಶೀದ್, ಕ್ಲಬ್ಬಿನ ಅಧ್ಯಕ್ಷ ಮನ್ಸೂರ್, ಉಪಾಧ್ಯಕ್ಷ ಉಬೈದ್, ಆಯೋಜಕರಾದ ಫೈಝಲ್, ಹಿರಿಯ ಸದಸ್ಯರಾದ ಅಹಮದ್, ಅರಾಫತ್, ಇಬ್ರಾಹಿಂ, ಸತ್ತಾರ್, ಕನ್ನಡಿಯಂಡ ಹಸೈನಾರ್, ಪೊಲೀಸ್ ಸಿಬ್ಬಂದಿ ಷರೀಫ್, ಮತ್ತಿತರರು ಹಾಜರಿದ್ದರು.