ವರದಿ: ಈಶಾನ್ವಿ ಕಿರಣ್

ವೀರಾಜಪೇಟೆ, ನ. ೧೯: ವೀರಾಜಪೇಟೆ ನಗರದ ನಿವಾಸಿ ಹಾಗೂ ಹವ್ಯಾಸಿ ಚಿತ್ರಕಲಾವಿದ ಸಾದಿಕ್ ಹಂಸ ಅವರ ಶ್ರಮದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಸಾದಿಕ್ ಆರ್ಟ್ ಲಿಂಕ್ಸ್ ಸಂಯುಕ್ತ ಆಶ್ರಯದಲ್ಲಿ ಕಲಾ ಶಿಬಿರ ಕಲಾ ಉತ್ಸವ ಕೊಡಗು ೨೦೨೩ ಎಂಬ ಕಾರ್ಯಕ್ರಮ ಪಟ್ಟಣದ ಮೊಗರಗಲ್ಲಿ ಯಲ್ಲಿರುವ ಸಾದಿಕ್ ಆರ್ಟ್ ಕಲಾಭೂಮಿಯಲ್ಲಿ ನಡೆಯುತ್ತಿದ್ದು ಶಿಬಿರದಲ್ಲಿ ಸಾರ್ವಜನಿಕರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ಚಿತ್ರಕಲೆಯ ಬಗ್ಗೆ ಕೊಡಗಿನ ಚಿತ್ರ ಕಲಾವಿದರ ಕುಂಚದಿAದ ಅರಳಿದ ಚಿತ್ರಿತವಾದ ಚಿತ್ರ ಕಲೆಗಳ ಸ್ವಾದವನ್ನು ಪರಿಚಯಿಸಿಕೊಳ್ಳುತ್ತಿದ್ದಾರೆ.

ಕಲಾ ಶಿಬಿರವು ನವೆಂಬರ್ ೧೧ ರಂದು ಆರಂಭವಾಗಿದ್ದು, ಡಿ. ೩೧ ರಂದು ಕೊನೆಗೊಳ್ಳಲಿದೆ. ಶಿಬಿರದಲ್ಲಿ ಕೊಡಗಿನ ಹೆಸರಾಂತ ಚಿತ್ರಕಲಾವಿದ ರಾದ ಬಿ.ಆರ್. ಸತೀಶ್. ರೂಪೇಶ್ ನಾಣಯ್ಯ, ಪ್ರಸನ್ನ ಕುಮಾರ್, ರಾಮ್ ಗೌತಮ್, ಬಾವ ಮಾಲ್ದಾರೆ, ಸುನದ್ ಮತ್ತು ಚಿತ್ರಕಲಾ ಪರಿಷತ್‌ನ ವಿದ್ಯಾರ್ಥಿಯಾದ ಭುವನೇಶ್ವರಿ ಯೋಗಿಶ್ ಮೊದಲಾದವರ ಕುಂಚ ದಿಂದ ಚಿತ್ರಿತವಾದ ಚಿತ್ರಕಲೆಗಳು ಕಲಾ ಭೂಮಿಯಲ್ಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಮೊಗರಗಲ್ಲಿಯ ನಿವಾಸಿ ಎ.ಎ. ಹಂಸ ಅವರ ಪುತ್ರ ಹವ್ಯಾಸಿ ಚಿತ್ರಕಲಾವಿದರಾದ ಸಾಧಿಕ್ ಅವರು ಕೊಡಗಿನ ಹೆಸರಾಂತ ಚಿತ್ರಕಲಾವಿದ ರನ್ನು ಒಂದೇ ಸೂರಿನಡಿಯಲ್ಲಿ ಕರೆತಂದು ಚಿತ್ರಕಲೆಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಚಿತ್ರಕಲೆ ಪ್ರದರ್ಶನ, ಶಿಲ್ಪಕಲೆ, ಪ್ರತಿಷ್ಠಾಪನಾ ಕಲೆ, ಛಾಯಚಿತ್ರಕಲೆ ನಿರ್ಮಾಣ ಮತ್ತು ಪ್ರದರ್ಶನ ಹೀಗೆ ನಾನಾ ಚಿತ್ರ ಪ್ರಕಾರಗಳನ್ನು ಚಿತ್ರಕಲಾ ರಸಿಕರಿಗೆ ರಸದೌತಣ ಉಣಬಡಿಸುತ್ತಿದ್ದಾರೆ.

ಕಲಾ ಶಿಬಿರದಲ್ಲಿ ಕಲೆಯ ಬಗ್ಗೆ ವಿವರಿಸಿದ ಸಾದಿಕ್ ಅವರು ಇಂದು ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮವು ನಾಗಲೋಟದಲ್ಲಿ ಬೆಳೆಯತೊಡಗಿದೆ, ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಚಿತ್ರಕಲೆಯನ್ನು ಪರಿಚಯಿಸುವ ವೇದಿಕೆ ನೀಡಿದ್ದಲ್ಲಿ ಕೊಡಗು ಜಿಲ್ಲೆಯಲ್ಲಿರುವ ಚಿತ್ರಕಲೆ ಗಾರರ ಚಿತ್ರಗಳ ಬಿಕರಿಯೊಂದಿಗೆ ಚಿತ್ರ ಕಲೆಗೆ ಪ್ರೋತ್ಸಾಹ ನೀಡಿದಂತಾ ಗುತ್ತದೆ. ಕೊಡಗಿನ ಬಹುಮುಖ ಕಲೆಗಳು ರಾಜ್ಯವಲ್ಲದೆ ದೇಶ ದಂತ್ಯಾAತ ಪ್ರಖ್ಯಾತಿಗೊಳ್ಳಬೇಕು ಜಿಲ್ಲೆಯ ಪ್ರತಿಯೊಬ್ಬ ಚಿತ್ರಕಲೆ ಗಾರನಿಗೂ ಗೌರವ ಲಭಿಸಿದಲ್ಲಿ ಚಿತ್ರಕಲೆಯು ಜೀವಂತವಾಗಿರಿಸುವಲ್ಲಿ ಸಂದೇಹವಿಲ್ಲ ಎಂದರು.

ಕಲಾವಿದ ಬಾವಾ ಮಾಲ್ದಾರೆ ಮಾಹಿತಿ ನೀಡುತ್ತಾ, ಕೊಡಗಿನಲ್ಲಿ ನಾನಾ ರೀತಿಯ ಚಿತ್ರ ಕಲಾವಿದ ರಿದ್ದಾರೆ, ಕುಂಚದಿAದ ಚಿತ್ರಿತವಾದ ಚಿತ್ರಕಲೆಯನ್ನು ಪ್ರದರ್ಶನ ಮಾಡಲು ವೇದಿಕೆ ಕಲ್ಪಿಸಿ ಸಾರ್ವಜನಿಕರಿಗೆ ಕಲೆಯ ಬಗ್ಗೆ ಅಸಕ್ತಿ ಬೆಳೆಸುವಂತೆ ಮಾಡಲು ಸರ್ಕಾರವು ಸ್ಥಳವಾಕಾಶ ನೀಡಿದಲ್ಲಿ ನಿರಂತವಾಗಿ ಕಲೆಯನ್ನು ಬೆಳೆಸಲು ಕಲಾವಿದರು ಒಂದೇ ಸೂರಿನಡಿಯಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶನ ಮಾಡಬಹುದಾಗಿದೆ. ಕರ್ನಾಟಕ ರಾಜ್ಯದ ಬೃಹತ್ ನಗರಗಳಲ್ಲಿ ಚಿತ್ರಸಂತೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಚಿತ್ರಕಲೆ ಪ್ರದರ್ಶನ ಮತ್ತು ಮಾಹಿತಿ ಹಾಗೂ ಮಾರಾಟ ಮಾಡುವ ವೇದಿಕೆ ಕಲ್ಪಿಸಬೇಕು. ಅದರಂತೆ ಕೊಡಗಿನಲ್ಲಿ ಈ ರೀತಿಯ ವ್ಯವಸ್ಥೆಯನ್ನು ಜಾರಿಗೆ ತಂದಲ್ಲಿ ಸ್ಥಳೀಯ ಚಿತ್ರ ಕಲಾವಿದರಿಗೆ ಪ್ರೋತ್ಸ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

ಇಂದು ಚಿತ್ರಕಲೆಯಲ್ಲಿ ಪೈಪೋಟಿ ಬೆಳದಿದೆ. ಚಿತ್ರಕಲೆಯಲ್ಲಿ ಕಲಿಯುವಂತದ್ದು ಬಹಳವಿದೆ, ತಾನು ಕಲಿತ ವಿದ್ಯೆ ಪರರ ಮುಂದೆ ಪ್ರದರ್ಶನ ಮಾಡಿದಲ್ಲಿ ನಿಜವಾದ ಅರ್ಥ ಬರುತ್ತದೆ ಎಂದು ಕೇರಳದ ಚಿತ್ರ ಕಲಾವಿದ ಕರ್ನಲ್ ಸುರೇಶ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಶಿಕ್ಷಕ ಸುಲೈಮಾನ್ ಭಾಗವಹಿಸಿ ಅಭಿಪ್ರಾಯಗಳನ್ನು ಹಂಚಿಕೊAಡು ಮಾತನಾಡುತ್ತಾ, ಚಿತ್ರಕಲೆಯ ಶಿಕ್ಷಣದಲ್ಲಿ ಹಲವಾರು ವಿಷಯ ಧಾರಿತ ಪದವಿಗಳಿದ್ದು ಆಯ್ಕೆಯು ವಿದ್ಯಾರ್ಥಿಯ ವಿವೇಚನೆಗೆ ಬಿಟ್ಟಿದ್ದು, ಸಾಮಾಜಿಕ ಕಳಕಳಿಯ ಚಿತ್ರಣವನ್ನು ಚಿತ್ರಗಳ ಮೂಲಕ ನಾಡಿನ ಸಮಸ್ತ ಸಾರ್ವಜನಿಕರಿಗೆ ತಿಳಿಯಪಡಿಸುವ ಉದ್ದೇಶವಿದೆ, ಚಿತ್ರಕಲೆಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ, ಜಿಲ್ಲೆಯ ವಿದ್ಯಾರ್ಥಿಗಳು ಚಿತ್ರಕಲೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಕಲೆಗೆ ಹೊಸ ಅಧ್ಯಾಯ ತೋರಿಸಿಕೊಟ್ಟಂತಾಗುತ್ತದೆ ಎಂದರು. ಸಾಧಿಕ್ ಅವರು ೨೦೧೭ ರಿಂದ ಇಲಾಖೆ ಮತ್ತು ದಾನಿಗಳ ನೆರವಿನಿಂದ ಚಿತ್ರಕಲೆ ಪ್ರದರ್ಶನ ಕೂಕ್ಲೂರುವಿನಲ್ಲಿ ಆಯೋಜನೆ ಮಾಡಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂರ‍್ರಾಷ್ಟಿçÃಯ ಚಿತ್ರಕಲಾವಿದರಾದ ಜ್ಯೋತಿಲಾಲ್ ಕೊಲ್ಲಂ ಮತ್ತು ರಾಜಪ್ಪನ್ ಆಚಾರಿ ಚೆಂಗನಶೇರಿ ಇವರುಗಳು ೧೫ ದಿನಗಳ ಕಲಾ ಉತ್ಸವದಲ್ಲಿ ಭಾಗಿಯಾಗಿ ಅಪೂರ್ವವಾದ ಕಲಾ ಕುಂಚದಿAದ ಚಿತ್ರಕಲೆಯ ಪ್ರದರ್ಶನ ಮಾಡಿದ್ದರು.

ಕಲಾ ಉತ್ಸವದಲ್ಲಿ ಕಲಾಸ್ತಕರಿಗೆ ಚಿತ್ರಕಲೆಯ ಬಗ್ಗೆ ಮಾಹಿತಿ ಮತ್ತು ಕಲೆಗೆ ಸಂಬAಧಿಸಿದ ಹಲವು ಪ್ರಕಾರಗಳನ್ನು ನುರಿತ ಕಲಾವಿದರಿಂದ ಮಾಹಿತಿ ನೀಡಲಾಗುತ್ತಿದೆ, ಕಲಾ ಉತ್ಸವದಲ್ಲಿ ಪ್ರದರ್ಶನಗೊಂಡ ಕೆಲವು ಅಪರೂಪದ ಚಿತ್ರಗಳನ್ನು ಸಾರ್ವಜನಿಕರು ಬೆಲೆ ನಿಗಧಿಗೊಳಿಸಿ ಕೊಂಡುಕೊಳ್ಳಲಾಗುತ್ತಿದೆ. ಇದರಿಂದ ಚಿತ್ರಕಲೆಗಾರರಿಗೆ ಆರ್ಥಿಕವಾಗಿ ಸಹಾಯ ನೀಡಿದಂತಾಗುತ್ತದೆ ಎಂದು ಪ್ರದರ್ಶನ ವೀಕ್ಷಣೆ ಮಾಡಿದವರು ತಿಳಿಸುತ್ತಾರೆ. ಕಲಾ ಉತ್ಸವದಲ್ಲಿ ವಿವಿದ ಕಲಾವಿದರು ರಚಿಸಿರುವ ಚಿತ್ರಕಲೆಗಳು ಕಲಾ ರಸಿಕರನ್ನು ತುದಿಕಾಲ ಮೇಲೆ ನಿಲ್ಲುವಂತೆ ಮಾಡಿದೆ ಕಲಾ ಶಿಬಿರಕ್ಕೆ ಸಾರ್ವ ಜನಿಕರು ತಂಡೊಪ ತಂಡವಾಗಿ ಆಗಮಿಸಿ ಚಿತ್ರಕಲೆಗಾರರ ಚಿತ್ರಗಳನ್ನು ನೋಡಿ ಆನಂದಿಸುತ್ತಿದ್ದಾರೆ. ಬೆಂಗಳೂರಿನ ಕಲಾವಿದ ಮಂಜು ಗೌಡ ಅವರ ಕಲಾ ನೈಪುಣ್ಯತೆಗೆ ಕಲಾ ರಸಿಕರು ಮನಸೋತಿದ್ದಾರೆ.

ವೀರಾಜಪೇಟೆಯ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆಗಿರುವ ಎ.ಎಸ್. ಪೊನ್ನಣ್ಣ ಅವರು ಕಲಾ ಉತ್ಸವ ಶಿಬಿರಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.