ಮಡಿಕೇರಿ, ನ. ೨೦: ಬಿಳಿಗೇರಿಯಲ್ಲಿ ಪರದೇವರ ಗುಡಿಯ ಪುನರ್ಪ್ರತಿಷ್ಠಾ ಕಾರ್ಯಕ್ರಮ ತಾ. ೨೩ ಮತ್ತು ೨೪ರಂದು ನಡೆಯಲಿದೆ ಎಂದು ಶ್ರೀ ಪರದೇವರ ದೇವಾಲಯ ಸಮಿತಿ ಸದಸ್ಯ ಮಂಞÂÃರ ಕೆ. ಉಮೇಶ್ ಅಪ್ಪಣ್ಣ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಕ್ಷೇತ್ರ ತಂತ್ರಿಗಳಾದ ಉದಯ ಕುಮಾರ್ ಹುಲಿತಾಳ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ತಾ.೨೩ರಂದು ಸಂಜೆೆ ೬ ಗಂಟೆಯಿAದ ಸ್ಥಳ ಶುದ್ಧಿ, ಪಂಚಗವ್ಯ ಪುಣ್ಯಾಹ, ದೇವತಾ ಪ್ರಾರ್ಥನೆ, ವಾಸ್ತುಪೂಜೆ, ವಾಸ್ತು ಬಲಿ, ವಾಸ್ತು ಹೋಮ, ರಾಕ್ಷೆÆÃಘ್ನ, ಸುದರ್ಶನ ಹೋಮ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ತಾ.೨೪ರಂದು ಬೆಳಿಗ್ಗೆ ೭ ಗಂಟೆಯಿAದ ೬ ತೆಂಗಿನಕಾಯಿ ಗಣಪತಿ ಹೋಮ, ಸಪ್ತಪತಿ ಪಾರಾಯಣ, ನವಕ ಕಲಶ ಪ್ರತಿಷ್ಠೆ, ಕಲಶಪೂಜೆ, , ೮.೫೦ರಿಂದ ೧೦.೩೦ರವರೆಗೆ ಧನುರ್ ಲಗ್ನದಲ್ಲಿ ಮಲೆಯರ ಧರಣೇಶ್ ಅವರಿಂದ ಪರದೇವರ ಮೊಗ ಹಾಗೂ ಆಯುಧಗಳ ಪ್ರತಿಷ್ಠೆ, ದುರ್ಗಾ ಹೋಮ, ಕಲಶಾಭಿಷೇಕ, ಮಹಾಪೂಜೆ ಬಳಿಕ ಪ್ರಸಾದ ಹಾಗೂ ಅನ್ನದಾನ ನಡೆಯಲಿದೆ ಎಂದು ಉಮೇಶ್ ಅಪ್ಪಣ್ಣ ಮಾಹಿತಿಯಿತ್ತರು. ೨೦ ಲಕ್ಷ ವೆಚ್ಚದಲ್ಲಿ ಪರದೇವರ ದೈವಸ್ಥಾನ ಪುನರ್ನಿರ್ಮಾಣ ಗೊಂಡಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ದೇವಾಲಯ ತಕ್ಕರಾದ ಪುರುಷೋತ್ತಮ ರೈ, ಭಗವತಿ ದೇವಾಲಯ ಅಧ್ಯಕ್ಷರಾದ ಪರ್ಲ ಕೋಟಿ ಅಣ್ಣಿಮಾಚಯ್ಯ, ಪರದೇವರ ದೈವಸ್ಥಾನದ ಅಧ್ಯಕ್ಷ ಕೋಟೆರ ಶರಿ ಮುದ್ದ, ಕಾರ್ಯದರ್ಶಿ ಐರೀರ ಎನ್. ಬೋಪಯ್ಯ, ಸದಸ್ಯ ದೇವಜನ ಮೋಹನ್ ಉಪಸ್ಥಿತರಿದ್ದರು.