ಕುಶಾಲನಗರ, ನ. ೨೦: ಮೈಸೂರು ಕುಶಾಲನಗರ ರಾಷ್ಟಿçÃಯ ಹೆದ್ದಾರಿ ದ್ವಿಪಥ ರಸ್ತೆಯಿಂದ ಚತುಷ್ಪತ ಹಾಗೂ ಆರು ಪಥಗಳ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ದೊರೆತಿದ್ದು, ಪ್ರಾಥಮಿಕ ಹಂತದ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ.
ಕುಶಾಲನಗರ -ಮೈಸೂರು ರಾಷ್ಟಿçÃಯ ಹೆದ್ದಾರಿ ೨೭೫ರ ೧೨೪, ೪೮೮ ರಿಂದ ೨೨೩.೮೬ ಕಿ.ಮೀ. ತನಕ ನಾಲ್ಕು ಪಥ ಮತ್ತು ಕೆಲವೆಡೆ ಆರು ಪಥಗಳ ರಸ್ತೆ ನಿರ್ಮಾಣವಾಗಲಿದ್ದು, ಕಳೆದ ಕೆಲವು ದಿನಗಳಿಂದ ಹೆದ್ದಾರಿ ಎರಡು ಬದಿಗಳ ಕಾಡು ಪೊದೆ ತೆರವು ಮಾಡುವ ಕಾರ್ಯ ನಡೆಯುತ್ತಿದೆ.
ಗುತ್ತಿಗೆದಾರ ಕಂಪನಿಯೊAದರ ಅತ್ಯಾಧುನಿಕ ತಂತ್ರಜ್ಞಾನಗಳ ಮಣ್ಣು ಅಗೆಯುವ ಸೇರಿದಂತೆ ವಿವಿಧ ರೀತಿಯ ಬೃಹತ್ ಯಂತ್ರೋಪಕರಣಗಳು ಬೈಲುಕೊಪ್ಪೆ ಸಮೀಪದ ಪ್ರದೇಶದÀಲ್ಲಿ ಬೀಡು ಬಿಟ್ಟಿವೆ.
ಮೈಸೂರು - ಕುಶಾಲನಗರದ ೯೨.೩೩೫ ಕಿ.ಮೀ. ದೂರದ ರಸ್ತೆ ನೂತನ ಹೈವೇ ನಂತರ ೭೫.೯೦ ಕಿ.ಮೀ.ಗೆ ಇಳಿಯಲಿದ್ದು ೧೬ಕಿ.ಮೀ ಅಂತರ ಕಡಿಮೆಯಾಗಲಿದೆ ಮೈಸೂರಿನಿಂದ ಕುಶಾಲನಗರಕ್ಕೆ ನಿರ್ಮಾಣವಾಗುವ ರಸ್ತೆ ಜಿಲ್ಲೆಯ ಕುಶಾಲನಗರ, ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ ನಗರಗಳ ಹೊರವಲಯದಿಂದ ಬೈಪಾಸ್ ರಸ್ತೆಗಳ ಮೂಲಕ ನಿರ್ಮಾಣಗೊಳ್ಳಲಿದೆ ಎಂದು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೈಸೂರು ಕುಶಾಲನಗರ ನೂತನ ಹೈವೇ ನಿರ್ಮಾಣ ಹಿನ್ನೆಲೆಯಲ್ಲಿ ಈಗಾಗಲೇ ಮೈಸೂರು ಜಿಲ್ಲಾಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೆಸ್ಕಾಂ, ಅರಣ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಉನ್ನತ ಮಟ್ಟದಲ್ಲಿ ಸಭೆ ನಡೆಸುತ್ತಿವೆ.
ಹೈವೇ ಕಾಮಗಾರಿ ಸಂದರ್ಭ ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಈಗಾಗಲೇ ಪರಿಹಾರ ಹಣ ಕೆಲವೆಡೆ ನೀಡಲಾಗಿದೆ. ಬೈಲುಕೊಪ್ಪೆ ಸಮೀಪ ನೂತನ ಹೈವೇ ಟಿಬೆಟಿಯನ್ ನಿರಾಶ್ರಿತ ಶಿಬಿರದ ಮೂಲಕ ರಾಣಿ ಗೇಟ್ ದಾಟಿ ಗುಡ್ಡೆ ಹೊಸೂರು- ಸಿದ್ದಾಪುರ ರಸ್ತೆಯ ತೆಪ್ಪದಕಂಡಿ ಬಳಿ ಜಿಲ್ಲೆಯನ್ನು ಸಂಪರ್ಕಿಸಲಿದೆ. ಬಸವನಹಳ್ಳಿ ಆನೆಕಾಡು, ತನಕ ನಾಲ್ಕು ಪಥದ ರಸ್ತೆಗಳು ಗುಡ್ಡೆಹೊಸೂರು, ಮಡಿಕೇರಿ ರಸ್ತೆಯನ್ನು ಸಂಪರ್ಕಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೈಲುಕೊಪ್ಪ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ೧೦೨ ಮನೆಗಳು ಹೈವೇ ಕಾಮಗಾರಿ ಸಂದರ್ಭ ತೆರವುಗೊಳ್ಳಲಿದ್ದು ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಮೈಸೂರು ಕುಶಾಲನಗರ ಚತುಷ್ಪತ ರಸ್ತೆಯ ಕಾಮಗಾರಿಯನ್ನು ಮೂರು ಮಂದಿ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದ್ದು ಕಂಪ್ಲಾಪುರ ದಿಂದ ಕುಶಾಲನಗರ ತನಕ ಡಿವೈ ಉಪ್ಪರ್
(ಮೊದಲ ಪುಟದಿಂದ) ಕಂಪನಿಗೆ ಕಾಮಗಾರಿ ವಹಿಸಲಾಗಿದೆ. ಬೆಂಗಳೂರು ಮೈಸೂರು ಕಾರಿಡಾರ್ ರಸ್ತೆ ಲೋಕಾರ್ಪಣೆ ಸಂದರ್ಭ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರು ಕುಶಾಲನಗರ ಚತುಷ್ಪತ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದ್ದರು.
ಇದೀಗ ಕಾಮಗಾರಿ ಬಿರುಸಿನಿಂದ ನಡೆಯಲಿದ್ದು ರಸ್ತೆ ಕಾಮಗಾರಿಗೆ ಹಲವು ಯಂತ್ರೋಪಕರಣಗಳು ಈಗಾಗಲೇ ಬೈಲುಕುಪ್ಪೆ ಸಮೀಪ ಬೀಡುಬಿಟ್ಟಿವೆ.
ಡಿಸೆಂಬರ್ ಮೊದಲ ವಾರದಿಂದ ಕುಶಾಲನಗರ ಮೈಸೂರು ಚತುಷ್ಪಥ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿ ನಿರಂತರವಾಗಿ ನಡೆಯಲಿದೆ ಎಂದು ಕಂಪನಿಯ ವ್ಯವಸ್ಥಾಪಕ ಶರಣು ಹಳ್ಳಿ ಮಾಹಿತಿ ನೀಡಿದ್ದಾರೆ.