ಮಡಿಕೇರಿ, ನ. ೧೯: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಮೂರು ರಾಷ್ಟçಗಳಾದ ಬ್ಯಾಂಕಾಕ್, ಥೈಲ್ಯಾಂಡ್ ಮತ್ತು ಶ್ರೀಲಂಕಾ ನಡುವಿನ ಅಂತರರಾಷ್ಟಿçÃಯ ಸೆಸ್ಟೋಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ನಾಗಿ ಹೊರಹೊಮ್ಮಿದ ಭಾರತ ತಂಡಕ್ಕೆ ಚಿನ್ನದ ಪದಕ ಗಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತ ಸೆಸ್ಟೋಬಾಲ್ ತಂಡದ ನಾಯಕ, ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜ್‌ನ ವಿದ್ಯಾರ್ಥಿ ಮಹಮ್ಮದ್ ಶಾಹಿಲ್ ಉಸ್ಮಾನ್ ಅವರನ್ನು ಕಾಲೇಜು ವತಿ ಯಿಂದ ಸನ್ಮಾನಿಸಿ ಗೌರವಿಸಲಾಯಿತು.

ದ್ವಿತೀಯ ಬಿಬಿಎ ವಿದ್ಯಾರ್ಥಿಯಾಗಿರುವ ಮಹಮ್ಮದ್ ಶಾಹಿಲ್ ಉಸ್ಮಾನ್‌ರ ಕ್ರೀಡಾ ಸಾಧನೆಯ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಸಂಘದ ಸಂಚಾಲಕ ತಳವಾರ ಬಿ.ಹೆಚ್, ಪ್ರಾಣಿಶಾಸ್ತç ವಿಭಾಗದ ಮುಖ್ಯಸ್ಥ ಕೃಷ್ಣ ಎಂ.ಪಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ತಿಪ್ಪೇಸ್ವಾಮಿ ಈ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಮಹದೇವಯ್ಯ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶೈಲಶ್ರ‍್ರೀ, ಇಂಗ್ಲೀಷ್ ವಿಭಾಗದ ಸಹಾಯ ಪ್ರಾಧ್ಯಾಪಕ ಅಲೋಕ್ ಬಿಜೈ, ದೈಹಿಕ ಶಿಕ್ಷಣ ವಿಭಾಗದ ರಮೇಶ್ ಹಾಗೂ ಮಹಮ್ಮದ್ ಶಾಹಿಲ್ ಅವರ ತಂದೆ ಉಸ್ಮಾನ್ ಉಪಸ್ಥಿತರಿದ್ದರು.