ಸೋಮವಾರಪೇಟೆ, ನ. ೧೯: ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ವತಿಯಿಂದ ಪ್ರಸಕ್ತ ವರ್ಷ ಭರವಸೆಯ ಜೇಸಿ ಸಪ್ತಾಹ ೨೦೨೩ ಇಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ಆರಂಭಗೊAಡಿದ್ದು, ಸಪ್ತಾಹಕ್ಕೆ ಜೇಸಿ ಸಂಸ್ಥೆಯ ವಲಯಾಧ್ಯಕ್ಷೆ ಹೆಚ್.ಎಸ್. ಯಶಸ್ವಿನಿ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೇಸಿ ಸಂಸ್ಥೆಯಲ್ಲಿ ಸೇರಿದ ಸದಸ್ಯರಿಗೆ ಜ್ಞಾನಾಭಿವೃದ್ಧಿ, ವ್ಯವಹಾರದಲ್ಲಿ ಕೌಶಲ್ಯ ಸೇರಿದಂತೆ ಸಂಬAಧಗಳ ಬೆಸುಗೆಗೆ ನಾಂದಿಯಾಗುವ ಮೂಲಕ, ಸಂಪರ್ಕ ಬೆಳೆಯುತ್ತಿದ್ದು, ವ್ಯವಹಾರ ಬೆಳವಣಿಗೆಗೆ ಸಹಕಾರಿಯಾಗಿದೆ.
ದೇಶದಲ್ಲಿ ಜೇಸಿ ಸಂಸ್ಥೆಯಲ್ಲಿ ಸುಮಾರು ೫೫ ಸಾವಿರ ಸದಸ್ಯರಿದ್ದು, ಅವರ ಕುಟುಂಬದ ಹಿತ ಕಾಯಲು ಸಂಸ್ಥೆ ರೂ. ೧೦ ಲಕ್ಷದ ವಿಮಾ ಯೋಜನೆಯನ್ನು ಜಾರಿಗೆ ತರುವ ಮೂಲಕ ತುರ್ತು ಸಂದರ್ಭದಲ್ಲಿ ಸದಸ್ಯರ ಕುಟುಂಬದ ನೆರವಿಗೆ ಧಾವಿಸಿದೆ ಎಂದರು.
ನಮ್ಮ ಆಚಾರ ವಿಚಾರಗಳನ್ನು ನಮ್ಮ ಮಕ್ಕಳಲ್ಲೂ ಪೋಷಕರು ಬೆಳೆಸಬೇಕಿದೆ. ರಾಮಾಯಣ ಮಹಾಭಾರತದಲ್ಲಿನ ಪಾತ್ರಗಳ ವಿಶೇಷ ವೇಷಗಳನ್ನು ತಮ್ಮ ಮಕ್ಕಳಿಗೆ ಹಾಕಿಸಿ, ಆ ಪಾತ್ರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ನಮ್ಮಿಂದಾಗ ಬೇಕು. ಜೇಸಿ ಸಂಸ್ಥೆ ಯುವ ಜನರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವ ಮೂಲಕ ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನವರು ಸಂಸ್ಥೆಯ ಸದಸ್ಯತ್ವ ಪಡೆದು ಅದರ ಪ್ರಯೋಜನವನ್ನು ಪಡೆದುಕೊಳ್ಳ ಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಸಿ ಸಂಸ್ಥೆಯ ಅಧ್ಯಕ್ಷೆ ಎಂ.ಎ. ರುಬೀನಾ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಜೇಸಿ ಸಂಸ್ಥೆಯ ವತಿಯಿಂದ ಜೇಸಿ ಸಪ್ತಾಹ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಹಲವಾರು ಪ್ರತಿಭೆಗಳಿಗೆ ವೇದಿಕೆಯಾಗಿ ಕೆಲಸ ಮಾಡುತ್ತಿದೆ. ಒಂದು ವಾರಗಳ ಕಾಲ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ವೇದಿಕೆಯನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ನೆಲ್ಸನ್ ಡಿಸೋಜಾ, ಮುಂದಿನ ಸಾಲಿನ ಅಧ್ಯಕ್ಷ ವಸಂತ್, ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ ಲಕ್ಷಿö್ಮÃಕುಮಾರ್, ಜೆಜೆಸಿ ರಿಷಾ, ಕಾರ್ಯಕ್ರಮ ಯೋಜನಾಧಿಕಾರಿ ವಿನುತಾ ಸುದೀಪ್ ಇದ್ದರು.
ಇದೇ ಸಂದರ್ಭ ಮಕ್ಕಳಿಗೆ ನಡೆದ ಛದ್ಮವೇಷ ಸ್ಪರ್ಧಾ ಕಾರ್ಯಕ್ರಮದಲ್ಲಿ ಹಲವು ಮಕ್ಕಳು ವಿವಿಧ ವೇಷ ತೊಟ್ಟು ಜನರನ್ನು ರಂಜಿಸಿದರು.