ಮಡಿಕೇರಿ, ನ. ೧೯: ಕಾಲಗಳು ಉರುಳಿ ಆಧುನಿಕ ಯುಗಕ್ಕೆ ಕಾಲಿಟ್ಟರೂ ಮಹಿಳೆಯರ ಮೇಲಿನ ಶೋಷಣೆ ನಿಂತಿಲ್ಲ, ಸ್ಥಿತಿಯೂ ಬದಲಾಗಿಲ್ಲ ಎಂದು ನಿವೃತ್ತ ಪ್ರಾಂಶುಪಾಲೆ ಡಾ. ಮಂಡೇಪAಡ ಪುಷ್ಪ ಕುಟ್ಟಣ್ಣ ವಿಷಾದ ವ್ಯಕ್ತಪಡಿಸಿದರು.
ಕೇಶವ ಸ್ಮೃತಿ ಸಂವರ್ಧನ ಸಮಿತಿ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಆಯೋಜಿಸಿದ್ದ ‘ನಾರಿ ಶಕ್ತಿ ಮಹಿಳಾ ಸಂಗಮ' ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಾಧನೆ ಮಾಡಲು ಹತ್ತುಹಲವು ಘಟ್ಟ ದಾಟಿ, ನಿರಂತರ ಶ್ರಮವಹಿಸಬೇಕಾದ ಪರಿಸ್ಥಿತಿ ಇದೆ. ದೇಶದಲ್ಲಿ ಮಹಿಳಾ ರಕ್ಷಣೆಗೆ ಹಲವು ರೀತಿಯ ಕಾನೂನುಗಳಿವೆ. ಆದರೆ, ಸಮಾಜ ಪರಿಪೂರ್ಣವಾಗಿ ಬದಲಾವಣೆ ಯಾಗಿಲ್ಲ. ಪುರಾತನ, ಪ್ರಾಚೀನ ಕಾಲ, ಮಧ್ಯ ಯುಗದಲ್ಲಿದ್ದ ಸ್ಥಿತಿಗಿಂತ ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರ ಸ್ಥಿತಿ ಬದಲಾಗಿದೆ ಎನ್ನುತ್ತಾರೆ. ಆದರೆ, ಮಹಿಳೆಯರ ಮೇಲೆ ಈ ಕಾಲದಲ್ಲಿಯೂ ಶೋಷಣೆಯಾಗುತ್ತಿದೆ. ಸಾಮಾಜಿಕ ಪಿಡುಗು ನಮ್ಮನ್ನು ಕಾಡುತ್ತಿದೆ. ಒತ್ತಡ ಹೇರಲ್ಪಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬಹುಪಾತ್ರ ನಿರ್ವಹಿಸುತ್ತ, ಒತ್ತಡ ಬದುಕಿನಲ್ಲಿದ್ದರು ಇಡೀ ಸಮಾಜದ ಬೆಳವಣಿಗೆಗೆ ಮಹಿಳೆಯರು ಮಹತ್ತರ ಪಾತ್ರ ವಹಿಸಿದ್ದಾರೆ. ಆದರೆ, ಗೃಹಿಣಿ ಮಾಡುವ ಕೆಲಸಕ್ಕೆ ಮನ್ನಣೆ ಇಲ್ಲದಂತಾಗಿದೆ. ಮಕ್ಕಳಿಗೆ ಸಂಸ್ಕಾರ ಕಲಿಸಿ ಉತ್ತಮ ಪ್ರಜೆಯನ್ನಾಗಿ ಮಾಡುವ ಪ್ರಮುಖ ಜವಾಬ್ದಾರಿ ಸ್ತಿçÃಸಮೂಹದ ಮೇಲಿದೆ ಎಂದು ಹೇಳಿದರು.
ದಂಪತಿ ಹೊಂದಾಣಿಕೆಯಿAದ ಪರಸ್ಪರ ಪ್ರೋತ್ಸಾಹ ನೀಡುತ್ತ ಮುನ್ನಡೆದರೆ ಅದುವೆ ಸಮಾಜಕ್ಕೆ ನೀಡುವ ಕೊಡುಗೆಯಾಗಿದೆ. ಎಲ್ಲಾ ಕಡೆಗಳಿಂದ ಸಹಕಾರ ದೊರೆತರೆ ಮಹಿಳೆಯರ (ಮೊದಲ ಪುಟದಿಂದ) ಸಾಧನೆ ಸಾಧ್ಯ ಎಂದು ಪ್ರತಿಪಾದಿಸಿದರು. ‘ಭಾರತೀಯ ಚಿಂತನೆಯಲ್ಲಿ ಮಹಿಳೆ’ ವಿಷಯವಾಗಿ ವಿಚಾರ ಮಂಡಿಸಿದ ಸಾಮಾಜಿಕ ಕಾರ್ಯಕರ್ತೆ ವಸಂತಾ ಸ್ವಾಮಿ, ನಮ್ಮ ಕರ್ತವ್ಯಗಳ ಪ್ರಜ್ಞೆ ಇರಬೇಕು. ಸ್ತಿçÃಶಕ್ತಿಯ ಕೊಡುಗೆ ಅವಿಸ್ಮರಣೀಯ. ಮಹಿಳೆಯರು ಸಂಘಟಿತರಾಗಬೇಕು. ಸಮಾನಮನಸ್ಕರೊಂದಿಗೆ ಬೆರೆಯಬೇಕು. ಕಿರಿಯರಿಗೆ ಸಂದೇಶವನ್ನು ತಲುಪಿಸುವ ಕೆಲಸ ನಾವು ಮಾಡಬೇಕು. ಮುಂದಿನ ಪೀಳಿಗೆಯ ಹೆಜ್ಜೆ ಗಟ್ಟಿಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಹಸಂಚಾಲಕಿ ಅಲ್ಲಾರಂಡ ಬೀನಾ ಬೊಳ್ಳಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕಾರ್ಯಕ್ರಮ ಮಹಿಳೆಯರಿಗೆ ನ್ಯಾಯ ಕೊಡಿಸುವುದಾಗಿದೆ. ಗ್ರಾಮೀಣ, ಬುಡಕಟ್ಟು ಮಹಿಳೆಯರು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಒಂದುಗೂಡಿಸುವ ಕೆಲಸ ಕಾರ್ಯಕ್ರಮದಿಂದಾಗಿದೆ. ಎಲ್ಲಾ ಕೆಲಸವನ್ನು ಸಮರ್ಥವಾಗಿ ನಿಭಾಹಿಸುವ ಶಕ್ತಿ ಮಹಿಳೆಯರಿಗಿದೆ. ಆತ್ಮಶಕ್ತಿ ಮಹಿಳೆಯರಲ್ಲಿ ಹೆಚ್ಚಿದೆ. ಈ ಬಗ್ಗೆ ಜಾಗೃತಗೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಸೇವಾ ಮತ್ತು ಸಮರ್ಪಣ ಗುಣ ಮಹಿಳೆಯಲ್ಲಿರುತ್ತದೆ. ಭಾರತ ವಿಶ್ವಗುರುವಾಗಲು ಮಹಿಳೆಯರೂ ಕಾರಣ. ಶೋಷಣೆ, ಅಸಮಾನತೆ ಸವಾಲಿನ ನಡುವೆ ಮಹಿಳೆಯರು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದಾರೆ. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಜಿಲ್ಲೆಯ ವಿವಿಧೆಡೆಗಳಿಂದ ನೂರಾರೂ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಸಾಹಿತಿ ಜಲಾ ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕಿ ಪಟ್ಟಡ ರೀನಾ ಪ್ರಕಾಶ್ ಹಾಜರಿದ್ದರು. ಆರ್.ಎಸ್.ಎಸ್. ಪ್ರಮುಖರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು, ವಿವಿಧ ವಲಯಗಳನ್ನು ಪ್ರತಿನಿಧಿಸುವವರು ಉಪಸ್ಥಿತರಿದ್ದರು. ರೀನಾ ಸ್ವಾಗತಿಸಿ, ಪುಷ್ಪಾ ನರೇಶ್ ನಿರೂಪಿಸಿ, ಸವಿತಾ ರಾಕೇಶ್ ವಂದಿಸಿದರು.