ಮಡಿಕೇರಿ, ನ. ೨೦: ಮಾದಕ ವಸ್ತುವಾದ ಎಂ.ಡಿ.ಎA.ಎ. ಅನ್ನು ಮಾರಾಟ ಮಾಡಲು ಯತ್ನಿಸಿದ ಈರ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಂಜಿಲ ಗ್ರಾಮದ ನಿವಾಸಿ ನೌಫಲ್ (೨೫), ಎಮ್ಮೆಮಾಡು ಪೈಸಾರಿ ನಿವಾಸಿ ಸಾಧಿಕ್ (೩೨) ಬಂಧಿತ ಆರೋಪಿಗಳು. ಇವರಿಂದ ೭.೪೬ ಗ್ರಾಂ ತೂಕದ ಎಂ.ಡಿ.ಎA.ಎ. ವಶಪಡಿಸಿಕೊಳ್ಳಲಾಗಿದೆ. ತಾ. ೧೯ ರಂದು ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಮಾದಕ ವಸ್ತು ಮಾರಾಟದ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಸೆನ್ ಪೊಲೀಸ್ ಠಾಣೆ ಉಪನಿರೀಕ್ಷಕ ರಾಘವೇಂದ್ರ ನೇತೃತ್ವದ ತಂಡ ದಾಳಿ ನಡೆಸಿ ಮಾಲು ಸಹಿತ ಆರೋಪಿಗಳನ್ನು ಬಂಧಿಸಿದೆ.