ಶಕ್ತಿ ವರದಿ ಫಲಶ್ರುತಿ
*ಸಿದ್ದಾಪುರ, ನ. ೨೦ : ಕುಶಾಲನಗರದಿಂದ ಸಿದ್ದಾಪುರಕ್ಕೆ ತೆರಳುವ ರಂಗಸಮುದ್ರದ ಕಬ್ಬಿಣ ಸೇತುವೆ, ಬಾಳುಗೋಡು, ಬಸವೇಶ್ವರ ದೇವಾಲಯ ದವರೆಗಿನ ರಸ್ತೆಗೆ ಕೊನೆಗೂ ದುರಸ್ತಿ ಭಾಗ್ಯ ದೊರೆತ್ತಿದೆ. ಸಂಪೂರ್ಣವಾಗಿ ಹದಗೆಟ್ಟಿದ್ದ ರಸ್ತೆ ಅವ್ಯವಸ್ಥೆಯ ಬಗ್ಗೆ ‘ಶಕ್ತಿ’ ಇತ್ತೀಚೆಗಷ್ಟೆ ವರದಿ ಮಾಡಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿತ್ತು.
ಇದಕ್ಕೆ ತಕ್ಷಣ ಸ್ಪಂದಿಸಿದ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಗುಂಡಿಗಳನ್ನು ಮುಚ್ಚಿ ಡಾಂಬರೀಕರಣಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ವರದಿ ಪ್ರಕಟಿಸಿ ರಸ್ತೆ ದುರಸ್ತಿಯಾಗಲು ಸಹಕರಿಸಿದ “ಶಕ್ತಿ”ಗೆ ಸ್ಥಳೀಯ ನಿವಾಸಿ ಮಾಚಯ್ಯ ಅವರು ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಗ್ರಾ.ಪಂ ವ್ಯಾಪ್ತಿಯಲ್ಲಿರುವ ಈ ಹೆದ್ದಾರಿ ಆಡಳಿತ ವ್ಯವಸ್ಥೆಯ ನಿರ್ಲಕ್ಷö್ಯಕ್ಕೆ ಒಳಪಟ್ಟಿತ್ತು. ರಸ್ತೆ ಸಂಪೂರ್ಣವಾಗಿ ಹೊಂಡ, ಗುಂಡಿಗಳಾಗಿದ್ದು, ದ್ವಿಚಕ್ರ ವಾಹನ ಚಾಲಕರು ಹಾಗೂ ಪಾದಾಚಾರಿಗಳು ಬಿದ್ದು ಆಸ್ಪತ್ರೆ ಸೇರಿದ ಘಟನೆಯೂ ನಡೆದಿತ್ತು. ಈ ಬಗ್ಗೆ ಶಕ್ತಿ ವರದಿ ಮಾಡಿತ್ತು.