ಮಡಿಕೇರಿ, ನ. ೧೯: ಕಾಫಿ ಮಂಡಳಿ ತಾಂತ್ರಿಕ ಮೌಲ್ಯಮಾಪನ ಕೇಂದ್ರ ಅರುವತ್ತೊಕ್ಲು ಗೋಣಿಕೊಪ್ಪಲುವಿನಲ್ಲಿ ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಈ ಸಂಸ್ಥೆಯ ಪ್ರಭಾರಿ ಹಿರಿಯ ಸಂಪರ್ಕ ಅಧಿಕಾರಿಯಾದ ವಿ. ಶ್ರೀರಮಣ ಅವರು ನೆರವೇರಿಸಿದರು. ಆ ದಿವಸ ಕಚೇರಿಯ ಪರಿಸರವನ್ನ ಶುಚಿತ್ವ ಮಾಡಿದ ಬಳಿಕ ಸರಕಾರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ ಇಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛತೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಸ್ವಚ್ಛತಾ ಪರಿಕರಗಳನ್ನು ಸರಕಾರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ ಹಾಗೂ ಗೋಣಿಕೊಪ್ಪಲುವಿನ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು. ವಿಕಲಚೇತನ ಮಕ್ಕಳ ಶೌಚಾಲಯವನ್ನ ದುರಸ್ತಿಪಡಿಸಲಾಯಿತು.
ಸರಕಾರಿ ಕಾಲೇಜು ಪಾಲಿಬೆಟ್ಟ ಇಲ್ಲಿ ತಾಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಲಾಯಿತು ಹಾಗೂ ಸಮಾರೋಪ ಸಮಾರಂಭ ಅದೇ ದಿವಸ ಸಂಸ್ಥೆಯ ಉಪನಿರ್ದೇಶಕರಾದ ಡಾ|| ಕೆ. ಶ್ರೀದೇವಿ ಇವರ ನೇತೃತ್ವದಲ್ಲಿ ಹಿರಿಯ ಸಂಪರ್ಕ ಅಧಿಕಾರಿ ವಿ.ಶ್ರೀರಮಣ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳಿಗೆ ಮಂಡಳಿಯಿAದ ದೊರಕುವ ವಿದ್ಯಾರ್ಥಿ ವೇತನದ ಬಗ್ಗೆ ವಿವರಿಸಿದರು. ಧನ್ಯಾ ಜಯರಾಮ್ ಉಪಸ್ಥಿತರಿದ್ದರು.