ವೀರಾಜಪೇಟೆ, ನ. ೧೯: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಹಾಕಿ ಪಂದ್ಯಾಟದ ಫೈನಲ್ಸ್ನಲ್ಲಿ ವೀರಾಜಪೇಟೆ ಕೊಡವ ಸಮಾಜ ಅಮ್ಮತ್ತಿ ಕೊಡವ ಸಮಾಜವನ್ನು ೨-೧ ಗೋಲುಗಳಿಂದ ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಅಮ್ಮತ್ತಿ ಕೊಡವ ಸಮಾಜ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಅಂತರರಾಷ್ಟಿçÃಯ ನಿಯಮದಂತೆ ಮೊದಲ ಕ್ವಾರ್ಟರ್ನ ೧೦ ನೇ ನಿಮಿಷದಲ್ಲಿ ಅಮ್ಮತ್ತಿ ತಂಡದ ಇಂಡಿಯನ್ ಕ್ಯಾಂಪರ್ ಐನಂಡ ಆಕಾಶ್ ಪೂವಣ್ಣ ಆಕರ್ಷಕ ಗೋಲು ದಾಖಲಿಸಿ ಮುನ್ನಡೆ ಕಾಯ್ದುಕೊಂಡರು. ೧೮ನೇ ನಿಮಿಷದಲ್ಲಿ ಅಮ್ಮತ್ತಿ ಆಟಗಾರರು ಡಿ ಆವರಣದಲ್ಲಿ ಮಾಡಿದ ತಪ್ಪಿಗೆ ತೀರ್ಪುಗಾರ ಚಂದಪAಡ ಆಕಾಶ್ ವೀರಾಜಪೇಟೆ ತಂಡಕ್ಕೆ ಪೆನಾಲ್ಟಿ ಸ್ಟೊçÃಕ್ ನೀಡಿದರು. ವೀರಾಜಪೇಟೆ ತಂಡದ ಪರ ರೈಲ್ವೇಸ್ ಆಟಗಾರ ಚೇಂದAಡ ಮೋಕ್ಷಿತ್ ಚೆಂಡನ್ನು ಹೊರ ತಳ್ಳಿದರು. ಆಟದ ಸಂಪೂರ್ಣ ಹಿಡಿತ ಸಾಧಿಸಿದ ಅಮ್ಮತ್ತಿ ಆಟಗಾರರು ೫೦ನೇ ನಿಮಿಷದಲ್ಲಿ ಡಿ ಆವರಣದಲ್ಲಿ ಮಾಡಿದ ತಪ್ಪಿಗೆ ತೀರ್ಪುಗಾರ ನೆಲ್ಲಮಕ್ಕಡ ಪವನ್ ವೀರಾಜಪೇಟೆ ತಂಡಕ್ಕೆ ಪೆನಾಲ್ಟಿ ಕಾರ್ನರ್ ನೀಡಿದರು. ಬಹುತೇಕ ರಾಜ್ಯ, ರಾಷ್ಟç ಹಾಗೂ ಅಂತರರಾಷ್ಟಿçÃಯ ಆಟಗಾರರನ್ನೊಳಗೊಂಡ ವೀರಾಜಪೇಟೆ ತಂಡದ ಸೆಂಟ್ರಲ್ ಎಕ್ಸೆöÊಸ್ ಆಟಗಾರ ಚೆಪ್ಪುಡಿರ ಸೋಮಣ್ಣ ಗೋಲಾಗಿ ಪರಿವರ್ತಿಸಿದರು. ೫೨ ನೇ ನಿಮಿಷದಲ್ಲಿ ವೀರಾಜಪೇಟೆ ತಂಡದ ಪರ ಚೇಂದAಡ ಮೋಕ್ಷಿತ್ ಮತ್ತೊಂದು ಗೋಲು ಬಾರಿಸುವುದರ ಮೂಲಕ ಮುನ್ನಡೆ ಕಾಯ್ದುಕೊಂಡು ನಿಗದಿತ ಅವಧಿಯಲ್ಲಿ ತಂಡಕ್ಕೆ ಜಯ ತಂದುಕೊಟ್ಟರು. ಅಮ್ಮತ್ತಿ ತಂಡದ ಗೋಲ್ ಕೀಪರ್ ಕೊಳುವಂಡ ಚಂಗಪ್ಪ ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ತೀರ್ಪುಗಾರರಾಗಿ ರಾಷ್ಟಿçÃಯ ತೀರ್ಪುಗಾರರಾದ ಚಂದಪAಡ ಆಕಾಶ್, ನೆಲ್ಲಮಕ್ಕಡ ಪವನ್, ತಾಂತ್ರಿಕ ಸಮಿತಿಯಲ್ಲಿ ಕರವಂಡ ಅಪ್ಪಣ್ಣ, ಕುಪ್ಪಂಡ ದಿನನ್, ತಾಂತ್ರಿಕ ನಿರ್ದೇಶಕರಾಗಿ ಕೋಡಿಮಣಿಯಂಡ ಗಣಪತಿ ಕಾರ್ಯ ನಿರ್ವಹಿಸಿದರು. ಹಾಕಿ ಪಂದ್ಯಾಟ ಮುಗಿದ ಬಳಿಕ ನಡೆದ ಪುರುಷರ ಹಗ್ಗಜಗ್ಗಾಟದ ಫೈನಲ್ಸ್ನಲ್ಲಿ ನಾಪೋಕ್ಲು ಕೊಡವ ಸಮಾಜ ತಂಡ ವೀರಾಜಪೇಟೆ ಕೊಡವ ಸಮಾಜ ತಂಡವನ್ನು ಮಣಿಸಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ನಾಪೋಕ್ಲು ಕೊಡವ ಸಮಾಜ ಬಾಳೆಲೆ ಕೊಡವ ಸಮಾಜ ತಂಡವನ್ನು ಪರಾಭವಗೊಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಮಾದರಿ ಕ್ಷೇತ್ರವಾಗಿಸುವೆ - ಪೊನ್ನಣ್ಣ
ಕೊಡಗು ಹಾಗೂ ಕೊಡವ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ತಾನು ಸಿದ್ಧನಿದ್ದೇನೆ. ವೀರಾಜಪೇಟೆ ಕ್ಷೇತ್ರವನ್ನು ರಾಜ್ಯದಲ್ಲಿಯೇ
ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಿದ್ದೇನೆ ಎಂದು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಫೈನಲ್ಸ್ ಹಾಕಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದಿಂದ ಬಾಳುಗೋಡು ಕೊಡವ ಸಮಾಜಕ್ಕೆ ಮಂಜೂರಾದ ೧೦ ಕೋಟಿ ಅನುದಾನ ಸಂಬAಧ ಮೈದಾನದಲ್ಲಿ ನಡೆದ ಕಾಮಗಾರಿಯಲ್ಲಿ ತಾಂತ್ರಿಕ ಅಡಚಣೆ ಆದ
ಕಾರಣ ವಿಳಂಭವಾಗಿದೆ.
(ಮೊದಲ ಪುಟದಿಂದ) ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಕ್ರೀಡೆಗೆ ಹೆಚ್ಚಿನ ಸಹಕಾರ ನೀಡುವುದಾಗಿ ಹೇಳಿದರು.
ಈ ಸಂದರ್ಭ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಉಪಾಧ್ಯಕ್ಷರುಗಳಾದ ಮಾಳೇಟಿರ ಅಭಿಮನ್ಯು ಕುಮಾರ್, ಮಂಡುವAಡ ಮುತ್ತಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚೆರಿಯಪಂಡ ಕಾಶಿಯಪ್ಪ, ಪೊಮ್ಮಕ್ಕಡ ಒಕ್ಕೂಟದ ರೀಟಾ ಅಚ್ಚಪ್ಪ ಮತ್ತು ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ
ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಕೊಡವ ಸಮಾಜ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಉಮ್ಮತಾಟ್ ಪೈಪೋಟಿಯಲ್ಲಿ ಬೆಂಗಳೂರು ಕೊಡವ ಸಮಾಜ (ಪ್ರ), ಮಡಿಕೇರಿ ಕೊಡವ ಸಮಾಜ (ದ್ವಿ), ಮೈಸೂರು ಕೊಡವ ಸಮಾಜ (ತೃ), ಕೋಲಾಟ್ನಲ್ಲಿ ಬೆಂಗಳೂರು ಕೊಡವ ಸಮಾಜ (ಪ್ರ), ಮೈಸೂರು ಕೊಡವ ಸಮಾಜ (ದ್ವಿ), ತಾವಳಗೇರಿ ಟಿ.ಶೆಟ್ಟಿಗೇರಿ ಕೊಡವ ಸಮಾಜ (ತೃ), ಬೊಳಕಾಟ್ನಲ್ಲಿ ಬೆಂಗಳೂರು ಕೊಡವ ಸಮಾಜ (ಪ್ರ), ನಾಪೋಕ್ಲು ಕೊಡವ ಸಮಾಜ (ದ್ವಿ), ಮೈಸೂರು ಕೊಡವ ಸಮಾಜ (ತೃ), ಬಾಳೋಪಾಟ್ನಲ್ಲಿ ಬೆಂಗಳೂರು ಕೊಡವ ಸಮಾಜ(ಪ್ರ), ಮೂರ್ನಾಡು ಕೊಡವ ಸಮಾಜ(ದ್ವಿ), ಮೈಸೂರು ಕೊಡವ ಸಮಾಜ (ತೃ), ತಾಲಿಪಾಟ್ ವೀರಾಜಪೇಟೆ ಕೊಡವ ಸಮಾಜ (ಪ್ರ), ಬೆಂಗಳೂರು ಕೊಡವ ಸಮಾಜ (ದ್ವಿ), ಮೈಸೂರು ಕೊಡವ ಸಮಾಜ (ತೃ), ಸಮ್ಮಂದ ಅಡಕುವೊ ಬೆಂಗಳೂರು ಕೊಡವ ಸಮಾಜ (ಪ್ರ), ನಾಪೋಕ್ಲು ಕೊಡವ ಸಮಾಜ (ದ್ವಿ), ಮೈಸೂರು ಕೊಡವ ಸಮಾಜ (ತೃ), ಪರೆಯಕಳಿ ಬೆಂಗಳೂರು ಕೊಡವ ಸಮಾಜ (ಪ್ರ), ಪೊನ್ನಂಪೇಟೆ ಕೊಡವ ಸಮಾಜ (ದ್ವಿ), ಶ್ರೀಮಂಗಲ ಕೊಡವ ಸಮಾಜ (ತೃ), ಸಮಗ್ರ ಒಟ್ಟು ೮ ಅಂಕಗಳೊAದಿಗೆ ಬೆಂಗಳೂರು ಕೊಡವ ಸಮಾಜ (ಪ್ರ), ಮೈಸೂರು ಕೊಡವ ಸಮಾಜ (ದ್ವಿ), ನಾಪೋಕ್ಲು ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಜಂಟಿಯಾಗಿ ತೃತೀಯ ಸ್ಥಾನ ಪಡೆದುಕೊಂಡಿತು. ಕಾರ್ಯಕ್ರಮದ ವೀಕ್ಷಕ ವಿವರಣೆಯನ್ನು ಮಾಳೇಟಿರ ಶ್ರೀನಿವಾಸ್ ಹಾಗೂ ಚೆಪ್ಪುಡಿರ ಕಾರ್ಯಪ್ಪ ನೆರವೇರಿಸಿದರು.
-ಪಳೆಯಂಡ ಪಾರ್ಥ ಚಿಣ್ಣಪ್ಪ